ಶುಕ್ರವಾರ, ಡಿಸೆಂಬರ್ 11, 2009

ಭರವಸೆ ಇದೆ ನನಗಿಂದು.....
ಭರವಸೆ ಇದೆ ನನಗಿಂದು ,ಸೂರ್ಯಸ್ಥಮಾನವಾದರೆ ,
ನಾಳೆ ಸೂರ್ಯೋದಯ ಆಗುವುದೆಂದು .
ಭರವಸೆ ಇದೆ ನನಗಿಂದು , ಇವತ್ತು ನಾ ದುಃಖವನ್ನು ಉಂಡರೆ,
ನನ್ನ ಪಾಲಿಗೆ ನಾಳೆ ನಗುವಿದೆ ಎಂದು .

ಭರವಸೆ ಇದೆ ನನಗಿಂದು ,ಕಂಡ ಕನಸುಗಳೆಲ್ಲ
ನಾಳೆ ನನಸಾಗುವುದೆಂದು .
ಭರವಸೆ ಇದೆ ನನಗಿಂದು ,ನಾನು ಬಯಸಿದ್ದೆಲ್ಲ ,
ನನಗೆ ಸಿಗುವುದೆಂದು .

ಭರವಸೆ ಇದೆ ನನಗಿಂದು ,ಕಳೆದುಕೊಂಡಿದ್ದಕ್ಕಿಂತ
ಉತ್ತಮವಾದುದನ್ನು ನಾಳೆ ಪಡೆದುಕೊಳ್ಳುತ್ತೆನೆಂದು .
ಭರವಸೆ ಇದೆ ನನಗಿಂದು ,ಘಾಸಿಗೊಂಡ ಹೃದಯ ,
ತಾನೇ ಸುಧಾರಿಸಿಕೊಳ್ಳುತ್ತದೆಂದು .

ಭರವಸೆ ಇದೆ ನನಗಿಂದು , ಜೀವನದ ಸಮುದ್ರವನ್ನು
ಈಸುತ್ತೆನೆಂದು ,ಈಸಿ ಜಯಿಸುತ್ತೇನೆಂದು .
ಭರವಸೆ ಇದೆ ನನಗಿಂದು , ನನ್ನ ಮೇಲೆ ,
ನನ್ನ ಮನಸ್ಸಿನ ಮೇಲೆ , ನನ್ನ ನಾಳೆಗಳ ಮೇಲೆ .24 ಕಾಮೆಂಟ್‌ಗಳು:

Ramesha ಹೇಳಿದರು...

Divya,

This is nice and sounds really optimistic... And this sounds really contrasting to the poem "KaNNeeru" :-)

Keep up the good work and visit my blog for some kannada and hindi writings :-)

Ramesha

ಸುಶ್ರುತ ದೊಡ್ಡೇರಿ ಹೇಳಿದರು...

eshtella bharavase! great!

simple, nice poem.

ಸೀತಾರಾಮ. ಕೆ. ಹೇಳಿದರು...

ಭರವಸೆಗಳ ಭರಪೂರದಿ೦ದ ತು೦ಬಿದ ಆಶಾವಾದದ ಸೊಗಸಿನ ಪದ್ಯ.
ಚೆ೦ದದ ಕವನ ನೀಡಿದ್ದಕ್ಕೆ, ಭರವಸೆಗಳ ಅಶಾಸೌಧ ಮನದಲ್ಲಿ ಮೂಡಿಸಿದ್ದಕ್ಕೆ ವ೦ದನೆಗಳು.

ಸುಮ ಹೇಳಿದರು...

ಕವನ ಚೆನ್ನಾಗಿದೆ ದಿವ್ಯ.ಆಶಾವಾದದಿಂದ ಎಂತಹ ಕಷ್ಟಗಳನ್ನೂ ಎದುರಿಸುವ ಛಲ ದೊರೆಯುತ್ತದೆ.

ಸಾಗರದಾಚೆಯ ಇಂಚರ ಹೇಳಿದರು...

ದಿವ್ಯಾ
ಭರವಸೆಯ ಕವನ ನೊಂದ ಮನಗಳಿಗೂ
ಸಾಂತ್ವನ ನೀಡುವಂತಿದೆ
ಪ್ರತಿಯೊಂದು ಸಾಲುಗಳು ಯೋಚಿಸಿ ತೂಗಿ ಬರೆದಂತಿದೆ
ಹೀಗೆಯೇ ಬರೆಯುತ್ತಿರಿ

ಶಿವಪ್ರಕಾಶ್ ಹೇಳಿದರು...

ಭರವಸೆಯೇ ಜೀವನ.
We must wake up everyday with Hope... :)
Hope of Life :)
ಕವನ ಸೂಪರ್ ಗುರು... ;)

ಜಲನಯನ ಹೇಳಿದರು...

ದಿವ್ಯಾ, ಒಂದಂತೂ ನಿಜ ಇಂದು ಯಾವುದೇ ತೊಂದರೆಗೆ ಒಳಗಾದ ಜೀವಿ ಅದರಿಂದ ಹೊರಬಂದರೆ ಆ ಸ್ಥಿತಿಗಿಂತ ಹೆಚ್ಚು ಉತ್ತಮ ಸ್ಥಿತಿ ಬರುವುದು ಖಂಡಿತ ಇದು ನಿಸರ್ಗ ನಿಯಮ...ಚಕ್ರ.. ಭರವಸೆಯಮೇಲಿನ ನಿನ್ನ ಭರವಸೆ ಸುಳ್ಳಾಗದಿರಲಿ ಎಂದೇ ನಮ್ಮ ಹಾರೈಕೆ..

shivu ಹೇಳಿದರು...

ದಿವ್ಯ ಮೇಡಮ್,

ಭರವಸೆಗಳ ಉತ್ತಮ ಕವನ ಬರೆದಿದ್ದೀರಿ..

sunaath ಹೇಳಿದರು...

ದಿವ್ಯಾ,
ಭರವಸೆ ಇದ್ದರೇ ಕವನ ಹೊರಬರುವದು. ಕವನ ಭರವಸೆಯ ಸಂಕೇತ.

Raghu ಹೇಳಿದರು...

ಮನಸ್ಸಿನ ಮೇಲೆ, ನಾಳೆಗಳ ಕನಸಿನ ಮೇಲೆ ಭರವಸೆ ಬೇಕು... ನನಸು ಮಾಡುವ ಛಲನು ಬೇಕು...
ನಿಮ್ಮವ,
ರಾಘು.

Vish ಹೇಳಿದರು...

Divya avare nimma ee baravaseya kavithe thumba thumba sogasagide naa idannu thumba baravase inda helutiddene. sogasada kavithe namage nididikke danyavadagalu....

ಸುಬ್ರಹ್ಮಣ್ಯ ಹೆಗಡೆ ಹೇಳಿದರು...

sogasagide......

Deepasmitha ಹೇಳಿದರು...

ದಿವ್ಯ ಅವರೆ, ನಾಳೆ ಒಳ್ಳೆಯದಾಗುತ್ತದೆ ಎನ್ನುವ ಆಶಾಭಾವನೆಯೇ ನಮ್ಮೆಲ್ಲರನ್ನು ಇಂದು ಬದುಕಲು ಪ್ರೇರೇಪಿಸುತ್ತದೆ. ಒಳ್ಳೆಯ ಕವನ

ಸವಿಗನಸು ಹೇಳಿದರು...

ದಿವ್ಯ,
ಭರವಸೆಗಳ ಮಹಾಪೂರದ ಕವನ ಎಲ್ಲರಿಗೂ ಉತ್ಸಾಹ ತರುತ್ತದೆ....
ಚೆಂದದ ಬರಹ....

ಸುಧೇಶ್ ಶೆಟ್ಟಿ ಹೇಳಿದರು...

bharavaseye baalu:)

thumba ishta aayithu ee kavana divya avare...

vijayhavin ಹೇಳಿದರು...

good one!

manamukta ಹೇಳಿದರು...

ನಿಜ... ಭರವಸೆಯ ಆಸರೆಯಿ೦ದ ಎ೦ತಹ ಸ೦ದರ್ಭವನ್ನೂ ಎದುರಿಸಬಹುದು ...ಇ೦ತಹುದೇ ಸು೦ದರ ಕವನಗಳು ಬರುತ್ತಿರಲಿ.....ಧನ್ಯವಾದಗಳು.

Divya Hegde ಹೇಳಿದರು...

ಹಾಯ್ ಗೆಳೆಯರೇ,
ಓದಿ ಪ್ರತಿಕ್ರಿಯಿಸಿದ ನಿಮ್ಮೆಲ್ಲರಿಗೂ ಒಂದು "ಥ್ಯಾಂಕ್ಸ್"....
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ಎಂದು ಆಶಿಸುವ..
ದಿವ್ಯಾ ..:)

ಎಚ್.ಎನ್. ಈಶಕುಮಾರ್ ಹೇಳಿದರು...

ಬರವಸೆ ಇದೆ ನನಗಿಂದು ಕವನ..ಎಲ್ಲರ ಬದುಕಿನ ಬರವಸೆಯ ಕಿಂಡಿಯಲೋಮ್ಮೆ ಬೆಳಕಿನ ಕಿರಣಗಳ ಹರಿಸುವುದು..ಧನ್ಯವಾದಗಳು

ಗಿರಿ ಹೇಳಿದರು...

cool.. keep it up... for both bharavase as well as the poetry inside u...!

ಅನಾಮಧೇಯ ಹೇಳಿದರು...

bharavase ide nanagu ondu ninu heege bareyutiruttiya kavanagala endu.

Venkatakrishna.K.K. ಹೇಳಿದರು...

ಉತ್ತಮ ಕವನ..
ಚೆನ್ನಾಗಿದೆ.

ದಿವ್ಯಾ ಹೇಳಿದರು...

thanku... :)

ಅನಾಮಧೇಯ ಹೇಳಿದರು...

Hey, I am checking this blog using the phone and this appears to be kind of odd. Thought you'd wish to know. This is a great write-up nevertheless, did not mess that up.

- David