ಭಾನುವಾರ, ಅಕ್ಟೋಬರ್ 11, 2009

ಅವನೇ ಇವನ ? ಇವನೇ ಅವನ?

ಆಗ ನಾನು 1st PUC ನಲ್ಲಿದ್ದೆ. Mobile ಇರದಿದ್ದ ಕಾಲ. class ಗೆ ತುಂಬ ಜನ ಹೊಸ ಹುಡುಗರ ಸೇರ್ಪಡೆಯಾಗಿತ್ತು .ಅದರಲ್ಲಿ ಒಬ್ಬ ಹುಡುಗ ನನ್ನ ಮನಸೆಳೆದಿದ್ದ. ಅವನ ನೋಡಿದರೆ ಅದೇನೋ ಸಂತಸವಾಗುತಿತ್ತು. ಎಷ್ಟೋ ಹುಡುಗರ ಪೈಕಿಯಲ್ಲಿ ಅವನು ಸ್ವಲ್ಪ different ಅನಿಸಿತ್ತು.ಆದರೆ ಅದು ಪ್ರೇಮ ಏನೂ ಆಗಿರಲಿಲ್ಲ ಎಂದು ಮಾತ್ರ ಹೇಳಬಲ್ಲೆ.
ನಮ್ಮ class ನ Lecturer, attendence ತೆಗೆದುಕೊಳ್ಳುವಾಗ ಹೇಗೋ ಅವನ ಹೆಸರನ್ನು ತಿಳಿದುಕೊಂಡಿದ್ದೆ.
ಹಾಗೆ ದಿನವೂ ಅವ ಬಂದಿರುವನೋ ಇಲ್ಲವೋ ಎಂದು ತಿಳಿದುಕೊಳ್ಳುತ್ತಿದ್ದೆ .ಅವ ಬರದಿದ್ದಾಗ ಅದೇನೋ ಒನ್ ತರಹ ತಳಮಳವಾಗುತಿತ್ತು.
ಅವನು ನನ್ನ ನೋಡಿ smile ಮಾಡಿದ್ದ ನಾನು ತಿರುಗಿ smile ಮಾಡುತಿದ್ದೆ. ದಿನವೂ ಹೀಗೆ smile ಕೊಡುವುದು ತೆಗೆದುಕೊಳ್ಳುವುದು ನಡೆಯುತ್ತಲೇ ಇತ್ತು . ಆದರೂ ಎಂದೂ ಒಬ್ಬರಿಗೊಬ್ಬರು ಮಾತಾಡಿಕೊಳ್ಳಲಿಲ್ಲ ...
ಹೀಗೆ 1st PUC ಕಳೆದು ಹೋಯಿತು. ಮತ್ತೆ ಪುನಃ 2nd PUC ಶುರು .ಮೊದಲ ದಿನ ನನ್ನ ಕಣ್ಣುಗಳಿಗೆ ಬಿಡುವಿಲ್ಲದ ಕೆಲಸ ,ಅದೇನೆಂದರೆ ಅವನ ಹುಡುಕುವುದು.ಕಡೆಗೂ ಅವನ ಕಂಡಾಗ ಏನೋ ಸ್ವಲ್ಪ rest ಸಿಕ್ಕಿತ್ತು ನನ್ನ ಕಣ್ಣುಗಳಿಗೆ.
ಹೀಗೆ ಮತ್ತೆ ಅವ smile ಮಾಡಿದ. ನಾನು smile ಮಾಡಿದೆ .ಆಗಲೂ ನಾವು ಮಾತಾಡಲಿಲ್ಲ.
ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ 2nd PUC ಮುಗಿದಿತ್ತು. ಅವನು ಬೇರೆಲ್ಲೋ ಇಂಜಿನಿಯರಿಂಗ್ ಮಾಡಲು ಹೋಗಿರಬೇಕು ಗೊತ್ತಿಲ್ಲ. ನಾನೂ ನನ್ನ ಓದಿನ ಕಡೆ ಗಮನ ಹರಿಸಿದೆ.ಅವನ ನೆನಪು ಒಮ್ಮೆಯೂ ಬರಲಿಲ್ಲ.ಅವನಿಗೆ ಬಂದಿತ್ತಾ ??? I have no idea.
ಆದರೆ ಮೊನ್ನೆ gandhi bazaar ಹೋಗಬೇಕಾದರೆ ಬಸ್ಸಿನಲ್ಲಿ ಒಬ್ಬ ಹುಡುಗ ಕೂತಿದ್ದ. ಅದೇ ಮುಖ, ಅದೇ ಆಳ್ತನ...ಎಲ್ಲವೂ ಅವನದೇ ಅಚ್ಚು. ಎಷ್ಟೋ ದಿನಗಳ ನಂತರ ಮನಸಿನ ಪುಟಗಳ ಮೇಲೆ ಅವನ ಮುಖ ಕಾಣಿಸಿಕೊಂಡಿತು . ಇವನು ಅವನೆನ?ಅವನೇ ಇವನ? Is he he?ಏನೋ ಗೊತ್ತಾಗಲಿಲ್ಲ.
ಈ ಬಾರಿ ಅವನ ಮುಖದಲ್ಲಿ smile ಇಲ್ಲ. ನನಗೂ smile ಮಾಡುವ ಧೈರ್ಯ ಬರಲಿಲ್ಲ. ಮುಂದಿನ stop ನಲ್ಲಿ ಅವ ಬಸ್ಸಿಳಿದು ಹೋಗಿದ್ದ. ಆದರೆ ನನಗೆ ಮಾತ್ರ ಅವನೇ ಇವನ ? ಇವನೇ ಅವನ? ಎಂಬ ಪ್ರಶ್ನೆಗೆ ಉತ್ತರವೇ ಸಿಗಲಿಲ್ಲ!!!

13 ಕಾಮೆಂಟ್‌ಗಳು:

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಮರೆಯಾದವರು..
ಮತ್ತೆ ಮತ್ತೆ..
ಮರೆಯದೆ ನೆನಪಾಗಿ ಬರುತ್ತಾರೆ..
ಕಾಡುತ್ತಾರೆ...
ಹಿತವಾದ ನೆನಪಾಗಿ...
ಕನಸು
ಭ್ರಮೆಯಾಗಿ ಉಳಿದು ಬಿಡುತ್ತಾರೆ...
ಹೃದಯದೊಳಗೆ...

ಚಂದದ ಬರಹಕ್ಕೆ ಅಭಿನಂದನೆಗಳು...

ಸವಿಗನಸು ಹೇಳಿದರು...

ದಿವ್ಯ,
ಆ ವಯಸ್ಸೆ ಹಾಗೊ ಎನೊ ನನಗೂ ಈ ರೀತಿಯ ನಗೆ ವಿನಿಮಯವಾಗಿತ್ತು ಎಂದೂ ಸಹ ಮಾತಾಡಿರಲಿಲ್ಲ...
ಆದರೆ ಆಮೇಲೆ ಎಂದೂ ಆಕೆ ಕಾಣಿಸಿಕೊಳ್ಳಲೆ ಇಲ್ಲ...
ಆದರೆ ನೆನಪುಗಳು ಮಾತ್ರ ಸಿಹಿಯಾಗಿ ಇವೆ... ಕೆಲವು ಸಾರಿ ನನ್ನಾಕೆಗೆ ಹೇಳಿ ಇಬ್ಬರು ನಗುತ್ತೇವೆ...
ಚೆನ್ನಾಗಿ ನಿರೂಪಿಸಿದ್ದೀರಾ..

ಲೋದ್ಯಾಶಿ ಹೇಳಿದರು...

ದಿವ್ಯಾರವರೆ,

:)
ಪಿ.ಯು.ಸಿ ಅಂದ್ರೆ ಅದರಲ್ಲೂ ಸೆಕೆಂಡ್ ಪಿ.ಯು.ಸಿ. ಸೈನ್ಸ್ ಅಂದ್ರೆ ಕಣ್ಣು ಮುಚ್ಚಿ ಬಿಟ್ರೆ ಮುಗ್ದೊಗಿರುತ್ತೆ.

ನಿಮ್ಮ ಭಾವನೆ + ಬರಹ ಸುಂದರವಾಗಿದೆ.

goutam ಹೇಳಿದರು...

:):)

vijayhavin ಹೇಳಿದರು...

good one!

ಜಲನಯನ ಹೇಳಿದರು...

ಹೌದು ಅದು ನಾನೇ...ನೀನು ನನ್ನ ನೋಡಿಯೂ ನೋಡದೇ ಹೋದದ್ದೇಕೆ...ನನಗೂ ನಿನ್ನ ನೋಡಿ ಅವ್ಳೇನಾ ಇವಳು ಎನಿಸಿತು..ರೂಮಿಗೆ ಹೋಗಿ ನಮ್ಮ ಕಾಲೇಜ್ ಮ್ಯಾಗಜಿನ್ ತೆಗೆದು ನೋಡಿದೆ..ಸಂಶಯವೇ ಇಲ್ಲ ಅವಳೇ ಇವಳು....ಮತ್ತೆ ಯಾಕೆ ಆ ಸೆಳೆತ ಇರಲಿಲ್ಲ, ನಿನಗೂ ಮಾತನಾಡಿಸಬೇಕೆನಿಸಲಿಲ್ಲ...ಮತ್ತೆ ಸಿಗುತ್ತೀಯೇನೋ ಎಂದು ಅದೇ ರೂಟ್ ನಲ್ಲಿ ಬಂದೆ..ಐದಾರು ವರ್ಷಗಳೇ ಕಳೆದಿದ್ದು ಅಂದು ಮಗಳಿಗೆ ಐಸ್ ಕ್ರೀಂ ಕೊಡಿಸೋಕೆ...ವಾಡಿಲಾ ಬಳಿ ನಿನ್ನ ನೋಡಿದೆ..ಮಗಳಿಗೆ ಐಸ್ಕ್ರೀಂ ಕೊಟ್ಟು ಕೂತಿರು ಒಮ್ದು ನಿಮಷ ಅಂತ ನಿನ್ನ ಮಾತನಾಡಿಸಲು ಧೈರ್ಯಮಾಡಿ ಹೊರಬಂದೆ..ಅಲ್ಲಿ ನೀನಿರಲಿಲ್ಲ.......
ಹೇಗೆ..??!! ಶಾಕ್...!!!

ದಿನಕರ ಮೊಗೇರ.. ಹೇಳಿದರು...

ದಿವ್ಯ ಮೇಡಂ,
ನಿರೂಪಣೆ ಚೆನ್ನಾಗಿತ್ತು.... ನೀವು ಸುಮ್ಮನೆ ಒಂದು ನಗೆ ಬಿಸಾಡಬೇಕಿತ್ತು....... ಇನ್ನೊಮ್ಮೆ ಸಿಕ್ಕರೆ ಆ 'ನಗೆ'ರಾಜನನ್ನು ಬಿಡಬೇಡಿ.......

Divya Hegde ಹೇಳಿದರು...

ಹಾಂ ಜಲಾನಯನ ಅವರೇ,
ನಿಮ್ಮ ಕಾಮೆಂಟ್ ಗೆ ಧನ್ಯವಾದಗಳು..
ಶಾಕ್ ಆಗದೆ ಇರಳು ಹೇಗೆ ಸಾಧ್ಯ ?
ನೀವು ನನ್ನ class mate ಎಂದರೆ ಶಾಕ್ ಆಗದೆ ಇರಲು ಆದಿತೇ?

Divya Hegde ಹೇಳಿದರು...

ದಿನಕರ ಅವರೇ ,
ನಿಮ್ಮ ಕಾಮೆಂಟ್ಸ್ ಗೆ ಧನ್ಯವಾದಗಳು..
ನೀವು ಹೇಳಿದ ಹಾಗೆ ಆ ನಗೆ ರಾಜ ಮತ್ತೆ ಸಿಕ್ಕರೆ ಖಂಡಿತ ಬಿಡುವುದಿಲ್ಲ..
ಮತ್ತೆ ಬನ್ನಿ..

Divya Hegde ಹೇಳಿದರು...

ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು...ನಿಮ್ಮ ಪ್ರೋತ್ಸಾಹ ಹೀಗೆ ಇರಲಿ
:):)

Ismail Mk Shivamogga ಹೇಳಿದರು...

"""" ಬರಹ ಸುಂದರವಾಗಿದೆ """"

srinivas ಹೇಳಿದರು...

uttama ciMtane :)

ಎಲ್ಲಿಂದಲೋ ಬಂದ ಈ ಚೇತನಕೆ ಆತ್ಮ ಎನಲೇ
ಎಲ್ಲಿಂದಲೋ ಹುಟ್ಟಿ ಬಂದ ಈ ದೇಹಕೆ ನಾನು ಎನಲೇ

ಜೀವನ ಎಂಬೋ ಈ ಬಸ್ಸಿನಲ್ಲಿ ಎಲ್ಲೋ ಹತ್ತಿದೆ ನಾನು
ಹಾಲುಣಿಸಿ ಪಾಲಿಸಿದವಳ ಅಮ್ಮನೆಂದೆ
ಅವಳು ತೋರಿದವನ ಅಪ್ಪ, ಅಕ್ಕ, ತಂಗಿ, ಅಣ್ಣ, ತಮ್ಮನೆಂದೆ
ಅವಳು ಕಲಿಸಿದ ಮಾತನೇ ನಾ ನಂಬಿದೆ

ಈ ಬಸ್ಸಿನಲಿ ಎಲ್ಲೋ ಹತ್ತಿ ಎಲ್ಲೋ ಇಳಿವ ಸಹ ಪ್ರಯಾಣಿಕರಿಂದ
ಮಮತೆ ವಾತ್ಸಲ್ಯ ಪ್ರೇಮ ಪ್ರೀತಿ ಕರುಣೆ ಕ್ರೋಧ ಹಾಸ್ಯವ ಕಲಿತೆ
ಮಣ್ಣಿನ ವಾಸನೆತೆ ಮನದ ಕಾಮನೆಗಳಿಗೆ ದಾಸನಾದೆ ...

barahada lahari hariyuttirali

gurudEva dayaa karo deena jane

Divya Hegde ಹೇಳಿದರು...

Ismail & Srinivas,

ಧನ್ಯವಾದಗಳು..:):)