ಶನಿವಾರ, ನವೆಂಬರ್ 28, 2009

ಆ ಪುಟ್ಟ ಕಿಟಿಕಿಯಾಚೆ.....

ಪುಟ್ಟ ಕಿಟಕಿಯಲ್ಲಿ , ಕೀಬೋರ್ಡ್ನಿಂದ ಅಕ್ಷರಗಳನ್ನು ಕಟ್ಟುವಾಗ ಕಣ್ಣ ಪರದೆಗೆ ಕಾಣದೆ ಆಚೆಯಿಂದ ಬರುತ್ತಿದ್ದ ಪ್ರತಿಯೊಂದು ಪ್ರಶ್ನೆಗಳಿಗೂ ಪ್ರತಿಕ್ರಿಯಿಸುತ್ತಿರುವಾಗ , ನಿನ್ನ ಎಲ್ಲ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಾಗ ., ನಿನ್ನ ಬಗೆಗೆ ಸಾವಿರ ಕನಸಿನ ಮಹಲುಗಳನ್ನು ಕಟ್ಟುವಾಗ , ನಿನ್ನ ಮೋಹ ಪಾಶದಲ್ಲಿ ಬೀಳುವಾಗ ,ನಿನ್ನ ಆಕೃತಿಯನ್ನು ಮನದಲ್ಲೇ ಚಿತ್ರಿಸುತ್ತಿರುವಾಗ , ಒಂಟಿಯಾಗಿದ್ದಾಗ ನಿನ್ನ ಬಗ್ಗೆಯೇ ಯೋಚಿಸುವಾಗ , ಗೆಳತಿಯಾರಾದರು ಗಂಡನ ಬಗೆಗೆ ಮಾತನಾಡುವಾಗ ನಿನ್ನ ನೆನೆಸಿಕೊಂಡು ನಾಚಿಕೊಳ್ಳುವಾಗ ,ಇಂಟರ್ನೆಟ್ ಗೆ ಹೋಗಿ ಘಂಟೆಗಟ್ಟಲೆ ಕುಳಿತು ಹಣ ಕೊಡುವಾಗ ,ಕನಸುಗಳಲ್ಲಿ ಬರೀ ನಿನ್ನನ್ನೇ ಕಾಣುವಾಗ , ಒಂದೊಮ್ಮೆ ಊಟ ತಿಂಡಿ ಬಿಟ್ಟು ನಿನ್ನೊಂದಿಗೆ ಚಾಟ್ ಗೆ ಇಳಿಯುವಾಗ , ಎಲ್ಲ ಹುಡುಗರಲ್ಲೂ ನಿನ್ನ ಬಿಂಬವನ್ನೇ ಕಾಣುತ್ತಿದ್ದಾಗ , ನಿನ್ನನ್ನು ನೋಡಿದಾಗ ಯಾವುದೋ ನಿಧಿ ಸಿಕ್ಕಂತೆ ಭಾಸವಾದಾಗ ,ಜೀವನದ ಅತೀ ದೊಡ್ಡ ಸಂತೋಷದ ಕ್ಷಣ ಇದುವೇ ಎಂದು ತಿಳಿದುಕೊಳ್ಳುವಾಗ , ಎಲ್ಲರೆದುರು ನನಗೂ ಒಬ್ಬ ಗೆಳೆಯ ಇದ್ದಾನೆ ಎಂದು ಹೆಮ್ಮೆ ಇಂದ ಬೀಗುವಾಗ , ಮನಸಿನ ಮಾತುಗಳನ್ನು ನಿನ್ನ ಹತ್ತಿರ ಹಂಚಿಕೊಳ್ಳುವಾಗ ,ಒಂಟಿಯಾಗಿ ದೇವಸ್ಥಾನಕ್ಕೆ ಹೋಗುವಾಗ ಮುಂದಿನ ಸಾರಿ ನನ್ನ ಜೊತೆ ನೀನಿರುತ್ತೀಯ ಎಂದು ಕಲ್ಪಿಸಿಕೊಳ್ಳುವಾಗ ,ಹೀಗೆ break ಇಲ್ಲದೆ ಏನೇನೋ ತಿಳಿದುಕೊಳ್ಳುವಾಗ , ಎಲ್ಲೂ ಒಂದು ಕ್ಷಣವೂ ನಾನು ಸೋಲಲು ದಾರಿ ಮಾಡಿಕೊಳ್ಳುತ್ತಿದ್ದೇನೆ ಎಂದು ಗೊತ್ತೇ ಆಗಲಿಲ್ಲವಲ್ಲ!!! ನನಗೆ ನಾನೇ ಗುಂಡಿ ತೋಡಿಕೊಳ್ಳುತ್ತಿದ್ದೇನೆ ಎನಿಸಲಿಲ್ಲ .

ಅದೇನು ಮೋಡಿ ಇದೆಯೋ ನಿನ್ನ ಕೈ ಬೆರಳುಗಳಲ್ಲಿ , ನೀ ಮೂಡಿಸುವ ಅಕ್ಷರಗಳಲ್ಲಿ , ನೀ ಕೊಡುವ ಪ್ರತಿಕ್ರಿಯೆಗಳ ರೀತಿಯಲ್ಲಿ ಪುಟ್ಟ ಕಿಟಿಕಿಯಾಚೆ ಅದೇನು ಅಂಥ ಸೆಳತವಿತ್ತೋ ನಾಕಾಣೆ ಮೋಡಿಗೆ ಬೆರಗಾದವರಲ್ಲಿ ನಾನೂ ಒಬ್ಬಳ ? ಅಥವಾ ನಾನೇ ಒಬ್ಬಳ ?
ಅನಿರೀಕ್ಷಿತವಾಗೆ ಬರುವುದು ಪ್ರೀತಿ

ದಡ್ಡಿ ,ದಡ್ಡಿ , idiot ಎಂದು ನೀನು ಬೈಯ್ಯುವಾಗ ಸುಮ್ಮನೆ ತಮಾಷೆಗೆಂದು ತಿಳಿದುಕೊಂಡಿದ್ದು ನನ್ನ ತಪ್ಪೆಂದು ಅರಿವಾಗಿದೆ
ಪುಟ್ಟ ಕಿಟಕಿಯಲ್ಲಿ ನೀ ಮೂಡಿಸುತ್ತಿದ್ದ ಒಂದೊಂದು ಅಕ್ಷರಗಳಿಗೆ ಗಂಟೆಗಟ್ಟಲೆ ಕಾದು ಸುಸ್ತಾಗಿ , ನಿನ್ನಿಂದ ಕಡೆ ಪಕ್ಷ ಒಂದು bye ಕೂಡ ಕೇಳದೆ ಬೇಸರಿಸಿದ ದಿನಗಳು ಅದೆಷ್ಟೋ ?ನೀ ಮೂಡಿಸಿದ ಪ್ರತಿಯೊಂದು ಅಕ್ಷರಗಳನ್ನು ಜೋಪಾನವಾಗಿಟ್ಟುಕೊಂಡು ಪದೇ ಪದೇ ಅದನ್ನ ನೋಡಿ ಸಂತೋಷ ಪಟ್ಟಿದ್ದು , ಒಬ್ಬಳೇ ಇದ್ದಾಗ ನಿನ್ನ ನೆನೆಸಿಕೊಂಡ ದಿನಗಳು ಅದೆಷ್ಟೋ ? ಹುಟ್ಟಿದ ದಿನದಂದು ನಿನ್ನ ಒಂದು ಶುಭಾಶಯವೂ ಸಿಗದೇ ಅತ್ತ ಕಣ್ಣೀರು ಅದೆಷ್ಟೋ ?ಆದರೂ ನಿನ್ನ ನಗುವನ್ನು ಬಯಸಿದೆ. ನಿನ್ನೊಂದಿಗೆ ಮಾತಾಡಲು ,ನಿನ್ನ ಧ್ವನಿ ಕೇಳಲು ಗೆಳತಿಯರನ್ನು, ಗೆಳೆಯರನ್ನು ದೂರಮಾಡಿಕೊಂಡ ,ದೂರವಿಟ್ಟ ದಿನಗಳು ಅದೆಷ್ಟೋ ?ನೀನು ಬರಲಿಲ್ಲ ಎಂದು ನನ್ನಷ್ಟಕ್ಕೆ ನಾನೇ ,ಯಾರಿಗೂ ಹೇಳೋಕಾಗದೆ , ಬಿಡುವುದ್ದಕ್ಕೂ ಆಗದೆ ಕಣ್ಣೀರಾದ ದಿನಗಳು ಅದೆಷ್ಟೋ ….

ಇಷ್ಟಾದರೂ ಏನೂ ಆಗದಿರುವ ಹಾಗೆ ಸಂತೋಷದಿಂದಿರುವ ನೀನೇ ಬುದ್ದಿವಂತ ಕಣೋ..
ನಾನು ದಡ್ಡಿ ಅಲ್ಲದೆ ಇನ್ನೇನು ? ನೀನೇ ಬುದ್ದಿವಂತ ಗೆಳೆಯ ತಕರಾರಿಲ್ಲದೆ ಒಪ್ಪಿಕೊಳ್ಳುತ್ತೇನೆ …....
ಕಿಟಕಿಯಾಚೆ ಇದ್ದ ಬೆರಳುಗಳಿಂದ ಮೂಡಿದ ಅಕ್ಷರಗಳನ್ನಷ್ಟೇ ನನ್ನ ಪಾಲಿಗೆ ಬಿಟ್ಟು , ಹೊರಟು ಹೋದೆಯಲ್ಲ ಗೆಳೆಯ ? ನಿನ್ನ ಹಿಂದೆ ಹಿಂದೆ ನಾ ಬರಬೇಕು ಎಂದಿದ್ದರೆ ನೀ ಹೇಳಬಹುದಿತ್ತು ನಾನೂ ಸಂತಸದಿಂದ ಬರುತ್ತಿದ್ದೆ ....ಆದರೆ ನೀನೇಕೆ ಹಾಗೆ ಮಾಡಲಿಲ್ಲ ??. ತೆರೆದ ಪುಸ್ತಕದ ಹಾಗೆ ನನ್ನ ಬದುಕಿನ ಪ್ರತಿಯೊಂದು ಪುಟಗಳನ್ನು ನಿನ್ನ ಮುಂದೆ ಬಿಚ್ಚಿಡಬೇಕು ಎಂಬ ಆಸೆಗೆ ಕೊಳ್ಳಿ ಇಟ್ಟು ಏಕೆ ಹೋದೆ ?ನಿನಗೆ ಏನೆಂದು ಹೇಳಬೇಕೋ ತಿಳಿಯುತ್ತಿಲ್ಲಏನೂ ಹೇಳದೆ ಇರುವುದೇ ಒಳ್ಳೆಯದ ??? ಗೊತ್ತಿಲ್ಲ ...


[’ಸಖಿ’ ಮ್ಯಾಗಜೀನ್ ನಲ್ಲಿ ಪ್ರಕಟಿತ]

26 ಕಾಮೆಂಟ್‌ಗಳು:

ದಿಲೀಪ್ ಹೆಗಡೆ ಹೇಳಿದರು...

ನಿಮ್ಮ ಮನಸು ಮತ್ತೆ ಮೆತ್ತಗೆ ಮಾತನಾಡಿದೆ.. ಮತ್ತದು ಮನಸ್ಸಿಗೆ ಹಿಡಿಸುವಂತಿದೆ.. ಅಭಿನಂದನೆಗಳು...

ಸವಿಗನಸು ಹೇಳಿದರು...

ದಿವ್ಯ,
ನೀವು ದಡ್ಡಿ ಅಲ್ಲ...ಆ ನಿಮ್ಮ ಹುಡುಗನಿಗೆ ಇದೆಲ್ಲಾ ಅರ್ಥ ಅಗಿರಲಿಲ್ಲ...ಈಗ ಖಂಡಿತ ಇದನ್ನು ನೋಡಿ ನಿಮ್ಮ ಜೊತಗೂಡುವನು.....
ಚೆಂದದ ಬರಹ....

ದಿನಕರ ಮೊಗೇರ.. ಹೇಳಿದರು...

ದಿವ್ಯ ಮೇಡಂ,
ಮನಸಿನ ಪಿಸು ಪಿಸು ಮಾತು, ಉತ್ಕಟ ಸ್ನೇಹ, ಹುಡುಗನಿಗೆ ಅರ್ಥ ಆಗತ್ತೆ....
ಹುಡುಗ ಬೈ ಹೇಳಲು ಮರೆತಿಲ್ಲ,
ಅವನಿಗೆ ಹಾಗೆ ಹೇಳಲು ಮನಸಿಲ್ಲ,
ನೀವು ಯಾವಾಗಲೂ ಅವನೊಳಗೆ ಇರುತ್ತೀರಲ್ಲ.....
ಹಾಗಾಗಿ ಬೈ ಹೇಳುವ ಪ್ರಮೇಯವೇ ಇಲ್ಲ.....

shivu ಹೇಳಿದರು...

ದಿವ್ಯ ಮೇಡಮ್,

ನಿಮ್ಮ ಮನಸ್ಸು ಮನಸ್ಸಿನಲ್ಲೇ ಮಾತಾಡುತ್ತದೆ ಅಂದುಕೊಂಡಿದ್ದೆ. ಆದ್ರೆ ಈಗ ಕೀಬೋರ್ಡು, ಕಂಪ್ಯೂಟರ್ ಮೂಲಕವೂ ಮಾತಾಡುತ್ತದೆ, ಪ್ರೀತಿಗಾಗಿ ಪರಿತಪಿಸುತ್ತದೆ ಅಂತ ಗೊತ್ತಾಯಿತು. ಬರಹ ಚೆನ್ನಾಗಿದೆ.

vijayhavin ಹೇಳಿದರು...

good writing!

ಪ್ರಶಾಂತ್ ಹುಲ್ಕೋಡು ಹೇಳಿದರು...

ha..ha..nice!!

Sumana ಹೇಳಿದರು...

ದಿವ್ಯ, ಒಳ್ಳೇ ಭಾವಾಭಿವ್ಯಕ್ತಿ ನಿಮ್ಮದು! ನಿಮ್ಮ ಹುಡುಗನಿಗೆ ನಿಮ್ಮ ಪ್ರೀತಿಯ ತೀವ್ರತೆ ಅರ್ಥ ಆಗಿರ್ಲಿಕ್ಕೂ ಸಾಕು. ವ್ಯಕ್ತಪಡಿಸಲಿಕ್ಕೆ ಆಗಿರಲಾರದು!!

ಜಲನಯನ ಹೇಳಿದರು...

ದಿವ್ಯಾ, ನಿನ್ನ ಮನಸಿನಾಸೆಯ ಭಾವನೆಯಂತರಾಳಕೆ ಕನ್ನ ಹೊಡೆಯುವಂತಹ ಮನಸ್ಸಿನ ಹುಡುಗನ ಮನದ ಪುಸ್ತಕವನ್ನು ಬಿಡಿಸಿ ಹಾಳೆಗಳ ಕರಿ ಅಕ್ಷರಗಳನೋದುತ ಚಿತ್ರವನ್ನು ಚಿತ್ತ ಪಟಲದ ಮೇಲೆ ಮರೆಯಾಗದಂತೆ ಮೂಡಿಸುತ ಅತೀವ ಸಖ್ಯತಾ ಸಂಬಂಧಕ್ಕೆ ಪೀಠಿಕೆಯನ್ನು ಮನದ ಭವಿತದ ಪುಟಗಳನ್ನು ಪೇರಿಸಿಕೊಂಡು...........ಅಮ್ಮಮ್ಮ...ಸಾಕಾಯಿತು ..ನನಗೆ..ನೀನು ಹೇಹೆ ಬರೆದೆಯೇ ಹುಡುಗಿ..??!! ಚನ್ನಾಗಿ ಮೂಡಿಸಿದ್ದೀಯ ಮೂಡಿನ ಓಟದ ಧಾಟಿಯನ್ನ....

ಜಲನಯನ ಹೇಳಿದರು...

ದಿವ್ಯಾ, ನಿನ್ನ ಮನಸಿನಾಸೆಯ ಭಾವನೆಯಂತರಾಳಕೆ ಕನ್ನ ಹೊಡೆಯುವಂತಹ ಮನಸ್ಸಿನ ಹುಡುಗನ ಮನದ ಪುಸ್ತಕವನ್ನು ಬಿಡಿಸಿ ಹಾಳೆಗಳ ಕರಿ ಅಕ್ಷರಗಳನೋದುತ ಚಿತ್ರವನ್ನು ಚಿತ್ತ ಪಟಲದ ಮೇಲೆ ಮರೆಯಾಗದಂತೆ ಮೂಡಿಸುತ ಅತೀವ ಸಖ್ಯತಾ ಸಂಬಂಧಕ್ಕೆ ಪೀಠಿಕೆಯ ಮನದ ಭವಿತದ ಪುಟಗಳನ್ನು ಪೇರಿಸಿಕೊಂಡು...........ಅಮ್ಮಮ್ಮ...ಸಾಕಾಯಿತು ..ನನಗೆ..ನೀನು ಹೇಗೆ ಬರೆದೆಯೇ ಹುಡುಗಿ..??!! ಚನ್ನಾಗಿ ಮೂಡಿಸಿದ್ದೀಯ ಮೂಡಿನ ಓಟದ ಧಾಟಿಯನ್ನ....

ಸುಧೇಶ್ ಶೆಟ್ಟಿ ಹೇಳಿದರು...

ಮೂಕವಾಗಿಸಿತು ದಿವ್ಯಾ ಅವರೇ ಈ ಬರಹ... ಒಬ್ಬ ವ್ಯಕ್ತಿಗೆ ಇದಕ್ಕಿ೦ತ ಹೆಚ್ಚಿಗೆ ಪ್ರೀತಿ ಇನ್ನೆಲ್ಲಿ ಸಿಗಬಹುದು. ಇಷ್ಟೆಲ್ಲಾ ಪ್ರೀತಿಯನ್ನು ಕಡೆಗಣಿಸಿ ಹೋದ ಆ ವ್ಯಕ್ತಿಗೆ ಮು೦ದೆ ಯಾರನ್ನಾದರೂ ಪ್ರೀತಿಸಲು ಆಗುತ್ತದೆಯೋ ಎ೦ದು ಸ೦ಶಯ ಆಗುತ್ತದೆ ನನಗೆ...

ತು೦ಬಾ ಚೆನ್ನಾಗಿ ಬ೦ದಿದೆ ಭಾವನೆಗಳು.

ಶಿವಪ್ರಕಾಶ್ ಹೇಳಿದರು...

ಈ ಪತ್ರ ಓದಿದ ಮೇಲೆ ಬರ್ತಾನೆ ಬಿಡಿ ಮೇಡಂ...
ಬರದೆ ಇದ್ರೆ, ಅವನ ಸ್ವಲ್ಪ ವಿವರಗಳನ್ನು ಕೊಡಿ... ವಿಚಾರಿಸಿಕೊಳ್ತಿನಿ... ಹ್ಹಾ ಹ್ಹಾ ಹ್ಹಾ....
ಪತ್ರ ಚನ್ನಾಗಿದೆ...

ಸೀತಾರಾಮ. ಕೆ. ಹೇಳಿದರು...

ಗದ್ಯಕಾವ್ಯ ತಮ್ಮ ಈ ಬರಹ. ಪ್ರೀತಿಯ ಉತ್ಕಟತೆಯ ಉತ್ಕ್ರುಷ್ಠ ಭಾವಾಭಿವ್ಯಕ್ತಿ. ತಮ್ಮ ಅ೦ತರಜಾಲದ ಸ್ನೇಹಿ ಓದಿದರೇ ಹಿರಿ ಹಿರಿ ಹಿಗ್ಗಿ ಹಾರಿಯಾನು. ಹಾಗಾದರೇ ನಮಗೆ ಇ೦ಥ ಗದ್ಯಕಾವ್ಯಗಳ ಭಾಗ್ಯ ಮುಚ್ಚಿತು ಎನ್ನುವ ಅವ್ಯಕ್ತ ಭೀತಿ.

ಸುಬ್ರಹ್ಮಣ್ಯ ಹೆಗಡೆ ಹೇಳಿದರು...

manassige muttuvanta baraha.. chennagide....

ಸುಶ್ರುತ ದೊಡ್ಡೇರಿ ಹೇಳಿದರು...

ಹೌದು ಹೌದು.. :P ;)

ಸಾಗರದಾಚೆಯ ಇಂಚರ ಹೇಳಿದರು...

ತುಂಬಾ ಸುಂದರ ಬರಹ
ಮನಸ್ಸಿಗೆ ಬಹಳ ಹಿಡಿಸಿತು

Ranjita ಹೇಳಿದರು...

Excellent.. ತುಂಬಾ ಚೆನ್ನಾಗಿದೆ ...

Divya Hegde ಹೇಳಿದರು...

ದಿಲೀಪ್ ಅವರೇ,
ಅಭಿಪ್ರಾಯಕ್ಕೆ ಧನ್ಯವಾದಗಳು..:)

========================
ಸವಿಗನಸು,
ನಿಮ್ಮ ಹಾರೈಕೆಗೆ ಧನ್ಯವಾದಗಳು ಸರ್...:)

========================
ದಿನಕರ ಮೊಗೇರ,
ನಿಜ ನೀವು ಹೇಳಿದ್ದು..
ಹಾಗೆ ಅಗಲಿ ಎಂಬ ಆಶಯ ಅಷ್ಟೆ ನನದು ..:)

Divya Hegde ಹೇಳಿದರು...

shivu sir,
thank you..

====================
Vijay,
Thanks...:)

===================
ಪ್ರಶಾಂತ್ ಹುಲ್ಕೋಡು,
ನನ್ನ ಬ್ಲಾಗಿಗೆ ಸ್ವಾಗತ,
ಅಭಿಪ್ರಾಯಕ್ಕೆ ಧನ್ಯವಾದಗಳು..:)

=======================
Sumakka,
ಧನ್ಯವಾದಗಳು..:)

===================

Divya Hegde ಹೇಳಿದರು...

ಜಲನಯನ sir,
ಲೇಖನ ಮೆಚ್ಚಿ ಅಭಿಪ್ರಾಯ ತಿಳಿಸಿದಕ್ಕೆ ಧನ್ಯವಾದಗಳು ..:)
==========================
ಶಿವಪ್ರಕಾಶ್ ,
he he...ನನಗೆ ಗೊತ್ತಿದ್ರೆ ತಾನೆ ನಿಮಗೆ ಕೊಡುವುದು..:P
==============================
ಸುಧೇಶ್ ಶೆಟ್ಟಿ,
Thanks..:)
========================
ಸೀತಾರಾಮ. ಕೆ. ಅವರೇ,
ಏನೇ ಆದರು ನನ್ನ ಈ ಮನಸಿನ ಮಾತುಗಳು ಹೊರಹೊಮ್ಮುತ್ತಲೇ ಇರುತ್ತದೆ ..
ಅಭಿಪ್ರಾಯಕ್ಕೆ ಧನ್ಯವಾದ..:)
====================
ಸುಬ್ರಹ್ಮಣ್ಯ ಹೆಗಡೆ,
Thanks...:)

Divya Hegde ಹೇಳಿದರು...

ಸುಶ್ರುತ ದೊಡ್ಡೇರಿ,
ಏನು ಹೌದು ಎಂದು ವಿವರಿಸಿ ಹೇಳಿ ಬಿಡಿ ನೀವೇ..:P
ಧನ್ಯವಾದ..:)

=====================
ಸಾಗರದಾಚೆಯ ಇಂಚರ ,
thank you..:)

==================
Ranjita ,
thank you so much...:)

suji ಹೇಳಿದರು...

:(

sneha ಹೇಳಿದರು...

Hey Divya, sakhattagi baradde kane...! raashi ishta aatu...

ರವೀಂದ್ರನಾಥ್.ಬಿ.ಆರ್ ಹೇಳಿದರು...

ನಿತ್ಯ ಸಾಯ ಹೊರಟ ರವಿಯು, ತಮವ ಜಯಿಸಿ ಬೆಳಗುತಾನೆ,
ತಮದಿ ಬದುಕೊ ಪೂರ್ಣ ಚಂದ್ರ, ರಾತ್ರಿ ಕನಸ ಕಾಯುತಾನೆ.
ಎಲ್ಲಿಗೆ ಹೊಗ್ತಾನೆ ? ಬಂದೇ ಬರ್ತಾನೆ....

ರವೀಂದ್ರನಾಥ್.ಬಿ.ಆರ್ ಹೇಳಿದರು...

ನಿತ್ಯ ಸಾಯ ಹೊರಟ ರವಿಯು, ತಮವ ಜಯಿಸಿ ಬೆಳಗುತಾನೆ,
ತಮದಿ ಬದುಕೊ ಪೂರ್ಣ ಚಂದ್ರ, ರಾತ್ರಿ ಕನಸ ಕಾಯುತಾನೆ.
ಎಲ್ಲಿಗೆ ಹೊಗ್ತಾನೆ ? ಬಂದೇ ಬರ್ತಾನೆ....

Ravindranath B.R ಹೇಳಿದರು...

ನಿತ್ಯ ಸಾಯ ಹೊರಟ ರವಿಯು, ತಮವ ಜಯಿಸಿ ಬೆಳಗುತಾನೆ,
ತಮದಿ ಬದುಕೊ ಪೂರ್ಣ ಚಂದ್ರ, ರಾತ್ರಿ ಕನಸ ಕಾಯುತಾನೆ.
ಎಲ್ಲಿಗೆ ಹೊಗ್ತಾನೆ ? ಬಂದೇ ಬರ್ತಾನೆ....

ravindranath b r ಹೇಳಿದರು...

ನಿತ್ಯ ಸಾಯ ಹೊರಟ ರವಿಯು, ತಮವ ಜಯಿಸಿ ಬೆಳಗುತಾನೆ,
ತಮದಿ ಬದುಕೊ ಪೂರ್ಣ ಚಂದ್ರ, ರಾತ್ರಿ ಕನಸ ಕಾಯುತಾನೆ.
ಎಲ್ಲಿಗೆ ಹೊಗ್ತಾನೆ ? ಬಂದೇ ಬರ್ತಾನೆ....