ಭಾನುವಾರ, ನವೆಂಬರ್ 08, 2009

ಕನಸು ಈಡೇರಿದಂತೆಯೇ....


ನನಗೆ ಚಿಕ್ಕಂದಿನಿಂದಲೂ ಒಂದು ಕನಸಿತ್ತು ... ಅದೇನೆಂದರೆ ನಾನು software engineer ಆಗ ಬೇಕೆಂದು ...
ಯಾಕೋ ಗೊತ್ತಿಲ್ಲ ...ಯಾವಾಗಲೂ ಹಾಗೆ ಅನಿಸುತಿತ್ತು...
software engineer ಆದರೆ ಚೆನ್ನಾಗಿ ಸಂಪಾದನೆ ಮಾಡಬಹುದು, ಕಾರು, ಮನೆ ಎಲ್ಲಾ ಕೊಂಡುಕೊಳ್ಳಬಹುದು...
ಎಲ್ಲದಕ್ಕಿಂತ ಹೆಚ್ಚಾಗಿ ಬೇಕಾದಷ್ಟು chats ತಿನ್ನಬಹುದು...ಇದು ಯಾಕೆಂದರೆ ನನ್ನ ಅಮ್ಮ ನನಗೆ chats ಜಾಸ್ತಿ ತಿನ್ನಲು ಬಿಡುತ್ತಿರಲಿಲ್ಲ.
ತುಂಬಾ ತಿಂದರೆ ಆರೋಗ್ಯ ಕೆಡುತ್ತದೆ ಎಂದು ಅದನ್ನು ಆದಷ್ಟು ನನ್ನಿಂದ ದೂರವೇ ಇಡುತ್ತಿದ್ದರು ....ಅದು ನನ್ನ ಅಮ್ಮನ ಕಾಳಜಿ ...
ಆದರೆ ನನಗಾಗ ಅದು ಕಾಳಜಿ ಎಂದು ತಿಳಿದುಕೊಳ್ಳುವಷ್ಟು ಬುದ್ದಿ ಇರಲಿಲ್ಲ...
ನಾನು ಯಾವಾಗಲೂ ಒಳ್ಳೇ ಅಂಖಗಳನ್ನು ತೆಗೆದು ಪಾಸ್ ಆಗುತ್ತಿದ್ದೆ ...
ಹೀಗಿರುವಾಗ ನನ್ನ engineer ಆಗುವ ಕನಸು ದಿನೇ ದಿನೇ ಹೆಚ್ಚಾಗುತ್ತಲೇ ಹೋಯಿತು..
ದ್ವಿತೀಯ PUC ನಲ್ಲೂ ಒಳ್ಳೆ ಅಂಖಗಳೇ ಬಂದಿದ್ದವು...ಆದರೆ ನನ್ನ ಕನಸಿನಂತೆ ನನಗೆ ಎಂಜಿನಿಯರಿಂಗ್ ಮಾಡಲು ಆಗಲಿಲ್ಲ ...
ಎನೋ ಅಡಚಣೆಗಳು ಬಂದು ನನ್ನ ಕನಸುಗಳಿಗೆ ಕಲ್ಲು ಬಿದ್ದಿತ್ತು (ಇದು ಆ ಸಮಯ ಅನಿಸಿದ್ದು) ..
ನಾನು B.Sc ಗೆ ಸೇರಿಕೊಂಡೆ..ಮನೆ ಇಂದ ತುಂಬಾ ಹತ್ತಿರದಲ್ಲಿತ್ತು ಕಾಲೇಜ್ ... ಮೊದಲು ನಾನು ಮುಂದೆ ಓದುವುದಿಲ್ಲ ಎಂದು ತುಂಬಾ ಹಠ ಮಾಡಿದೆ..ಆಮೇಲೆ ಅಮ್ಮ ಹೇಳಿದ ಮೇಲೆ ಒಪ್ಪಿ ಕೊಂಡು ಸೇರಿಕೊಂಡೆ
ನಾನು PU ಇರುವಾಗ ಒಂದು trend ಇತ್ತು ..ಅದೇನೆಂದರೆ ಬುದ್ದಿವಂತರು ಎಂಜಿನಿಯರಿಂಗ್ , ಮೆಡಿಕಲ್ಗೆ ಹೋಗುತ್ತಾರೆ ...
ಎಲ್ಲೂ ಸೀಟ್ ಸಿಗಲಿಲ್ಲ ಎಂದವರು ಮಾತ್ರ ಡಿಗ್ರಿ ಮಾಡುತ್ತಾರೆ ಎಂದು..(ಈಗ trend change ಆಗಿರಬಹುದು)
ನನ್ನ ಕಣ್ಣ ಮುಂದೆ, ನನಗಿಂತ ಕಡಿಮೆ ಅಂಖ ತೆಗೆದವರು ಎಂಜಿನಿಯರಿಂಗ್ ಗೆ ಹೋಗುತ್ತಿದ್ದರೆ ನನಗೆ ಒಳಗೊಳಗೇ ಬೇಸರವಾಗುತ್ತಿತ್ತು...
B.Sc ಕ್ಲಾಸ್ ನಲ್ಲೂ ಯಾಕೋ ಮುಜುಗರ..ಏಕೆಂದರೆ ಅಲ್ಲಿ ನನ್ನ class mates ಎಲ್ಲಾ ನನಗಿಂತ ಕಡಿಮ ಅಂಖ ತೆಗೆದವರು..
just pass ಆದವರು ... ನನಗೇಕೋ ನಾನು ಇಲ್ಲಿ ಸಲ್ಲುವುದಿಲ್ಲ ಎಂದು ತುಂಬಾ ಅನಿಸುತಿತ್ತು...ಆದರೂ ಹೇಗೋ ಹೊಂದಿಕೊಂಡು ಹೋದೆ..
'ಹಾಳೂರಲ್ಲಿ ಇದ್ದವನೇ ಗೌಡ' ಎನ್ನುವ ತರಹ ನನಗೆ ಎಲ್ಲಾ ಪರೀಕ್ಷೆಗಳಲ್ಲಿ ಒಳ್ಳೆ ಅಂಖ ಬರುತಿತ್ತು ..ಏಕೆಂದರೆ ಪ್ರತಿಸ್ಪರ್ಧಿ ಇರಲಿಲ್ಲ ನೋಡಿ..
(ಹಾಗೆಂದು ನಾನು ಇಲ್ಲಿ ಡಿಗ್ರಿ ಬಗ್ಗೆ ಕೀಳಾಗಿ ಹೇಳುತ್ತಿಲ್ಲ.. ನಾನು pure science ಮಾಡಿದ್ದರ ಬಗ್ಗೆ ಹೆಮ್ಮೆ ಇದೆ...ನನಗೆ ಆಗ ಅನಿಸುತಿದ್ದನ್ನು ಹೇಳುತ್ತಿದ್ದೀನಿ ಅಷ್ಟೆ ).. ಡಿಗ್ರಿ ಮುಗಿಯಲು ಇನ್ನೇನು 3 ತಿಂಗಳುಗಳಿದ್ದವು....
ಆಗಲೇ ನನಗೆ 3 ಕಂಪೆನಿಗಳ offer letter ಕೈಯಲ್ಲಿತ್ತು...ಕೆಲಸ ಸಿಕ್ಕಾಗಿತ್ತು ಆಯಾಸವಿಲ್ಲದೆ...
ಅದೇ ನಾನು ಎಂಜಿನಿಯರಿಂಗ್ ಮಾಡಿದ್ದರೂ ಸಿಗುತ್ತಿತ್ತೇ?? ಗೊತ್ತಿಲ್ಲ...
ಅದೇ ನನ್ನ PU ಗೆಳೆಯರು ಎಂಜಿನಿಯರಿಂಗ್ ಮಾಡಿ ಈಗ jobless....
ಎಲ್ಲಿ ನೋಡಿದರು openings ಇಲ್ಲ ..recession..ಕೆಲಸ ಸಿಕ್ಕಿದವರಿಗೆ ಕೈಗೆ offer letter ಬರಿತ್ತಿಲ್ಲ ...
2-3 ವರ್ಷ ಬಾಂಡ್ ಕೊಡಬೇಕೆಂದು ಕೇಳುವ ಕಂಪನಿಗಳು..ಇಷ್ಟೆಲ್ಲದರ ಮದ್ಯೆ ಕೆಲಸ ಸಿಕ್ಕಿದರೂ work satisfaction ಅನ್ನುವುದು ದೂರದ ಮಾತು...
ಇನ್ನು BPO sector ಟ್ರೈ ಮಾಡೋಣ ಎಂದರೆ over qualified ಎಂಬ ಪಟ್ಟ ಕಟ್ಟಿ resume ನೋಡಿದ ಕ್ಷಣವೇ ಮನೆಗೆ ಕಳಿಸುತ್ತಾರೆ... ಒಂದು ವೇಳೆ ಸಿಕ್ಕರೂ ಇವರ ego ಬಿಡಬೇಕಲ್ಲ ಇವರಿಗೆ ಹೋಗಲು..
ಎಂಜಿನಿಯರಿಂಗ್ ಮಾಡಿ BPO ಹೋಗಬೇಕ ಎನ್ನೋ ಧೋರಣೆ ಕೆಲವರದು..
(ನಾನು ಹೇಳುತ್ತಿರುವುದು ನಾನು ಡಿಗ್ರಿ ಓದುವಾಗ ಎಂಜಿನಿಯರಿಂಗ್ ಓದಿದವರಿಗೆ ಮಾತ್ರ)
ಇದನ್ನೆಲ್ಲಾ ನೋಡಿದಾಗ ಅನಿಸುತ್ತದೆ ..ಆಗುವುದೆಲ್ಲ ಒಳ್ಳೇದಕ್ಕೆ ಎಂಬ ಮಾತು ಎಷ್ಟು ಸತ್ಯ ಎಂದು..
ಒಂದು ವೇಳೆ ನಾನು ಎಂಜಿನಿಯರಿಂಗ್ ಮಾಡಿದ್ದರೆ ಏನಾಗುತ್ತಿತ್ತೋ ಅದು ಗೊತ್ತಿಲ್ಲ ..ಆದರೆ ಎಂಜಿನಿಯರಿಂಗ್ ಮಾಡಿದವರಿಗಿಂತ ಯಾವ ರೀತಿಯಲ್ಲೂ ನಾನು ಕಡಿಮೆ ಇಲ್ಲವಲ್ಲ ಎಂಬ ಸಮಾಧಾನ ಎಲ್ಲೋ ಒಂದು ಕಡೆ ಇದ್ದೇ ಇದೆ. only difference is I dont have that certificate ಅಷ್ಟೆ....
ಕನಸು ನನಸಾಗಲಿಲ್ಲವಲ್ಲ ಎಂದು ಅನಿಸುತ್ತಿದ್ದರೂ ವಾಸ್ತವವೇ ಹಿತವಾಗಿದೆ ಎಂದು ಅನಿಸ ತೊಡಗಿದೆ ...
ಹಾಗೆ ನನ್ನ chats ತಿನ್ನುವ ಕಾರ್ಯ ಬರವಿಲ್ಲದೆ ಸಾಗುತ್ತಲೇ ಇದೆ... ನನ್ನ ಕನಸು ಈಡೇರಿದಂತೆಯೇ ಅಲ್ಲವ??

13 ಕಾಮೆಂಟ್‌ಗಳು:

ಲೋದ್ಯಾಶಿ ಹೇಳಿದರು...

ಆತ್ಮೀಯ

ನನ್ನನ್ನ ಇಂಜಿನೀರಿಂಗ್ ಕಳಿಸ್ಲಿಲ್ಲ.
ಕಳಿಸಿದ್ರು ಕೆಲ್ಸಾ ಸಿಕ್ತಿತ್ತೋ ಇಲ್ವೋ?
ನನ್ನದು ಇಂಜಿನೀರಿಂಗ್ ಡಿಗ್ರಿಗಿಂತ ಏನು ಕಂಮ್ಮಿ?

ಎಲ್ಲದೂ ಸರಿಯೇ. ಆದ್ರೆ ನಮ್ಗೆ ವಿದ್ಯೆಯ ಜೊತೆಗೆ ವಿವೇಕ ಬರ್ಬೇಕು. ಇಲ್ದೇ ಹೋದ್ರೆ ಯಾವ್ ಡಿಗ್ರೀ ಸರ್ಟಿಪಿಕೇಟ್ ಇಟ್ಕೋಂಡು ಏನು ಪ್ರಯೋಜನ ಹೇಳಿ?

ಇದು ನಿಮ್ಮನ್ನ ವ್ಯಯಕ್ತಿಕವಾಗಿ ದೂಷಿಸೋದಲ್ಲ. ನೀವೇನಾದ್ರೂ ನನ್ನೇ ಉದ್ದೇಶ್ವಾಗಿ ಇಟ್ಕೋಂಡು ಈ ಬರಹ ಬರ್ದೀರ? ಇಲ್ವಲ್ಲ? ಹಾಗೆ ನಾನೂ ಸಹ ಸಹಜವಾಗಿ, ಸ್ವಾಬಾವಿಕವಾಗಿ ಪ್ರತಿಕ್ರಿಯಿಸಿದ್ದಷ್ಟೆ.

sunaath ಹೇಳಿದರು...

ಆಗುವದೆಲ್ಲ ಒಳ್ಳೆಯದಕ್ಕೇ ಅಲ್ವಾ?
ಈಗ ನೋಡಿ, ನೀವು ಬೇಕಾದಷ್ಟು ಚಾಟ್ ತಿನ್ನಬಹುದು; ಹಾಗೂ ನಮ್ಮ ಜೊತೆಗೆ blogನಲ್ಲಿ chat ಮಾಡಬಹುದು!

Divya Hegde ಹೇಳಿದರು...

ಲೋದ್ಯಾಶಿ ಅವರೇ ,
ನಿಮ್ಮ ಕಾಮೆಂಟ್ಸ್ ಗೆ ಧನ್ಯವಾದಗಳು...
ನೋಡಿ ತುಂಬ ಸಂತೋಷ ಆಯ್ತು..
ನಾನು ನನ್ನ ಬ್ಲಾಗಿನಲ್ಲಿ ಬರೆಯುವುದು ಬರೀ ನನ್ನ ಭಾವನೆಗಳನ್ನು ಮಾತ್ರ..ಯಾರನ್ನೋ ಉದ್ದೇಶಿಸಿ, ಅಥವಾ ಯಾರನ್ನೋ ನೋಯಿಸುವ ಯಾವುದೇ ಇಷ್ಟ ಇಲ್ಲ...
ಒಂದುವೇಳೆ ಯಾರಾದರು ಓದಿದವರು personal ಆಗಿ ತಗೊಂಡರೆ ತಪ್ಪು ನನ್ನದಲ್ಲ..!!!
ಹಾಗೆ ನನ್ನ 'about me 'ಅನ್ನುವುದರಲ್ಲಿ mention ಮಾಡಿದ್ದಿನಲ್ಲ ...ಹಾಗೆ ನನಗೆ ನನ್ನ ಬರಹದ ಬಗ್ಗೆ ನಮ್ಮ ಓದುಗ ಮಿತ್ರರಿಂದ opinion ಬೇಕು.. so that I can improve myself on writing..
ಕಾಮೆಂಟ್ (+ve) or (-ve) ಅದು ಮುಖ್ಯ ಅಲ್ಲ..
your comment is considered...
ದಿವ್ಯ

Divya Hegde ಹೇಳಿದರು...

Sunaath ಅವರೇ ,
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
divya

Dr U B Pavanaja ಹೇಳಿದರು...

ಭಾರತದಲ್ಲಿ ಮಾಡುವ ಬಹುಪಾಲು ಪ್ರೋಗ್ರಮ್ಮಿನ್ಗ್ಗಳಿಗೆ ಇಂಜಿನಿಯರಿಂಗ್ ಡಿಗ್ರೀ ಕಂಡಿತಾ ಬೇಡ. ಹಾಗೆ ನೋಡಿದರೆ ಬಿ ಎಸ್ ಸಿ ಕೂಡ ಬೇಡ. ಪಿ ಯು ಸಿ ಮತ್ತು ಉತ್ತಮ ಮೆದುಳು ಸಾಕು. ನಾನು ಇಂಜಿನಿಯರಿಂಗ್ ಮಾಡಿಲ್ಲ. ಅದರಿಂದ ನನಗೇನು ತೊಂದರೆ ಆಗಿಲ್ಲ. ನಾನು ಈಗ ಸಾಫ್ಟ್ವೇರ್ ಕ್ಷೆತ್ರದಲ್ಲಿದ್ದೇನೆ.

-ಪವನಜ

ಶಿವಪ್ರಕಾಶ್ ಹೇಳಿದರು...

ಹ್ಹಾ ಹ್ಹಾ ಹ್ಹಾ.... ಆಗುವದೆಲ್ಲ ಒಳ್ಳೆಯದಕ್ಕೇ ಬಿಡಿ... :)

ಸವಿಗನಸು ಹೇಳಿದರು...

ದಿವ್ಯ,
ನೀವೇಳಿರೊದು ಖಂಡಿತ ನಿಜ.....ನಾನು ಇಂಜಿನಿಯರಿಂಗ್ ಮಾಡುವಾಗ ಈ ತರಹ ಭಾವನೆಗಳು ಕೆಲವು ಜನರಲ್ಲಿ ಇದ್ದವು....
ವಿದ್ಯೆ ಯಾವುದಾದರೇನೂ ವಿವೇಕ ಇರಬೇಕು ಮೊದಲು....
ನಾವು ಇಂಜಿನಿಯರಿಂಗ್ ಮಾಡಿ ಕಡಿದು ಕಟ್ಟೆ ಹಾಕಿದ್ದು ಅಷ್ಟರಲ್ಲೆ ಇದೆ.....

Divya Hegde ಹೇಳಿದರು...

Dr U B Pavanaja ಅವ್ರೆ, ನಮಸ್ಕಾರ,
ನನ್ನ ಬ್ಲಾಗಿಗೆ ಸ್ವಾಗತ,
ನೀವು ಹೇಳಿದ್ದು ನಿಜ, ಎಷ್ಟೇ ಡಿಗ್ರಿ ಇದ್ರೂ ಅದನ್ನ ಸದುಪಯೋಗ ಪದಿಸಿಕೊಳ್ಳಲು ತಿಳಿದಿರಬೇಕು,
ಧನ್ಯವಾದಗಳು

Divya Hegde ಹೇಳಿದರು...

ಶಿವಪ್ರಕಾಶ್ಅವರೇ,
ನೀವು ಕೂಡ" ಆಗುವದೆಲ್ಲ ಒಳ್ಳೆಯದಕ್ಕೇ" ಎಂದು ನಂಬಿದ್ದನ್ನು ನೋಡಿ ಸಂತಸವಾಯಿತು ..;)
ಧನ್ಯವಾದ..:)

Divya Hegde ಹೇಳಿದರು...

ಸವಿಗನಸು(Mahesh) ,
correct, ವಿದ್ಯೆಗಿಂತ ವಿನಯವೇ ಮನುಷ್ಯನಿಗೆ ಭೂಷಣ ನನ್ನ ಪ್ರಕಾರವೂ ..
ಧನ್ಯವಾದ..

ಸುಧೇಶ್ ಶೆಟ್ಟಿ ಹೇಳಿದರು...

ದಿವ್ಯಾ ಅವರೇ...

ನನ್ನ ಕಥೆ ಡಿಟ್ಟೋ ಹೀಗೆ ಇದೆ... ನಾನು ಅನಿವಾರ್ಯ ಕಾರಣಗಳಿ೦ದ ಇ೦ಜಿನಿಯರಿ೦ಗಿಗೆ ಹೋಗಲು ಆಗದೆ ಬಿ.ಎಸ್.ಸಿ ಸೇರಬೇಕಾಯಿತು. ಆಗ ನಾನು ಉತ್ಸಾಹ ಕಳೆದು ಕೊ೦ಡು ಬಿಟ್ಟಿದ್ದೆ. ಈಗ ಬಿ.ಎಸ್.ಸಿ ಓದಿದ್ದಕ್ಕೆ ಯಾವ ಬೇಸರನೂ ಇಲ್ಲ... ಕೆಲಸದಲ್ಲಿ ತೃಪ್ತಿಯಿದೆ... ಬಿ.ಎಸ್.ಸಿ ಓದುವಾಗಲೇ ಸಾಹಿತ್ಯದ ಬಗ್ಗೆ ತು೦ಬಾ ಆಸಕ್ತಿ ಬ೦ದಿತ್ತು. ನಮ್ಮ ಕಾಲೇಜಿನ ವಾತಾವರಣ ಹೀಗೆ ಇತ್ತು. ಇ೦ಜಿನಿಯರ್ ಕಾಲೇಜುಗಳಲ್ಲಿ ಖ೦ಡಿತಾ ಅ೦ತಹ ವಾತಾವರಣ ಇರುವುದಿಲ್ಲ...

Divya Hegde ಹೇಳಿದರು...

ಸುಧೇಶ್ ಅವರೇ,
ನಿಮ್ಮ ಅನುಭವವನ್ನು ಹಂಚಿಕೊಂಡಿದಕ್ಕೆ ಧನ್ಯವಾದಗಳು..:)

ವಿ.ರಾ.ಹೆ. ಹೇಳಿದರು...

ಬರೀ ’ಸಂಪಾದನೆ’ ದೃಷ್ಟಿಯಿಂದ ಮಾತ್ರ ಸಾಫ್ಟ್ ವೇರ್ ಇಷ್ಟ ಇತ್ತಾ? ಅಥವಾ... ?