ಭಾನುವಾರ, ಡಿಸೆಂಬರ್ 20, 2009

ಚಿಂತ್ಯಾಕೆ ಮಾಡತಿದ್ದಿ...


ನೀವು ಕೆಲವರನ್ನು ಗಮನಿಸಿದ್ದೀರಾ? ಅವರನ್ನು ನೋಡಿದರೆ ಯಾವಾಗಲು ಏನೋ ಯೋಚಿಸುತ್ತಿರುವಂತೆ ಕಾಣುತ್ತದೆ. ಮುಖ ನೋಡಿ ನಕ್ಕರೂ ತಿರುಗಿ ನಗುವಷ್ಟು ಸಮಾಧಾನ ಇರುವುದಿಲ್ಲ... ಜಗತ್ತಿನ ಎಲ್ಲಾ ಸಮಸ್ಯೆಯು ತಮಗೇ ಬಂದಿರುವ ಹಾಗೇ ಆಡುತ್ತಿರುತ್ತಾರೆ...ಎಲ್ಲರ ಮೇಲೆ ಸಿಡುಕುವುದು, ತಾವೇ

ಜೀವನದಲ್ಲಿ ಚಿಂತೆ ಎಂಬುದು ಯಾರಿಗಿಲ್ಲ ಹೇಳಿ? ಪ್ರತಿಯೊಬ್ಬರಿಗೂ ಚಿಂತೆ ಇದ್ದೇ ಇರುತ್ತದೆ. ಒಬ್ಬರಿಗೆ ಒಂದೊಂದು ಚಿಂತೆ. ಅವರವರಿಗೆ ಇರುವ ತೊಂದರೆಯ ಬಗ್ಗೆ, ಅನಾನುಕೂಲಗಳ ಬಗ್ಗೆ ಪ್ರತಿಯೊಬ್ಬನಿಗೂ ಚಿಂತೆ ಇರುತ್ತದೆ. ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ .....ಅವರ ಮದುವೆ ಮಾಡಬೇಕು ಎನ್ನುವುದು ಪಾಲಕರ ಚಿಂತೆಯಾದರೆ, ಮಕ್ಕಳಿಗೆ ತಮ್ಮ ಮದುವೆಯಾಗೋ ಹುಡುಗ\ಹುಡುಗಿ ಹೇಗಿರಬಹುದು ಎನ್ನುವ ಚಿಂತೆ... ಕಷ್ಟಪಟ್ಟು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗೆ ಮುಂದಿನ ಫೀಸ್ ಹೇಗೆ ಕೊಡುವುದು ಎನ್ನುವ ಚಿಂತೆ... ಮನೆ ಬಿಟ್ಟು ಹೋದ ಗಂಡ ಇನ್ನೂ ಹಿಂದಿರುಗಲಿಲ್ಲ ಎನ್ನುವುದು ಅವನಿಗಾಗಿ ಕಾದು ಕುಳಿತ ಹೆಂಡತಿಯ ಚಿಂತೆ.... ಹೀಗೆ ಒಂದಿಲ್ಲೊಂದು ಚಿಂತೆಯಲ್ಲಿಯೇ ನಮ್ಮ ಜೀವನವನ್ನು ಕಳೆದುಬಿಡುತ್ತೆವಲ್ಲವೇ? ಎಷ್ಟೋ ಇಷ್ಟ ಪಟ್ಟು ಪ್ರೀತಿಸಿದ ವ್ಯಕ್ತಿ ಒಂದು ದಿನ ಬಿಟ್ಟು ಹೋಗಿರುತ್ತಾರೆ.... ತುಂಬಾ ನಂಬಿಕೆ ಇತ್ತ ಗೆಳತಿ ಮೋಸ ಮಾಡಿರುತ್ತಾಳೆ... ಸಾಲ ಮಾಡಿ ಶುರು ಮಾಡಿದ ಕಸುಬು ಕೈಗೆ ಹತ್ತಿರುವುದಿಲ್ಲ ........ ಎಷ್ಟೇ ಕೆಲಸ ಮಾಡಿದರೂ ಬಡ್ತಿ ಸಿಕ್ಕಿರುವುದಿಲ್ಲ..... ಒಂದೇ ,ಎರಡೇ ಚಿಂತೆ ಮಾಡುತ್ತೀನಿ ಎಂದರೆ ಸಿಗುತ್ತದೆ ಸಾವಿರಾರು ವಿಷಯಗಳು.. ಬೇಸರಿಸಿಕೊಳ್ಳುವುದು,ಅವರಿಗೆ ಅವರ ಮೇಲೆ ಕೋಪವಾ? ಬೇಸರವ?ಗೊತ್ತಿಲ್ಲ...


" ಹೊಟ್ಟೆ ತುಂಬಿದವನಿಗೆ ಹೊಟ್ಟೆ ಹೊರುವ ಚಿಂತೆ,
ಹೊಟ್ಟೆ ಹಸಿದವನಿಗೆ ಹೊಟ್ಟೆ ಹೊರೆವ ಚಿಂತೆ"

ಆದರೆ ಒಂದಂತೂ ನಿಜ ಹೀಗೆ ಯೋಚಿಸುವುದರಿಂದ ಯಾವುದೇ ಪ್ರಯೋಜನವಿಲ್ಲ....ನಮ್ಮನ್ನು ನಾವು ಇನ್ನಷ್ಟು ಶಿಕ್ಷಿಸಿಕೊಳ್ಳುತ್ತೇವೆ ...

ಒಂದು ಗಾದೆ ಮಾತಿದೆಯಲ್ಲ "ಚಿತೆ ಹೆಣವನ್ನು ಸುಟ್ಟರೆ, ಚಿಂತೆ ಬದುಕಿರುವವನನ್ನು ಸುಡುತ್ತದೆ " ಎಂದು.


ಅದಕ್ಕೆ ನಾನು ಹೇಳುವುದೆಂದರೆ , ಚಿಂತೆ ಮಾಡಿ ಯಾವುದೇ ಉಪಯೋಗವಿಲ್ಲ. ಅದರ ಬದಲು ಬಂದಿರುವ ಸಮಸ್ಯೆಗೆ ಪರಿಹಾರ ಹುಡುಕುವುದರಲ್ಲೇ ಇರುವುದು ಜಾಣತನ.. ಜೀವನದಲ್ಲಿ ಎಷ್ಟೋ ಸಿಹಿ-ಕಹಿ ಘಟನೆಗಳಾಗಿರುತ್ತವೆ. ಕಹಿ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಚಿಂತೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ .... ಏನು ನಡಿಬೇಕೋ ಅದು ಆಗೇ ಆಗುತ್ತದೆ. ನಾವು ಚಿಂತೆ ಮಾಡಿದರೂ ಅಷ್ಟೇ ಬಿಟ್ಟರು.. ಇರುವಷ್ಟು ದಿನ ನಗುನಗುತ ಜೀವನ ಸಾಗಿಸುವುದನ್ನು ಕಲಿಯೋಣ.. ನನ್ನ ಕೆಲವು ಸ್ನೇಹಿತರಿಗೆ ಹೇಳಿದ್ದೀನಿ ಯೋಚನೆ ಮಾಡಬೇಡಿ ಎಲ್ಲಾ ಸರಿ ಹೋಗುತ್ತದೆ ಎಂದು..ಒಂದು ವೇಳೆ ಹಾಗಾದರೆ??ಹೀಗಾದರೆ?... ಎಂದು ಅನಾವಶ್ಯಕವಾಗಿ ಯೋಚಿಸುತ್ತಾರೆ. ಕೊನೆಗೆ ನೋಡಿದರೆ ಎಲ್ಲವು ಒಳ್ಳೇದೆ ಆಗಿರುತ್ತದೆ. ಯೋಚಿಸಿ ಮನಸು ಹಾಳುಮಾಡಿಕೊಂಡಿದ್ದೆ ಬಂತು !!!!.....

"ಬಂದದ್ದು ಬರಲಿ, ಗೋವಿಂದನ ದಯೆ ಇರಲಿ" ಎಂಬ ಮಾತಿನಂತೆ ಬದುಕಿನಲ್ಲಿ ಮುಂದೆ ಸಾಗೋಣ. ಅನಾವಶ್ಯಕವಾಗಿ ಯೋಚಿಸಿ ಮನಸ್ಸನ್ನು ಹಾಳುಮಾಡಿ ಕೊಳ್ಳುವುದು ಬೇಡ.ಜೀವನವನ್ನು ಸಂತೋಷದಿಂದ ಸಾಗಿಸೋಣ. "Hope for the best, prepare for the worst". ಮನುಷ್ಯನ ಇಂಥ ಚಿಂತೆ ಮಾಡುವಂಥ ಬುದ್ದಿಯನ್ನು ಕಂಡೇ ಹಿರಿಯರು ಬಹುಷಃ ಹಾಡಿದ್ದೇನೋ... "ಚಿಂತ್ಯಾಕೆ ಮಾಡತಿದ್ದಿ ಚಿನ್ಮಯನಿದ್ದಾನೆ
"ಎಂದು....

17 ಕಾಮೆಂಟ್‌ಗಳು:

sunaath ಹೇಳಿದರು...

ದಿವ್ಯಾ,
ಖರೇ ಅದsರೀ ನೀವು ಹೇಳೋದು. ಪುರಂದರದಾಸರು ತಮ್ಮ ಒಂದು ಹಾಡಿನಲ್ಲಿ ಇಂತಹದೇ ಮಾತೊಂದನ್ನು ಹೇಳ್ಯಾರ್ರೀ.
"ಮಕ್ಕಳಿರದಿರೆ ಚಿಂತೆ,
ಮಕ್ಕಳಿದ್ದರು ಚಿಂತೆ!"

Venkatakrishna.K.K. ಹೇಳಿದರು...

ಚಿ೦ತೆಯ ಬಗ್ಗೆ ನನ್ನದೂ ಒ೦ದು ಬರೆಹ ಇದೆ.
ಓದಿ.ಪ್ರತಿಕ್ರೀಯಿಸಿ...
http://sharadabooks.blogspot.com

------------------------------------

ಸವಿಗನಸು ಹೇಳಿದರು...

ದಿವ್ಯ,
ನೀವೇಳೋದು ನಿಜ....ಸುಮ್ನೆ ಚಿಂತೆ ಯಾಕೆ ಮಾಡಬೇಕು....
"ಎನಾದರೂನೂ ಮುಂದೆ ಸಾಗು ನೀ....
ಬಯಸಿದ್ದೆಲ್ಲಾ ಸಿಗದು ಬಾಳಲಿ....."
ಹಾಡಿನ ಸಾಲುಗಳ ಹಾಗೆ ಇದ್ದುಬಿಟ್ಟಿದ್ದೀನಿ ಈಗ ನಾನು......
ಚಿಂತೆ ಮಾಡುವವರ ಚಿಂತೆ ಓಡಿಸಿದ್ದೀರ....
ಚೆಂದದ ಬರಹ....
ಮಹೇಶ್!

ಶಿವಪ್ರಕಾಶ್ ಹೇಳಿದರು...

ಇನ್ಮೇಲೆ ಚಿಂತೆ ಮಾಡೋಲ್ಲ ರೀ.. :)

ಸುಬ್ರಹ್ಮಣ್ಯ ಹೆಗಡೆ ಹೇಳಿದರು...

chennagide....

ಸಾಗರದಾಚೆಯ ಇಂಚರ ಹೇಳಿದರು...

ದಿವ್ಯಾ ನಿಜ,
ಕೆಲವರ ಮುಖವೇ ಹಾಗೆ
ಒಳ್ಳೆಯ ಬರಹ

ಗೌತಮ್ ಹೆಗಡೆ ಹೇಳಿದರು...

chinte maadakilla bidi.neev heldange irteve.:)

ಮನಸು ಹೇಳಿದರು...

nice one!!!

ಚುಕ್ಕಿಚಿತ್ತಾರ ಹೇಳಿದರು...

ಚಿ೦ತೆ ಬಗೆಗಿನ ಲೇಖನ ಚಿ೦ತನೆಗೆ ಯೋಗ್ಯವಾಗಿದೆ.ಥ್ಯಾ೦ಕ್ಸ್.

ವಿ.ರಾ.ಹೆ. ಹೇಳಿದರು...

ಹ್ಮ್ಮ್.. ನಾನೂ ಏನೋ ಹೀಂಗೆ ಚಿಂತೆಯಲ್ಲಿ ಬಿದ್ದಿದ್ದೆ. ಇದನ್ನು ಓದಿದ ಮೇಲೆ ಆ ಚಿಂತೆ ಬಿಡೋಣ ಅನ್ನಿಸುತ್ತಿದೆ:)thanx

vijayhavin ಹೇಳಿದರು...

nice one!

ಸೀತಾರಾಮ. ಕೆ. ಹೇಳಿದರು...

nice article Divya

Ramesha ಹೇಳಿದರು...

good one!!

ಸುಧೇಶ್ ಶೆಟ್ಟಿ ಹೇಳಿದರು...

ನಾನಿನ್ನು ಚಿ೦ತೆ ಮಾಡುವುದನ್ನು ನಿಲ್ಲಿಸಿಬಿಡುತ್ತೇನೆ ದಿವ್ಯಾ ಅವರೇ :)

Divya Hegde ಹೇಳಿದರು...

ಸ್ನೇಹಿತರೇ,
ನಿಮ್ಮ ಪ್ರೋತ್ಸಾಹ ಮತ್ತು ನನ್ನ ಬ್ಲೋಗಿನೆಡೆಗೆ ನಿಮಗಿರುವ ಆಸಕ್ತಿಗೆ ನಾನೆಂದೂ ಚಿರಋಣಿ...
ಎಲ್ಲರೂ ಇನ್ನೂ ಮುಂದೆ ಚಿಂತೆ ಮಾಡಲ್ಲ ಅಂತ ಹೇಳಿದ್ದೀರ ...ಖುಷಿ ಆಯ್ತು ನನಗೆ ...
ನನ್ನ ಲೇಖನ ನೋಡಿ ನಿಮಗಿನ್ನು ಮುಂದೆ ಚಿಂತೆ ಮಾಡದೆ ಬದುಕಬೇಕು ಎನಿಸಿದ್ದರೆ ನನಗೆ ಅದೇ ಸಂತೋಷ...
ಧನ್ಯವಾದಗಳು....:-)

Subrahmanya Bhat ಹೇಳಿದರು...

ಲೇಟ್ ಕಾಮೆಂಟ್ ನಂದು. ಬೇಜಾರ್ ಮಾಡ್ಕೊಬೇಡಿ.!! ಚಿಂತೆ ಅಂತೂ ಮಾಡ್ಲೇ ಬೇಡಿ...ಏಕಂದ್ರೆ ನಿಮ್ಮ ಭಾವಲಹರಿ ತುಂಬಾ ಚೆನ್ನಾಗಿದೆ.

Sowmya ಹೇಳಿದರು...

Divya really this is a great blog i loved it..... nanna manassina matanne bareda haagide....