ಸೋಮವಾರ, ನವೆಂಬರ್ 09, 2009

ಒಂದು ಖುಷಿ ವಿಚಾರ....


ಹೌದು , ನಿಮಗೆಲ್ಲರಿಗೂ ಒಂದು ಧನ್ಯವಾದ ಹೇಳುವ ಕಾಲ ಬಂದಿದೆ....

ಒಂದು ಖುಷಿ ವಿಚಾರ ಹಂಚಿಕೊಳ್ಳುವುದಿತ್ತು ....

ಇವತ್ತು ತುಂಬಾ ಸಂತೋಷವಾಗುತ್ತಿದೆ...
ಹ್ಮಂ,,, ನನ್ನ ಬ್ಲಾಗನ್ನು ಶುರು ಮಾಡಿ ಇವತ್ತಿಗೆ ಒಂದು ವರುಷವಾಯಿತು....
ಎರಡನೇ ವರ್ಷದ ಕನಸಿನೊಂದಿಗೆ ಮುನ್ನಡೆಯುತ್ತಿದೆ .....

ನಿಜ ಹೇಳಬೇಕೆಂದರೆ ನನಗೆ ತುಂಬಾ ಚೆನ್ನಾಗಿ ಬರೆಯಲು ಬರುವುದಿಲ್ಲ. ಸುಮ್ನೆ ಹಾಗೇ ನಂದೂ ಅಂತ ಒಂದು ಬ್ಲಾಗ್ ಇರಲಿ ಅಂತ ಶುರು ಮಾಡಿದೆ. ಆದರೆ ಅದರಿಂದ ನನಗೆ ಇಷ್ಟು ಸಂತೋಷ , ತೃಪ್ತಿ, ಪ್ರೋತ್ಸಾಹ ಇವೆಲ್ಲ ಸಿಗುತ್ತದೆ ಎಂದು ಎಂದೂ ನಿರೀಕ್ಷಿಸಿರಲಿಲ್ಲ ......

ಈ ಬ್ಲಾಗನ್ನು ಶುರು ಮಾಡಿದಾಗ , ಸುಮಾರು 4-5 ತಿಂಗಳ ಕಾಲದವರೆಗೆ ನನಗಿದ್ದುದ್ದು 3 ರೇ ಹಿಂಬಾಲಕರು...
ಬ್ಲಾಗ್ ಪ್ರಪಂಚದ ಬಗ್ಗೆ ಏನೂ ತಿಳಿದಿರಲಿಲ್ಲ .... ನಾನು ಎಷ್ಟೇ ಬರೆದರೂ ಒಂದೂ ಕಾಮೆಂಟ್ ಕೂಡ ಬರುತ್ತಿರಲಿಲ್ಲ...
ಆಮೇಲೆ ಇದರ ಬಗ್ಗೆ ತಿಳಿದುಕೊಂಡು ಸ್ವಲ್ಪ ಜಾಸ್ತಿ ಗಮನ ಹರಿಸತೊಡಗಿದೆ ......

ನೋಡ ನೋಡುತ್ತಿದ್ದಂತೆ ನಿಧಾನಕ್ಕೆ ಸುಧಾರಿಸುತ್ತಾ ಮುಂದುವರೆದು ಇಲ್ಲಿವರೆಗೂ ಬಂದು ತಲುಪಿದೆ ..

ನನ್ನ ಕೆಲಸದಿಂದ ಬಿಡುವು ಸಿಕ್ಕಾಗ, ಮನಸಿನ ಮಾತುಗಳನ್ನು ಹೊರಹಾಕಬೇಕು ಎನಿಸಿದಾಗ ಕಣ್ಣಿಗೆ ಕಾಣುವುದು ಈ ಬ್ಲೋಗೆ ....
ಆದರೆ ಇದೆಲ್ಲ ನಿಮ್ಮೆಲ್ಲರ ಪ್ರೋತ್ಸಾಹ ಇಲ್ಲದಿದ್ದರೆ ಖಂಡಿತ ಆಗುತ್ತಿರಲಿಲ್ಲ...
ಚಿಕ್ಕಂದಿನಿಂದಲೂ ಚಿಕ್ಕ -ಚಿಕ್ಕ ಕಥೆ ಕವನಗಳು ಬರೆಯುವುದು ನನ್ನ ಅಭ್ಯಾಸ ...
ಹೀಗೆ ಬರೆಯುತ್ತೇನೆ ಎಂದು ತಿಳಿದಿದಿದ್ದು ನನ್ನ ಅಮ್ಮ ಅಪ್ಪ ,ತಂಗಿಗೆ ಅಷ್ಟೆ ...

ಆದರೆ ಈ ಬ್ಲಾಗಿಂದ ಅದು ಎಲ್ಲರಿಗೂ ತಿಳಿಯುವ ಹಾಗಾಯಿತು...ಹಾಗೇ ನನ್ನ ಬರವಣಿಗೆಯನ್ನು ಇನ್ನೂ ಚೆನ್ನಾಗಿ ಮಾಡಿಕೊಳ್ಳಲು ಅವಕಾಶವಾಯಿತು ...
ನನ್ನ ಬರಹಗಳು ಹೇಗೇ ಇದ್ದರೂ ಅದನ್ನು ಸಹಿಸಿಕೊಂಡು ಓದಿ ಕಡೆಗೊಂದು ಕಾಮೆಂಟ್ ಕೊಡುವ ಓದುಗರಿಗೆ ನನ್ನ ಅನಂತ ಧನ್ಯವಾದಗಳು..... ನನ್ನ ಬ್ಲಾಗನ್ನು ಫಾಲೋ ಮಾಡುತ್ತಿರುವವರಿಗೆ , ಇದುವರೆಗೆ ಕಾಮೆಂಟ್ ಹಾಕಿ ಪ್ರೋತ್ಸಾಹಿಸಿದೆ ಎಲ್ಲರಿಗೂ ನನ್ನ ಹೃದಯ ಪೂರ್ವಕ ಧನ್ಯವಾಗಳು ......

ಸಾಹಿತ್ಯ ಪ್ರಪಂಚದಲ್ಲಿ ನಾನಿನ್ನೂ ಅಂಬೆ ಗಾಲಿಡುತ್ತಿರುವ ಚಿಕ್ಕ ಮಗು...
ಯಾರಿಗೂ ನೋವಾಗದಂತೆ , ನನ್ನ ಭಾವನೆಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳಬೇಕು ಎನ್ನುವುದಷ್ಟೇ ನನ್ನ ಆಸೆ , ಅಭಿಲಾಷೆ ..

ಹಾಗೆ ಇನ್ನೊಂದು ಮಾತು,
ನನ್ನಿಂದ ನಿಮಗೆ ಎಲ್ಲಾದರೂ, ಯಾವುದಾದರು ಕಾರಣಕ್ಕೆ ನೋವಾಗಿದ್ದರೆ , ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ ಬಿಡಿ ...
ಒಂದು ವೇಳೆ ನಾನು ನಿಮ್ಮ ಬ್ಲಾಗಿಗೆ ರೆಗ್ಯುಲರ್ ಆಗಿ ಕಾಮೆಂಟ್ ಹಾಕುತ್ತಿಲ್ಲ ಎಂದರೆ ದಯವಿಟ್ಟು ನನ್ನ ಬೈದುಕೊಳ್ಳಬೇಡಿ.. ...
ನಿಮ್ಮ ಬರಹಗಳನ್ನು ನಾನು ಓದುತ್ತಿರುತ್ತೇನೆ, ಆದರೆ ಒಂದು ವೇಳೆ ಕಾಮೆಂಟ್ ಹಾಕುವುದನ್ನು ಮರೆತರೆ ಕ್ಷಮಿಸಿ ಬಿಡಿ......
ನಿಮ್ಮ ಪ್ರೋತ್ಸಾಹ , ಪ್ರೀತಿ, ಎಂದೂ ಹೀಗೆ ಇರಲಿ ಎಂದು ಆಶಿಸುತ್ತಾ,

ದಿವ್ಯಾ ...

44 ಕಾಮೆಂಟ್‌ಗಳು:

Unknown ಹೇಳಿದರು...

congrats and best of luck for second year!

ಸವಿಗನಸು ಹೇಳಿದರು...

ಮನಸಿನ ಮಾತುಗಳಿಗೆ ಹುಟ್ಟು ಹಬ್ಬದ ಶುಭಾಶಯಗಳು.....
ಹೀಗೆ ಇನ್ನು ಅನೇಕ ಹುಟ್ಟು ಹಬ್ಬಗಳು ಆಚರಿಸುವಂತಾಗಲಿ....
ಶುಭವಾಗಲಿ....

Dileep Hegde ಹೇಳಿದರು...

ದಿವ್ಯಾ..
ಮನಸಿನ ಮಾತುಗಳಿಗೆ ವರ್ಷ ತುಂಬಿದ್ದು ತುಂಬಾ ಸಂತೋಷ...
ಮನಸಿನ ಮಾತುಗಳ ಹರಿವು ನಿರಂತರವಾಗಿರಲಿ...
ಅಭಿನಂದನೆಗಳು...

Sushrutha Dodderi ಹೇಳಿದರು...

ಶುಭಾಶಯ.. ಮುಂದುವರೆಯಲಿ..

ಮೌನಿ ಹೇಳಿದರು...

ದಿವ್ಯಾ......
ತುಂಬಾ ಸಂತೋಷ....ಮನದಾಳದ ಭಾವನೆಗಳಿಗೆ ಬರವಿಲ್ಲದಿರಲಿ.......
ಅಭಿನಂದನೆಗಳು.......
ಗುರು.

sunaath ಹೇಳಿದರು...

ದಿವ್ಯಾ,
ಹುಟ್ಟುಹಬ್ಬದ ಶುಭಾಶಯಗಳು. ಇದೇ ರೀತಿ ನಿಮ್ಮ ಬರಹಗಳು ಮುಂದುವರೆಯಲಿ, ನಮಗೆ ಸಂತಸ ನೀಡಲಿ.

ಕ್ಷಣ... ಚಿಂತನೆ... ಹೇಳಿದರು...

ದಿವ್ಯಾ ಅವರೆ, ಅಭಿನಂದನೆಗಳು.

ಪ್ರವೀಣ್ ಭಟ್ ಹೇಳಿದರು...

Hi Divya..

manasina matige huttu habbada shubhashayagalu.

agiddu onde varushavadaru .. barahagalu parabuddavagive.. ambegalalla onde varshadalli saragavagi nediyalu kalitha maguvinanate... innastu mattastu manasina mattu adada matugalu hora hommali...

shubhavagali

ಪ್ರವೀಣ್ ಭಟ್ ಹೇಳಿದರು...

Hi Divya,

Manasina matige huttu habbada shubhashayagalu

agiddu onde varushavadaru.. ninna barahagalu bahala prabuddavagide. onde varushakke saragavagi nediyalu kalitha maguvinante..

manasina adada matugalu innastu heege hora hommali...

shubhavagali

ಶಿವಪ್ರಕಾಶ್ ಹೇಳಿದರು...

ಮನಸಿನ ಮಾತುಗಳಿಗೆ ಹುಟ್ಟು ಹಬ್ಬದ ಶುಭಾಶಯಗಳು..
ಅಭಿನಂದನೆಗಳು.
ಹೀಗೆ ಬರಿತಾ ಇರಿ...

Ittigecement ಹೇಳಿದರು...

ಶುಭಾಶಯಗಳು...
ಶುಭಾಶೀರ್ವಾದಗಳು.. ...

ದಿನಕರ ಮೊಗೇರ ಹೇಳಿದರು...

ದಿವ್ಯ ಮೇಡಂ,
'ಮನಸಿನ ಮಾತು' ಹೀಗೆ ಬರುತ್ತಿರಲಿ.... ಮಾತು ತೊದಲಿದಾಗ ಬ್ಲಾಗ್ ಲೋಕದ ಹಿರಿಯರಿದ್ದಾರೆ .... ಚಿಂತೆ ಬಿಡಿ..... ಹೀಗೆ ಬರೆಯುತ್ತಿರಿ...

ಅನಾಮಧೇಯ ಹೇಳಿದರು...

Congrats Divya.
Way to go..........

malathi S

ಅನಾಮಧೇಯ ಹೇಳಿದರು...

Congrats Divya
Way to go..........
:-)
malathi S

ಗೌತಮ್ ಹೆಗಡೆ ಹೇಳಿದರು...

keep going:):)

ಸಾಗರದಾಚೆಯ ಇಂಚರ ಹೇಳಿದರು...

ಒಂದು ವರ್ಷಕ್ಕೆ ಶುಭಾಶಯಗಳು
ನಿಮ್ಮ ಬ್ಲಾಗ್ ಮೊದಲ ಬಾರಿಗೆ ನೋಡಿದೆ,
ಎರಡನೇ ವರ್ಷಕ್ಕೆ ಶುಭ ಕಾರೈಕೆಗಳು
ಇನ್ನೂ ಹೆಚ್ಚಿನ ಬರಹ ನಿಮ್ಮಿಂದ ಬರಲಿ

ಸುಬ್ರಹ್ಮಣ್ಯ ಹೆಗಡೆ ಹೇಳಿದರು...

Divya nimma blogina modalane varshada huttu habbada shubhashayagalu... idu hegeye munduvareyali.....

ಚಕೋರ ಹೇಳಿದರು...

"ಅಡಿಗಲ್ಲಿ"ನ ಹೊತ್ತಲ್ಲಿ ಎಲ್ಲವೂ ಹೊಸದೇ. ಕಾಲ ನಮ್ಮನ್ನು ಪಕ್ವವಾಗಿಸುತ್ತದೆ ಸದಾ.

ಕಾಮೆಂಟ್ ಬಂದಿಲ್ಲ ಅಥವ ನಾನು ಕಾಮೆಂಟ್ ಹಾಕಿಲ್ಲವೆಂಬ ಭಾವ ಬೇಡ. ಬರಹದ ನಿಜವಾದ ಮೌಲ್ಯಮಾಪನ ಅದಲ್ಲ ಎಂಬುದೇ ನನ್ನ ಧೃಡ ನಂಬಿಕೆ.

ಅಂದ ಹಾಗೆ ನಿಮ್ಮ ಬ್ಲಾಗಿನ ಮೈಲಿಗಲ್ಲಿಗೆ ನನ್ನ ಒಂದು ಕಂಗ್ರಾಟ್ಸು.

ಮನಸಿನ ಮಾತುಗಳು ಹೇಳಿದರು...

Vijay,
thankyou :):)

ಮನಸಿನ ಮಾತುಗಳು ಹೇಳಿದರು...

ಸವಿಗನಸು,
ತಮ್ಮ ಶುಭ ಹಾರೈಕೆಗೆ ನಾನು ಚಿರಋಣಿ,
ಧನ್ಯವಾದಗಳು :)

ಮನಸಿನ ಮಾತುಗಳು ಹೇಳಿದರು...

ದಿಲೀಪ್ ಸರ್,
ಧನ್ಯವಾದಗಳು..

ಮನಸಿನ ಮಾತುಗಳು ಹೇಳಿದರು...

ಸುಶ್ರುತ ಅವರೇ,
ನನ್ನ ಬ್ಲಾಗಿಗೆ ಸ್ವಾಗತ,
ಧನ್ಯವಾದಗಳು..:)

ಮನಸಿನ ಮಾತುಗಳು ಹೇಳಿದರು...

ಗುರು ಬ್ರದರ್,
ತುಂಬಾ ಥ್ಯಾಂಕ್ಸು ..:)

ಮನಸಿನ ಮಾತುಗಳು ಹೇಳಿದರು...

sunaath,
ಧನ್ಯವಾದಗಳು..:)

ಮನಸಿನ ಮಾತುಗಳು ಹೇಳಿದರು...

chandru ಅವರೇ,
ನನ್ನ ಬ್ಲಾಗಿಗೆ ಸ್ವಾಗತ,
ಧನ್ಯವಾದಗಳು..:)

ಮನಸಿನ ಮಾತುಗಳು ಹೇಳಿದರು...

ಪ್ರವೀಣ್ ,
thanks..:)

ಮನಸಿನ ಮಾತುಗಳು ಹೇಳಿದರು...

ಶಿವಪ್ರಕಾಶ್ ,
thank you..:)

ಮನಸಿನ ಮಾತುಗಳು ಹೇಳಿದರು...

ಪ್ರಕಾಶಣ್ಣ,
ನಿಮ್ಮ ಶುಭಾಶೀರ್ವಾದಗಳು ಯಾವಾಗಲು ಹೀಗೆ ಇರಲಿ,
ಧನ್ಯವಾದಗಳು ...:)

ಮನಸಿನ ಮಾತುಗಳು ಹೇಳಿದರು...

ದಿನಕರ,
THANK YOU..:)

ಮನಸಿನ ಮಾತುಗಳು ಹೇಳಿದರು...

Malathi,
Thanks..:)

ಮನಸಿನ ಮಾತುಗಳು ಹೇಳಿದರು...

ಗೌತಮ್ ,
Thanks ..:)

ಮನಸಿನ ಮಾತುಗಳು ಹೇಳಿದರು...

ಗುರುಮೂರ್ತಿ ಸರ್,
ನನ್ನ ಬ್ಲಾಗಿಗೆ ಸ್ವಾಗತ ,
ಪ್ರತಿಕ್ರಿಯೆಗೆ ಧನ್ಯವಾದಗಳು :)

ಮನಸಿನ ಮಾತುಗಳು ಹೇಳಿದರು...

Subbu,
Thanks....:)

ಮನಸಿನ ಮಾತುಗಳು ಹೇಳಿದರು...

ಚಕೋರ ,
ನನ್ನ ಬ್ಲಾಗಿಗೆ ಸ್ವಾಗತ,
ನೀವು ಹೇಳಿದ್ದು ಸರಿ,
ಕಾಮೆಂಟ್ ನಿಜವಾದ ಮೌಲ್ಯಮಾಪನ ಅಲ್ಲ... ಅದು ನನ್ನ ನಂಬಿಕೆ ಕೂಡ,
ಧನ್ಯವಾದಗಳು... :)

Anveshi ಹೇಳಿದರು...

"ಇದುವರೆಗೆ ಕಾಮೆಂಟ್ ಹಾಕಿ ಪ್ರೋತ್ಸಾಹಿಸಿದೆ ಎಲ್ಲರಿಗೂ ನನ್ನ ಹೃದಯ ಪೂರ್ವಕ ಧನ್ಯವಾಗಳು"

ಅಂದ್ರಲ್ಲ, ಅದ್ಕೆ ಒಂದು ಧನ್ಯವಾದ ತಗೋಳೋಣಾಂತ ಬಂದೆ... :0

ಶುಭಾಶಯಗಳು... ಚೆನ್ನಾಗಿ ಬರೀತೀರಿ, ಬರೀತಾನೇ ಇರಿ...

ದೀಪಸ್ಮಿತಾ ಹೇಳಿದರು...

ದಿವ್ಯಾ, ಎರಡನೇ ವರ್ಷಕ್ಕೆ ಕಾಲಿಡುತ್ತಿರುವ ನಿಮ್ಮ ಬ್ಲಾಗಿಗೆ ನನ್ನ ಅಭಿನಂದನೆಗಳು. ಹೀಗೇ ಮುಂದುವರೆಯುತ್ತಿರಲಿ

ಸೀತಾರಾಮ. ಕೆ. / SITARAM.K ಹೇಳಿದರು...

ಕಥೆ ನಿರೂಪಣೆ ನವಿರಾಗಿದೆ.
ಸು೦ದರವೂ ಸಹಾ!

Unknown ಹೇಳಿದರು...

ಶುಭಾಶಯಗಳು ... ಬರವಣಿಗೆ ಮುಂದುವರೆಯಲಿ

ಮನಸಿನ ಮಾತುಗಳು ಹೇಳಿದರು...

ಅನ್ವೇಷಿ ಅವರೇ,
ನನ್ನ ಬ್ಲಾಗಿಗೆ ಸ್ವಾಗತ,
ಧನ್ಯವಾದಕ್ಕೆನಂತೆ ? ಬೇಕಾದಷ್ಟು ತೆಗೆದು ಕೊಳ್ಳಿ ..
ನೀವು ಕೇಳುವುದು ಹೆಚ್ಚೋ ,ನಾನು ಕೊಡುವುದು ಹೆಚ್ಚೋ ?
ಧನ್ಯವಾದಗಳು...

ಮನಸಿನ ಮಾತುಗಳು ಹೇಳಿದರು...

Deepasmitha ,
ನಾನಾ ಬ್ಲಾಗಿಗೆ ಸ್ವಾಗತ,
ನಿಮ್ಮ ಶುಭ ಹಾರೈಕೆಗೆ ನನ್ನ ಧನ್ಯವಾದಗಳು ..:):)

ಸೀತಾರಾಮ. ಕೆ. ಅವರೇ,
ನನ್ನ ಬ್ಲಾಗಿಗೆ ಸ್ವಾಗತ,
ಕಥೆಯನ್ನು ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ..:):)

ಸುಧೀಂದ್ರ ಅವರೇ,
ನನ್ನ ಬ್ಲಾಗಿಗೆ ಸ್ವಾಗತ,
ಧನ್ಯವಾದಗಳು ..:):)

ಅನಾಮಧೇಯ ಹೇಳಿದರು...

ದಿವ್ಯ, ಬಹಳ ದಿನಗಳಿಂದ ಯಾವ ಬ್ಲೋಗಿಗೂ ಭೇಟಿ ಕೊಡದ ಕಾರಣ ನಿಮ್ಮ 'ವರುಷ ತುಂಬಿದ ದಿನ'ಕ್ಕೆ ತಕ್ಷಣ ಶುಭ ಹಾರೈಸಲು ಆಗಲಿಲ್ಲ. ಇವತ್ತು ನೋಡಿದೆ. ನಿಮ್ಮ ಬರಹ ಮೆಚ್ಚಿಕೊಂಡವರಲ್ಲಿ ನಾನು ಒಬ್ಬಳು. ಹೀಗೆ ನಿಮ್ಮ 'ಮನಸ್ಸಿನ ಮಾತುಗಳು' ಹೊರಬರುತ್ತಿರಲಿ, ಹೊಸ ಆಯಾಮಗಳ ಬಗ್ಗೆಯೂ ಬರೆಯುವಂತಾಗಲೆಂಬ ಹಾರೈಕೆ ಈ ಅಕ್ಕನದು :)

ಅನಾಮಧೇಯ ಹೇಳಿದರು...

hats off to your manasina maatugalu and continue for ever

ಮನಸಿನ ಮಾತುಗಳು ಹೇಳಿದರು...

ಸುಮಕ್ಕ,
ನಿಮ್ಮ ಹಾರೈಕೆ ,ಆಶೀರ್ವಾದ ನನ್ನ ಮೇಲೆ ಯಾವಾಗಲೂ ಹೀಗೆ ಇರಲಿ...
ಧನ್ಯವಾದಗಳು..:)

*****************

Anonymous,
Thanks..:)

prakash_hegde ಹೇಳಿದರು...

Tumbaa late agi comment maadtirodakke kshame erali.. Happy second year!!!