ಮಂಗಳವಾರ, ನವೆಂಬರ್ 03, 2009

ಕಾಲ್ಪನಿಕ ಗೆಳೆಯನಿಗೆ ಕಾಲ್ಪನಿಕ ಪತ್ರ....

ನನ್ನ ಮುದ್ದು ಕೋತಿ ,

ನಾನು ನಿನಗೆ ಧನ್ಯವಾದ ಹೇಳಬೇಕಿತ್ತು . ನಿನಗೆ ಗೊತ್ತಿಲ್ಲ ಕಣೋ ನೀನು ನನಗೆ ಅದೆಷ್ಟು ಸ್ಫೂರ್ತಿ ತುಂಬುತ್ತೀಯ ಎಂದು...
ನನಗೆ ನಿನ್ನ ಬಗ್ಗೆ ಹೆಮ್ಮೆ ಎನಿಸುತ್ತಿದೆ . ನನಗೆ ಗೊತ್ತು ನೀನೂ ಎಷ್ಟೋ ಕಷ್ಟಗಳನ್ನು ಅನುಭವಿಸಿದ್ದೀಯ ಎಂದು ..ಆದರೂ
ನನಗಾಗಿ ನಗುತ್ತಾ ನೀನು ಮಾಡುತ್ತಿರುವ ಕೆಲಸ ತುಂಬ ಖುಷಿ ಕೊಡುವಂತದ್ದು ..
ನಿಜ ಹೇಳಬೇಕೆಂದರೆ ನಿನ್ನ ಮೀಟ್ ಮಾಡಿದ ಮೊದಲ ದಿನವೇ ನನಗೆ ತಿಳಿದಿತ್ತು "
that you are a different person" ಅಂತ .
ಅದೆಷ್ಟು
ಪ್ರೌಡಿಮೆ ಇದೆ ನಿನ್ನ ಮಾತುಗಳಲ್ಲಿ , ನನ್ನ childish nature ತಿಳಿದುಕೊಂಡು ಸಣ್ಣ ಮಗುವನ್ನು treat ಮಾಡಿದ ಹಾಗೆ ಮಾಡುತ್ತೀಯ .....
ನಿನ್ನ ಹತ್ತಿರ ಸದಾ ಕಾಲ ಮಾತಾಡುತ್ತಿರುವ ಎಂದು ಅನಿಸುತ್ತದೆ ಗೆಳೆಯಏಕೆಂದರೆ ನಿನ್ನ ಹತ್ತಿರ ಮಾತಾಡುವುದೇ ಒಂದು ಹಿತ
ನನಗೆ
ನೀನು ನನ್ನ ಬಾಳ ಬೆಳಕಾಗಿದ್ದಿಯ ಗೆಳೆಯ ..
"U have helped me to see things in a better and brighter way"ಏಕೆಂದರೆ ಒಂದು ಕಾಲದಲ್ಲಿ ನಾನು ನನ್ನ ಹಲವಾರು ಭಯಗಳಿಂದ ಮುಳುಗಿ ಹೋಗಿದ್ದೆ ..
"
Completely insecured about love and hope". ನನಗನ್ನಿಸುತಿತ್ತು ಯಾರೂ ನನ್ನ ಅರ್ಥ ಮಾಡಿಕೊಳ್ಳುವುದಿಲ್ಲ ….ಅದು ಯಾರಿಗೂ ಬೇಡ ಕೂಡ ಎಂದು
ಆಗ ಬಂದಿದ್ದು ನೀನು
ಅದೇನೋ ನಿನ್ನ meet ಮಾಡುವ ಮೊದಲೇ ನನ್ನ ಮನದಲ್ಲಿ ಒಂದು
ಚಿತ್ರ , ಕಲ್ಪನೆ ಮೂಡಿತ್ತು
ನನ್ನ ಹುಡುಗ ಹೀಗೇ ಇರಬೇಕೆಂದು ..ಅದೆಲ್ಲ ಸಾಧ್ಯವಿಲ್ಲ ಎಂದೂ ತಿಳಿದಿತ್ತು ಆದರೆ ನಿನ್ನ ನೋಡಿದಾಗ ಸಾಧ್ಯವಿದೆ ಎಂಬ ನಂಬಿಕೆ
ಮೂಡಿದ್ದುಅದೇ ಕ್ಷಣ ನನಗೆ ತಿಳಿಯದಂತೆ ನಾನು ನಿನ್ನ ಪ್ರೀತಿಸತೊಡಗಿದ್ದೆ
ಅದು ನನಗಷ್ಟೇ ತಿಳಿದಿತ್ತುನನ್ನಷ್ಟಕ್ಕೇ ಸಂತಸ ಪಟ್ಟೆ
ಏನೋ
secured feeling ಇತ್ತು ಆಗ
ನಿನ್ನ ಕಂಡ ಕ್ಷಣದಿಂದ ನಾನೇನೋ ಒಂಟಿಯಲ್ಲ ಎಂಬ ಭಾವನೆ ನನಗೆ ಬಂದಿದೆ .

ಒಂದು ಕ್ಷಣ ಜೀವನದಲ್ಲಿ "
I felt so unloved and alone" don’t know why..ಸಂತೋಷವನ್ನು ಹುಡುಕುವ ಅವಿರತ ಪ್ರಯತ್ನ ಮಾಡುತ್ತಿದ್ದೆ ..
ನೋವನ್ನು ಹಂಚಿಕೊಳ್ಳುವಂಥ ನಂಬಿಕಸ್ತ ಗೆಳೆಯರೂ ಇರಲಿಲ್ಲ ..ಜೀವನ ಶೂನ್ಯ ಎನಿಸಿಬಿಟ್ಟಿತ್ತು
You made me laugh..
ನನ್ನ ದುಃಖಕ್ಕೆ ಪಲಾಯನವಾದವನ್ನು ಕಲಿಸಿದ್ದೆ ನೀನುನೀನಿಲ್ಲದಿದ್ದರೆ ಅದು ಸಾದ್ಯವೇ ಇರಲಿಲ್ಲ ಎಂದು ನಿನಗೂ ತಿಳಿದಿದೆ ಅಲ್ಲವ
ಗೆಳೆಯ ?...
ನಾನು ನಿನಗೆ ನನ್ನ ಜೊತೆ ಕಳೆದ ಸುಮಧುರ ಕ್ಷಣಗಳಿಗಾಗಿ ಧನ್ಯವಾದ ಹೇಳುತ್ತೇನೆ
ನನ್ನ ಮಾತನ್ನು ಆಲಿಸಿದಕ್ಕೆ , ನನ್ನ
problems ಗೆ (if not solution) suggestion ಕೊಟ್ಟಿದ್ದಕ್ಕೆನನಗೀಗ ಅನಿಸುತ್ತಿದೆ ದೇವರು ನನಗಾಗಿ ಕಳಿಸಿಕೊಟ್ಟ ದೇವತೆ ಏನೋ ನೀನು ಎಂದು ಏಕೆಂದರೆ ನನ್ನ ಮನಸಿನಲ್ಲಿರುವುದನ್ನು ಹೇಳದೆಯೇ ತಿಳಿದುಕೊಳ್ಳುತ್ತಿದ್ದೆ ನೀನು ….ಬರೀ ಬೇಸರ ತುಂಬಿಕೊಂಡಿದ್ದ ನನ್ನ ಜೀವನದಲ್ಲಿ ನೀನು ಬಂದು ನನ್ನ ಮುಖದಲ್ಲಿ ಒಂದು ನಗುವನ್ನು ಬರಿಸಿದ್ದಿಯ
ಬರೀ ನಿನ್ನ ಇರುವಿಕೆ ಇಂದಲೇ ನನಗೆ ಸಂತಸವಾಗುತಿತ್ತು
ನೀನೇನೂ ಹೇಳಬೇಡ ಗೆಳೆಯ ..ಬರೀ ನನ್ನ ಜೊತೆಯಲ್ಲಿ ಇರು ನೀನು ನನಗಷ್ಟೇ ಸಾಕು
ದಿನಾ ನಾನು ದೇವರಿಗೆ
thanks ಹೇಳುತ್ತೇನೆಒಳ್ಳೆ ಜನರನ್ನು ನನ್ನ ಜೀವನದಲ್ಲಿ ಕಳಿಸಿ ಕೊಟ್ಟಿದ್ದಕ್ಕೆಎಲ್ಲರೂ ನನಗೆ ಒಂದಿಲ್ಲೊಂದು ರೀತಿಯಲ್ಲಿ ಪ್ರಭಾವ ಬೀರಿದ್ದಾರೆ

ನನಗೆ ಗೊತ್ತು ಎಲ್ಲರೂ ಜೀವನದಲ್ಲಿ ಒಂದಿಲ್ಲೊಂದು ಕಾರಣಗಳಿಗೆ ಬರುತ್ತಾರೆ …..
ಕೆಲವರು ಕೊನೆಯವರೆಗೂ ಜೊತೆಯಲ್ಲಿದ್ದರೆ ಇನ್ನು ಕೆಲವರು ಮಧ್ಯದಲ್ಲೇ ಬಿಟ್ಟು ಹೋಗುತ್ತಾರೆ ..
ಅಂಥ ಒಳ್ಳೆಯವರನ್ನು ನಾನು ದೇವತೆಗಳೆಂದು ಕರೆಯಲಿಚ್ಚಿಸುತ್ತೇನೆ ......
ಅದರಲ್ಲಿ ನೀನೂ ಒಬ್ಬ ಗೆಳೆಯ …..ನಿನಗೂ ನನ್ನ
thanks..
ನೀನೂ ಯಾವಾಗಲು ನನ್ನ ಮನಸ್ಸಿನಲ್ಲಿ ಇರುತ್ತೀಯ ಗೆಳೆಯ ..

Love you always.

11 ಕಾಮೆಂಟ್‌ಗಳು:

ಶಿವಪ್ರಕಾಶ್ ಹೇಳಿದರು...

'ಕಾಲ್ಪನಿಕ ಗೆಳೆಯನಿಗೆ ಕಾಲ್ಪನಿಕ ಪತ್ರ' ಚನ್ನಾಗಿದೆ ರೀ..
:)

ಸವಿಗನಸು ಹೇಳಿದರು...

ದಿವ್ಯ,
ಕಾಲ್ಪನಿಕ ಆದರೂ ಸೂಪರ್....
ಚೆನ್ನಾಗಿದೆ ಪತ್ರ....

ದಿನಕರ ಮೊಗೇರ.. ಹೇಳಿದರು...

ದಿವ್ಯ ಮೇಡಂ,
ಶೀರ್ಷಿಕೆ '' ಕಾಲ್ಪನಿಕ ಗೆಳೆಯನಿಗೆ ಕಾಲ್ಪನಿಕ ಪತ್ರ'' ಎಂದಿದ್ದಕ್ಕೆ ಬಚಾವ್ ಆದ್ರಿ...... ಇಲ್ಲದಿದ್ದರೆ, ಇದನ್ನ ಓದಿ, ತುಂಬಾ ಜನ ಓಡಿ ಬರುತ್ತಿದ್ದರು..... ಆದರೂ ಇದು ಯಾರಿಗೆ ಬರೆದಿದ್ದಿರೋ ಅವರಿಗೆ ಅರ್ಥವಾಗತ್ತೆ..... ತುಂಬಾ ಮುದ್ದಾಗಿದೆ ಪತ್ರ ಮತ್ತು ಹೊನೆಸ್ಟ್ ಆಗಿದೆ.......

ananyaspandana ಹೇಳಿದರು...

ಆತ್ಮೀಯ
ಗೆಳೆತೆನದ ಸತ್ಯತೆ ಕಾಳಜಿಯಲ್ಲಿದೆ.ಎಳೆಎಳೆಯಾಗಿ ಬಿಡಿಸಿಟ್ಟಿದ್ದೀರ.ಪತ್ರ ಮನಸ್ಸಿಗೆ ಹಿಡಿಸಿತು.ಆದರೆ ಆ ಗೆಳೆಯ ಕಾಲ್ಪನಿಕ ಮೂರ್ತಿಯೋ ಇಲ್ಲ ವಾಸ್ತವದಲ್ಲಿದ್ದಾನೆಯೋ? ಹ ಹ್ಹ ಹ್ಹಾ....(ಸುಮ್ಮನೆ ಕೇಳಿದೆ)
ಹರೀಶ ಆತ್ರೇಯ

Divya Hegde ಹೇಳಿದರು...

ಎಲ್ಲರಿಗು ನನ್ನ ಧನ್ಯವಾಗಳು :):)

ಜಲನಯನ ಹೇಳಿದರು...

ದಿವ್ಯಾ ಕಾಲ್ಪನಿಕ ಏಕೆ ಎಂದುಕೊಳ್ಳಬೇಕು...ಹೀಗಾದರೆ ಎಂದು ಏಕೆ ಆಶಾವಾದದ ಮಾತು ಎನಿಸಬಾರದು? ಆದ್ರೂ ನಿಮ್ಮ ತುಡಿತ, ತನ್ನಲ್ಲಿರುವ ತುಮುಲಗಳಿಗೆ ಸ್ಪಂದಿಸುವವರು ಇರಬೇಕೆಂದು, ಅವರು ಹೀಗಿರಬೇಕು ಹಾಗಿರಬೇಕು ಎಂದು ಕನಸ ಕಾಣುವುದು ಯಾವುದೂ ತಪ್ಪಲ್ಲ ಈ ಭಾವವನ್ನು ಚನ್ನಾಗಿ ಮಂಥಿಸಿ ಮುಂದಿಟ್ಟಿದ್ದೀರಿ....ಅಭಿನಂದನೆಗಳು

sunaath ಹೇಳಿದರು...

ದಿವ್ಯಾ,
ಗೆಳೆಯ ಹೇಗಿರಬೇಕು ಎನ್ನುವದನ್ನು ಚೆನ್ನಾಗಿ ತಿಳಿಸಿದ್ದೀರಿ. ಅಂಥಾ ಗೆಳೆಯನಿಗೇ ತಾನೇ ಪ್ರೀತಿಯಿಂದ ಕೋತಿ ಎಂದು ಕರೆಯಬಹುದು!

Divya Hegde ಹೇಳಿದರು...

ಜಲನಯನ ಸರ್,
ನಿಮ್ಮ ಮಾತನ್ನು ಒಪ್ಪಿಕೊಳ್ಳುತ್ತೇನೆ ,
ಬರಹ ಮೆಚ್ಚಿ ಸ್ಪಂದಿಸಿದ್ದಕ್ಕೆ ಧನ್ಯವಾದಗಳು ...


sunaath ಅವರೇ ,
ನೀವು ಹೇಳಿದ್ದು ನಿಜ...
ಕಾಮೆಂಟ್ ಗೆ ಧನ್ಯವಾದಗಳು..:):)

ಚಂದಿನ | Chandina ಹೇಳಿದರು...

ಪತ್ರ ಸುಂದರವಾಗಿ ಮೂಡಿ ಬಂದಿದೆ...ನಿಮ್ಮ ಕಲ್ಪನೆಗೂ ಮೀರಿದ ಗೆಳೆಯ ನಿಜ ಜೀವನದಲ್ಲೂ ಸಿಗಲಿ ಎಂದು ಹಾರೈಸುತ್ತಾ...

Divya Hegde ಹೇಳಿದರು...

ಚಂದಿನ | Chandina,
ನನ್ನ ಬ್ಲಾಗಿಗೆ ಸ್ವಾಗತ,
ನಿಮ್ಮ ಹಾರೈಕೆಗೆ ಧನ್ಯವಾದಗಳು...:)

ವಿ.ರಾ.ಹೆ. ಹೇಳಿದರು...

ಗೆಳೆಯ ಕಾಲ್ಪನಿಕ(!) ಆದರೂ ಪತ್ರ ಮಾತ್ರ ವಾಸ್ತವ ಅಲ್ವಾ?