ಶುಕ್ರವಾರ, ಡಿಸೆಂಬರ್ 04, 2009

ಅವಳು ಬಂದಾಗಿನಿಂದ ನನ್ನ.......

ನಾನೂ ನೋಡ್ತಾನೆ ಇದೀನಿ .....
ಅವಳು ಬಂದಾಗಿನಿಂದ ನನ್ನ ಯಜಮಾನ ನನ್ನೆಡೆಗೆ ನೋಡುತ್ತಲೂ ಇಲ್ಲ .ಬರೀ ಅವಳನ್ನು ಮಾತ್ರ ಜೊತೆಯಲ್ಲಿಟ್ಟುಕೊಂಡು ತಿರುಗುತ್ತಾನೆ .ಅವಳೊಡನೆ ಅಷ್ಟೆ ಮಾತಾಡುತ್ತಾನೆ . ಮೊದಲೆಲ್ಲ ಅವನು ಹೀಗಿರಲಿಲ್ಲ. ಯಾರೊಡನೆ ಮಾತಾಡಬೇಕಿದ್ದರೂ ನಾನೇ ಬೇಕು ಎನ್ನುತ್ತಿದ್ದ . ಆದರೆ ಈಗ ನನಗೆ ಹೊಟ್ಟೆಗೂ ಸರಿಯಾಗಿ ಹಾಕುತ್ತಿಲ್ಲ . ಸುಮಾರು ಮೂರು ವರ್ಷಗಳ ಕಾಲ ನಾನೂ ಅವನ ಜೊತೆಗೇ ಇದ್ದೆ ..ಅವನು ನನ್ನನ್ನು ತನಗೆ ಬೇಕಾದ ಹಾಗೆಲ್ಲ ಬಳಸಿಕೊಂಡ . ಈಗ ನಾನು ಅವನಿಗೆ ಬೇಡ . ಕಾರಣ ಇನ್ನೊಂದು ಸುಂದರಿ ಅವನ ಮೋಡಿ ಮಾಡಿರುವಳಲ್ಲ !!! ಅವನು ಅವಳ ಜೊತೆಗೆ ತಿರುಗಾಡುವುದನ್ನು ನೋಡಿದರೆ ಯಾಕೋ ಏನೋ ಒನ್ ತರಹದ ಸಂಕಟವಾಗುತ್ತಿದೆ .
ಯಾರಿಗೆ ಹೇಳಲಿ ನಾನು ಈ ದುಃಖವನ್ನು ?ಹೇಳಿಕೊಳ್ಳಲು ಅಪ್ಪ- ಅಮ್ಮ ಯಾರೂ ಇಲ್ಲ ನನಗೆ . ಇವನೊಬ್ಬನೇ ನನಗೆ ದಿಕ್ಕಾಗಿದ್ದ . ಆದರೆ ಈಗ ಅವನೂ ನನ್ನ ಆಲೈಸುತ್ತಿಲ್ಲ .ನನ್ನೆಡೆಗೆ ನೋಡುತ್ತಲೂ ಇಲ್ಲ .ಬಹುಷಃ ಅವನಿಗೆ ನನ್ನಲ್ಲಿ ಆಸಕ್ತಿ ಹೊರಟು ಹೋಗಿರಬೇಕು . ಇವಳು ಬರುವ ಮುಂಚೆ ಇವನು ಯಾವತ್ತೂ ನನ್ನ ಒಂಟಿ ಮಾಡಿರಲಿಲ್ಲ . ನನ್ನ ಅಸ್ತಿತ್ವವೇ ಹೊರಟು ಹೋಗಿದೆ ಇವಳು ಬಂದಾಗಿನಿಂದ . ನಾನು ಒಪ್ಪಿಕೊಳ್ಳುತ್ತೇನೆ ,ಅವಳಲ್ಲಿರುವ ರಂಗುರಂಗಿನ ಬಿನ್ನಾಣವಾಗಲಿ ,ಹೊಳಪಾಗಲಿ , ಅಥವಾ ನನ್ನ ಯಜಮಾನನನ್ನು ಸಂತೋಷಿಸುವ ಯಾವುದೇ ಗುಣವಾಗಲಿ ನನ್ನಲ್ಲಿಲ್ಲ ..ಅವಳು ನನಗಿಂತ ಸಣ್ಣಗಿದ್ದಾಳೆ ..ನಾನು ಸ್ವಲ್ಪ ದಪ್ಪ ……ಆದರೂ ನಾನು ಅವನವಳಾಗಿದ್ದೆ ಅಲ್ಲವ ?ಅದಕ್ಕಾದರೂ ನನ್ನ ಮಾತಾಡಿಸಬಾರದೆ ?ನನ್ನನ್ನು ಅವಳ ಹಾಗೆ ಇರಿಸಿಕೊಳ್ಳಬಾರದೆ ??
ಎಷ್ಟೊಂದು ಸಾರಿ ಹೊಟ್ಟೆ ಹಸಿದು ಸಾಯುತ್ತಿರುವಾಗ ಬಂದು ಹೊಟ್ಟೆಗೆ ಹಾಕುತ್ತಾನೆ ಪುಣ್ಯಾತ್ಮ . ಎಷ್ಟು ನೋವಾಗುತ್ತೆ ಅವನಿಗೇನು ಗೊತ್ತು ? ಅವನಾಗಲೇ ಅವಳ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಿರುವನು . ಅವಳನ್ನು ಬೆಚ್ಚನೆಯ ಗೂಡಿನಲ್ಲಿ ಕೂಡಿಟ್ಟಿರುವನು . ಅವಳನ್ನು ಕಾಪಾಡಲು ಒಂದೊಳ್ಳೆ ರೇಶಿಮೆಯ ಅಂಗಿಯನ್ನು ತಂದಿರುವನು .ಆದರೆ ನನಗೆ ಏನನ್ನು ಕೊಡಿಸಲಿಲ್ಲ . ನಾನು ಅವನಿಗೆ ತುಂಬ ಸಹಾಯ ಮಾಡಿದ್ದೀನಿ . ಅವನ ಅಪ್ಪ ಅಮ್ಮನೊಡನೆ , ಸ್ನೇಹಿತರೊಡನೆ ಒಂದು ನಂಟನ್ನು ಕಾದಿರಿಕೊಳ್ಳಲು ನಾನು ಸಹಾಯವಾಗಿದ್ದೀನಿ . ಸಿಟ್ಟಿನಿಂದ ಒಂದೊಂದು ಸಾರಿ ನನ್ನನ್ನು ತಳ್ಳಿದ್ದಾನೆ ಆದರೂ ಸಹಿಸಿಕೊಂಡಿದ್ದೆ . ಆದರೆ ಈಗ ಬಂದಿರುವ ಹೊಸಬಳನ್ನು ತಪ್ಪಿಯೂ ಕೈ ಜಾರಲು ಬಿಡುವುದಿಲ್ಲ .ಕಾರಣ ಅವಳು ಬಲು ನಾಜೂಕಂತೆ .
ನನ್ನ ಕಣ್ಣೀರು ನನ್ನೆಜಮಾನನಿಗೆ ಕಾಣುತ್ತಿಲ್ಲ . ಅವಳ ನಗುವಷ್ಟೇ ಕಾಣುತ್ತಿದೆ .ನಾನು ಸಹಾಯ ಮಾಡಿದ್ದೆಲ್ಲ , ನನ್ನ ನೆನಪುಗಳೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗಿ ಹೋಯಿತು . ತುಂಬಾ ನೋವಾಗುತ್ತಿದೆ . ಪ್ರೀತಿ ಇಂದ ಮನೆಗೆ ಕರೆತಂದ ನನ್ನ ಯಜಮಾನನಿಗೆ ನಾನು ಬೇಡ ಎಂದರೆ ನಾನಿನ್ನು ಯಾರಿಗೆ ಬೇಕು ಹೇಳಿ ? ಯಜಮಾನ ಇನ್ನು ನನ್ನ ಇಟ್ಟುಕೊಳ್ಳುವುದಿಲ್ಲ .ತಪ್ಪು ನನ್ನದೇನು ಇಲ್ಲ .ತಪ್ಪು ಯಾರದ್ದು ಎಂದು ಹೇಳಲಾಗುತ್ತಿಲ್ಲ . ನನ್ನೆದುರೇ ನನ್ನ ಜಾಗವನ್ನು ಆವರಿಸಿದ ಅವಳು ಅದೃಷ್ಟವಂತೆಯೋ , ಅಥವಾ ನನ್ನ ಸ್ಥಾನವನ್ನು ಅವಳಿಗೆ ಬಿಟ್ಟುಕೊಟ್ಟ ನಾನು ಬುದ್ದಿಗೇಡಿಯೋ ನಿರ್ಧರಿಸಲು ಆಗುತ್ತಿಲ್ಲ . ಕಸದ ತೊಟ್ಟಿಯ ಪಾಲಾಗುವ ಭಯದಿಂದ ಬದುಕುತ್ತಿರುವ , ಯಜಮಾನನ ಹಳೆಯ ಮೊಬೈಲ್ .

(ಮನೆಯಜಮಾನ ಹೊಸ ಮೊಬೈಲ್ ಕೊಂಡು ತಂದಿರುವಾಗ ಹಳೇ ಮೊಬೈಲ್ ಏನು ಯೋಚಿಸಿತು ಎನ್ನುವ ಬಗ್ಗೆ ಒಂದು ಕಲ್ಪನೆ ಹೊಟ್ಟೆ ಹಸಿವು = ಚಾರ್ಜ್ ಕಡಿಮೆ ಇರುವುದು..
ರೇಶಿಮೆ ಅಂಗಿ=ಮೊಬೈಲ್ ಕವರ್
ಅವಳು = ಹೊಸ ಸ್ಲಿಮ್ ಮೊಬೈಲ್ )

25 ಕಾಮೆಂಟ್‌ಗಳು:

ಸುಮ ಹೇಳಿದರು...

ಮೊಬೈಲಿನ ಸ್ವಗತ ಚೆನ್ನಾಗಿದೆ ದಿವ್ಯ. ಓದುತ್ತಿದ್ದಾಗ ಛೆ ಪಾಪ ಎನಿಸುತ್ತಿತ್ತು.

ಶಿವಪ್ರಕಾಶ್ ಹೇಳಿದರು...

ಹ್ಹಾ ಹ್ಹಾ ಹ್ಹಾ..
ಚನ್ನಾಗಿದೆ ಮೇಡಂ..
:D :D :D

sunaath ಹೇಳಿದರು...

ಓದುತ್ತಿದ್ದಂತೆ ಏನಿರಬಹುದು(?) ಎನ್ನುವ ಕುತೂಹಲ ಕಾಡುತ್ತಲೇ ಇತ್ತು. ಕೊನೆಗೊಮ್ಮೆ ಉತ್ತರ ಸಿಕ್ಕಿತಲ್ಲ. ತುಂಬಾ ಸ್ವಾರಸ್ಯಕರವಾಗಿ develop ಮಾಡಿದ್ದೀರಿ.

ಅನಾಮಧೇಯ ಹೇಳಿದರು...

hey Divya.. a nice one there!

ನಿಜವಾಗ್ಲೂ ಮೊಬೈಲ್ ಹೀಗೆಲ್ಲ ಯೋಚಿಸಿದ್ರೆ ಹೇಗಿರುತ್ತೆ ಅಲ್ವಾ???

ಮನುಷ್ಯರು ಇನ್ನೊಬ್ಬರ ಬಗ್ಗೆ ಯೋಚಿಸೋದನ್ನ ಬಿಟ್ಟಿರುವಾಗ, ಇನ್ನೂ ಮೊಬೈಲ್ ಬಗ್ಗೆ ಯೋಚಿಸ್ತಾರ????

Dileep Hegde ಹೇಳಿದರು...

ದಿವ್ಯಾ..
ಹಳೆಯ ಮೊಬೈಲ್ ನ ಸ್ವಗತ ಚೆನ್ನಾಗಿದೆ..
ಇತ್ತೀಚೆಗೆ ಹೊಸ ಮೊಬೈಲ್ ಕೊಂಡ ಬಗ್ಗೆ ಹೇಳಿದ್ದಿರಿ.. ಈ ಬರಹದಲ್ಲಿ ಬರೋ ಮೊಬೈಲ್ ಯಜಮಾನ (ಯಜಮಾನ್ತಿ) ನೀವೇನಾ ಮತ್ತೆ..?? :P

ಮನಸಿನ ಮಾತುಗಳು ಹೇಳಿದರು...

ಸುಮ,
ನನಗೂ ಹಾಗೆ ಅನ್ನಿಸಿತ್ತು..ಧನ್ಯವಾದ..:)

==========
ಶಿವಪ್ರಕಾಶ್,
Thanks Sisya..;)

==========
Sunaath ,
ಲೇಖನ ಸ್ವಾರಸ್ಯಕರವಾಗಿದೆ ಹೇಳಿದಕ್ಕೆ ಹಾಗೂ ಓದಿ ಪ್ರತಿಕ್ರಿಸಿದಕ್ಕೆ ಧನ್ಯವಾದಗಳು...:)

ಮನಸಿನ ಮಾತುಗಳು ಹೇಳಿದರು...

ಹೌದು ಸುಮಾಕ್ಕ,
ಮನುಷ್ಯರು ಮನುಷ್ಯರ ಬಗ್ಗೆಯೇ ಯೋಚಿಸುವುದಿಲ್ಲ, ಅಂಥದ್ರಲ್ಲಿ ಮೊಬೈಲ್ ಬಗ್ಗೆ ಯೋಚಿಸುವುದು ದೂರದ ಮಾತೇ ಸರಿ....
ಯಾಕೋ ಸುಮ್ನೆ ಹಾಗೆ ಒಂದು ಕಲ್ಪನೆ ತೇಲಿ ಬಂತು ಮನಸ್ಸಿನಲ್ಲಿ ..
ಅಕ್ಷರ ರೂಪದಲ್ಲಿ ಇಳಿಸಿದೆ ಅಷ್ಟೆ..:)
============================

ದಿಲೀಪ್,
ನಾನು ಹೊಸ ಮೊಬೈಲ್ ಕೊಂಡಿದ್ದೇನೆ..ನಿಜ
ಆದರೂ ನನ್ನ ಹಳೇ ಮೊಬೈಲ್ ಗೇ ನನ್ನ ಒಂದು ತೂಕ ಪ್ರೀತಿ ಜಾಸ್ತಿ ಕರಣ ಅದು ನನ್ನ ಜೀವನದಲ್ಲಿ ಕಂಡ "ನನ್ನದು" ಎನ್ನೋ ಮೊಬೈಲ್ ..ಅಷ್ಟೆ ಅಲ್ಲ' sentimental attachment' ಕೂಡ..ಏಕೆಂದರೆ ಅದು ನನ್ನ ಅಪ್ಪ ಕೊಡಿಸಿದ್ದು..
ನನ್ನ ಮೊಬೈಲ್ ಗೆ ಆ ಗತಿ ಬರುವುದಿಲ್ಲ..
ಧನ್ಯವಾದಗಳು..

ಸೀತಾರಾಮ. ಕೆ. / SITARAM.K ಹೇಳಿದರು...

olle kootuhala untu maaduva lekhana shaili. chennagide.

ಆನಂದ ಹೇಳಿದರು...

ಅಬ್ಬಾ, ಯೋಚಿಸೋದಕ್ಕೂ ಭಯವಾಗುತ್ತೆ.
ನಾವು ಉಪಯೋಗಿಸಿ ಒಗೆಯೋ ವಸ್ತುಗಳೆಲ್ಲಾ ಮಾತಾಡ್ತಾ ಹೋದ್ರೆ, ಏನೆಲ್ಲಾ ಹೇಳ್ಬೇಡ!
ಅಕಸ್ಮಾತ್, ಅವಕ್ಕೆ ತಿಳಿದಹಾಗೇ ಮಾಡ್ಲಿಕ್ಕೆ ಶುರು ಮಾಡಿದ್ರೆ ಏನೆಲ್ಲಾ ಮಾಡ್ಬೇಡ ( ಹೊಸ ಚಪ್ಪಲಿ ಬಂದಮೇಲೆ ಹಳೇದು ಏನು ಮಾಡುತ್ತೋ ) :)

ಚೆನ್ನಾಗಿದೆ ಬರಹ!

Unknown ಹೇಳಿದರು...

very impressing article!

good

Arun ಹೇಳಿದರು...

Sakkat bardideera divya.... kushi aatytu odi.....

Raghu ಹೇಳಿದರು...

ದಿವ್ಯ ಅವರೇ,
ನನ್ನ ಹಳೆ ಮೊಬೈಲ್ ಎಷ್ಟು ನನ್ನ ಬೈಕೊಳ್ತಾ ಇದೆಯೋ ಏನೋ... ನನ್ನ ಪ್ರತಿ ಮೆಸೇಜ್ ಗೆ ಜೊತೆ ಆಗಿತ್ತು...ಕಾಲೇಜ್ ನಲ್ಲಿ ಅದಕ್ಕೆ ಜಾಗ ಇಲ್ಲ ಅಂತ ಹೇಳಿದ ಕಾಲದಲ್ಲೂ ಅದು ನನ್ನ ಜೊತೆಯನ್ನ ಬಿಟ್ಟಿರಲಿಲ್ಲ...ಪಾಪ...ನನ್ನ 'ಸೋನಿ' ಬಂದ ಮೇಲೆ ಬೆಂಗಳೂರು ಲೈಫ್ ಬೇಡ ಎಂದು ನನ್ನ ಜೊತೆ ಗಲಾಟೆ ಮಾಡಿ ಊರು ಸೇರಿ ಸುಮಾರು ಒಂದು ವರ್ಷ ಆಯಿತು...ಇಗ ಅದು ನನ್ನ ತಂದೆಯ ಜೊತೆಗೆ ಊರಲ್ಲಿ ಹ್ಯಾಪಿ ಆಗಿ ಇದೆ ಅಂತ ಅನ್ಕೊಂಡಿದ್ದೀನಿ...
ಲೇಖನ ತುಂಬಾ ಚೆನ್ನಾಗಿ ಇದೆ... :)
ನಿಮ್ಮವ,
ರಾಘು.

shivu.k ಹೇಳಿದರು...

ದಿವ್ಯ,

ನಿಮ್ಮ ಕಲ್ಪನೆ ತುಂಬಾ ಚೆನ್ನಾಗಿದೆ...ಮೊದಲು ಎಲ್ಲಾ ಹೆಣ್ಣು ಮಕ್ಕಳು ಯೋಚಿಸುವುದು ಹೀಗೇನೇ ಅಂದುಕೊಂಡೆ. ಕೊನೆಯಲ್ಲಿ ಅದು ಮೊಬೈಲ್ ಅಂತ ಗೊತ್ತಾದಾಗ ನಗು ಬಂತು.

ವೆಂಕಟಕೃಷ್ಣ ಕೆ ಕೆ ಪುತ್ತೂರು ಹೇಳಿದರು...

ಉತ್ತರ ಹೇಳದಿದ್ದರೆ
ಅದರ ರುಚಿಯೇ ಬೇರೆಇತು,
ಇವೆಲ್ಲ ಓದುವಾಗಲೇ ತಿಳಿಬೇಕು ,
ಉತ್ತರದಿಂದಲ್ಲ!

ಮೂರ್ತಿ ಹೊಸಬಾಳೆ. ಹೇಳಿದರು...

ಹ ಹ ಹ ತುಂಬಾ ಉತ್ತಮ ಕಲ್ಪನೆ.
ಭಾವಚಿತ್ರ ಹಾಗು ಮೊದಲ ಕೆಲವು ಸಾಲುಗಳು ಆತಂಕ ಮೂಡಿಸಿದ್ದವು. ಓದುತಾ ಹೋದಂತೆ ಇದು ಹಳಯ ಲ್ಯಾಪ್ ಟಾಪ್ ನ ಸ್ವಗತ ಎಂದು ಕೊಂಡೆ ಪೂರ್ಣ ಓದಿದಮೇಲೆಯೇ ಗೊತ್ತಾದದ್ದು ಹಳೆಯ ಮೊಬೈಲೊಂದರ ಸ್ವಗತ ಎಂದು.
ವರ್ಷಕ್ಕೊಂದರಂತೆ ಮೊಬೈಲ್ ಬದಲಾಯಿಸುವ ಕೆಟ್ಟ ಚಾಳಿ ಇರುವ ನನಗೆ ಒಟ್ಟು 8 ಯಜಮಾನತಿಯರ ಶಾಪ ತಟ್ಟು ತ್ತಿದೆ ಎಂದು ಕಲ್ಪಿಸಿಕೊಂಡಾಗ ಬೇಸರವಾಗುತ್ತಿದ್ದೆ.
ಇವತ್ತೇ ನಾ ಎಲ್ಲರ ಯೋಗಕ್ಷೇಮವನ್ನೂ ವಿಚಾರಿಸುತ್ತೇನೆ.

ಕ್ಷಣ... ಚಿಂತನೆ... ಹೇಳಿದರು...

ದಿವ್ಯಾ ಅವರೆ, ಕಲ್ಪನೆಯೊಂದಿಗೆ ಲೇಖನ ಚೆನ್ನಾಗಿ ಬಂದಿದೆ. ಮೊಬೈಲು ಹೀಗೆಲ್ಲಾ ಯೋಚಿಸಿದಂತೆ ಕಲ್ಪಿಸಿದ್ದು ಅದನ್ನು ಓದುತ್ತಾ ಹೋದಂತೆ ಕುತೂಹಲಕರವಾಗಿತ್ತು. ಕೊನೆಯವರೆಗೂ ಓದಿಸಿಕೊಂಡು ಹೋಯಿತು. ಚೆನ್ನಾಗಿದೆ.

ಬಾಲು ಹೇಳಿದರು...

ಲೇಖನ ಸ್ವಾರಸ್ಯಕರವಾಗಿ ಇದೆ, ಮೊದಲು ಓದುತ್ತಾ ಹೋದಂತೆ ಏನೋ ಅನ್ನಿಸಿತು, ಕೊನೆಯಲ್ಲಿ ಮೊಬೈಲ್ ದು ಅಂತ ಗೊತ್ತಾದಾಗ ನಗು ಬಂತು. ಒಳ್ಳೆಯ ಕಲ್ಪನೆ. ಚೆನ್ನಾಗಿ present ಮಾಡಿದ್ದಿರಿ.

ಸಾಗರದಾಚೆಯ ಇಂಚರ ಹೇಳಿದರು...

ದಿವ್ಯಾ
ಕಲ್ಪನೆ ಚೆನ್ನಾಗಿದೆ
ಹೆಣೆದ ರೀತಿ ಇನ್ನೂ ಚೆನ್ನಾಗಿದೆ

ಮನಸು ಹೇಳಿದರು...

ತುಂಬಾ ಚೆನ್ನಾಗಿದೆ...ಹಹಹ..ಹೊಸ ನೀರು ಬಂದು ಹಳೆ ನೀರು ಕೊಚ್ಚಿಕೊಂಡೋಯ್ತು

Ramesh ಹೇಳಿದರು...

Hi Divya,

I went through your blog "Reflections" and this one as well. I see that you are very true in the way you put things across.

Thumba interesting agi ide nimma barahagaLu. Nimma barahagalannu innu mundenu follow madteeni. Keep up the good work..

Do visit my blog as well whenever you get some time.

Regards,
Ramesha

ಮನಸಿನ ಮಾತುಗಳು ಹೇಳಿದರು...

ಸೀತಾರಾಮ. ಕೆ. ಯವರೇ,
ಧನ್ಯವಾದಗಳು..:)

***********
ಆನಂದ ,
ಹೌದು ಎಲ್ಲ ವಸ್ತುಗಳು ಹೀಗೆ ಯೋಚಿಸಿದರೆ ಏನಾಗುತ್ತದೋ ನನಗು ಗೊತ್ತಿಲ್ಲ...
ಹೊಸ ಚಪ್ಪಲಿ ಕೊಂಡಾಗ ಹಳೇ ಚಪ್ಪಲಿ ಏನು ಹೇಳುತ್ತದೆ ಎಂದು ಇನ್ನು ಯೋಚಿಸಿಲ್ಲ...
ಏನಾದರು ಹೊಳೆದರೆ ಅದರ ಬೆಗ್ಗೆಯು ಬರೆಯುವೆ..
ಧನ್ಯವಾದಗಳು..:)

*****************
Vijay,
Thanks Friend...:)

****************
ಅರುಣ್,
Thankyou...:)

****************
Raghu ,
ನಿಮ್ಮ ಮೊಬೈಲ್ ಕಥೆ ಕೀಲಿ ಸಂತೋಷವಾಯಿತು,,,
ಧನ್ಯವಾದಗಳು...:)

******************
shivu ,
correct....ಧನ್ಯವಾದಗಳು...:)

******************
Venkatakrishna.K,
ನನ್ನ ಬ್ಲಾಗಿಗೆ ಸ್ವಾಗತ,
ಕಾಮ್ಮೆನ್ಟಿಸಿದಕ್ಕೆ ಧನ್ಯವಾದಗಳು...:)
****************

ಮೂರ್ತಿ ಹೊಸಬಾಳೆ. ,
ನನ್ನ ಬ್ಲಾಗಿಗೆ ಸ್ವಾಗತ,
ಕಾಮ್ಮೆನ್ಟಿಸಿದಕ್ಕೆ ಧನ್ಯವಾದಗಳು...:)
***************
ಕ್ಷಣ... ಚಿಂತನೆ... bhchandru ,
ನನ್ನ ಬರಹ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..
***************

ಬಾಲು ,
ಅಭಿಪ್ರಾಯಕ್ಕೆ ಧನ್ಯವಾದಗಳು...:)
***************
ಸಾಗರದಾಚೆಯ ಇಂಚರ,
ಧನ್ಯವಾದಗಳು ಸರ್...:)
***************
ಮನಸು ,
ನನ್ನ ಬ್ಲಾಗಿಗೆ ಸ್ವಾಗತ,
ಸರಿಯಾಗಿ ಹೇಳಿದಿರಿ...:)
****************
Ramesha ,
Wel come to my blog...
Ya surely i vl visit your blog...
Thanks...:)

Sudi ಹೇಳಿದರು...

ಅತಿ ಸುಂದರ ಲೇಖನ .. ತುಂಬಾ ಚೆನ್ನಾಗಿ ಕಲ್ಪಿಸಿದ್ದೀರ

ಮನಸಿನ ಮಾತುಗಳು ಹೇಳಿದರು...

thanks Sudi..:)

ಸುಧೇಶ್ ಶೆಟ್ಟಿ ಹೇಳಿದರು...

chitra mattu sheershike nodi yeno irabeku serious aada vishaya yendukondu odidare mattinneno ide :)

chandhadha kalpane :)

ಮನಸಿನ ಮಾತುಗಳು ಹೇಳಿದರು...

ಸುಧೇಶ್...
ಧನ್ಯವಾದಗಳು...:)