ಶುಕ್ರವಾರ, ಸೆಪ್ಟೆಂಬರ್ 04, 2009

inspiration or motivation ....????


ಎಷ್ಟೋ ದಿನಗಳಾಯಿತು ಬ್ಲಾಗ್ನಲ್ಲಿ ಬರೆಯುವುದನ್ನು ಬಿಟ್ಟು ....ಯಾಕೋ ಮನಸೆಲ್ಲ ಫುಲ್ ಖಾಲಿ ಖಾಲಿ ...
ನನ್ನ ಪ್ರಕಾರ ಜೀವನದಲ್ಲಿ ಏನನ್ನಾದರು ಮಾಡಬೇಕಾದರೆ ಅದಕ್ಕೊಂದು" inspiration or motivation "ಬೇಕಾಗುತ್ತದೆ .ಹೀಗೆ ನನ್ನ ಬ್ಲಾಗನ್ನು ಶುರು ಮಾಡಲು ಒಂದು inspiration ನ್ನೇ ಕಾರಣವಾಗಿದ್ದು. ಅದು ಯಾವ inspiration ಅನ್ನುವುದು ಇಲ್ಲಿ ಅಪ್ರಸ್ತುತ...
ಯಾರಿಗೋ ಹಕ್ಕಿಗಳ ಹಾಡನ್ನು ಕೇಳಿದರೆ ಕವಿತೆ ಬರೆಯುವ ಹಾಗೆ ಅನ್ನಿಸುತ್ತದೆಯಂತೆ ...
ಇನ್ಯಾರಿಗೋ ದುಡ್ಡು ಹೇಳೋದೇ ಒಂದು motivation ಅಂತೆ ...
ತಾನು ಸುಂದರವಾಗಿ ಕಂಡು ಗೆಳೆಯನ ಹತ್ತಿರ ನೀ ತುಂಬಾ ಚೆನ್ನಾಗಿ ಕನ್ತಿದಿಯ ಕಣೆ ಎಂದು ಹೇಳಿಸಿಕೊಳ್ಳಬೇಕು ಅನ್ನೋದೇ ಒಂದು motivation ಅಂತೆ....
ವಿಧ್ಯಾರ್ಥಿ ಗೆ ಒಳ್ಳೆ ಮಾರ್ಕ್ಸ್ ಸಿಕ್ಕರೆ ಅದೇ motivation ....
ಇಲ್ಲೋಬ್ಬರಿಗೆ ಮನೆ ಕಟ್ಟಬೇಕು ಅದಕ್ಕೆ ದುಡ್ಡು ಮಾಡಬೇಕು ಅನ್ನೋದೇ motivation ಅಂತೆ ...
ಇದ್ದರೂ ಇರಬಹುದು ...ಯಾರಿಗೆ ಯಾವ ವಿಷಯದಿಂದ motivate ಆಗುತ್ತದೆಯೋ ಅದರಿಂದ ಏನೇನು ಪರಿಣಾಮಗಳು ಆಗುತ್ತವೆಯೋ ಅನ್ನೋದಕ್ಕೆ ನಮ್ಮ ನಿಮ್ಮೆಲ್ಲರ "Issac Newton" ನೆ ಸಾಕ್ಷಿ ...ಒಂದು ವೇಳೆ ಆ ಸೇಬು ಹಣ್ಣು ಅವರ ತಲೆಯ ಮೇಲೆ ಬೀಳದಿದ್ದರೆ "Newton Laws" ಶೃಷ್ಟಿ ಆಗುತ್ತಿರಲಿಲ್ಲವೇನೋ ....
ನನ್ನ ಪ್ರಕಾರ ಆ ಸೇಬು ಹಣ್ಣು ಬಿದ್ದಿದ್ದು ಒಂದು ರೀತಿ motivate ಮಾಡಿರಬೇಕು ಅನ್ನಿಸುತ್ತದೆ...(ನನ್ನ ಪ್ರಕಾರ ಅಷ್ಟೆ )
ಏನೇ ಇರಲಿ ಯಾವುದೇ ಒಂದು motivation ಇಲ್ಲದೆ ಇದ್ದರೆ ಯಾರಿಗೂ ಯಾವ ಕೆಲಸ ಮಾಡಲು ಮನಸ್ಸು ಬರುವುದಿಲ್ಲ...
ಉದಾ: ನಾನು ಬ್ಲಾಗ್ನಲ್ಲಿ ಪೋಸ್ಟ್ ಮಾಡಿದ್ದಕ್ಕೆ ಒಳ್ಳೆ ಕಾಮೆಂಟ್ ಬಂದರೆ ನನಗದೇ ಬರೆಯಲು motivation.
ಯಾರೋ ಒಳ್ಳೆ ಫೋಟೋಗ್ರಾಫರ್ ನ ಒಳ್ಳೆ ಫೋಟೋಸ್ ನೋಡಿ ಚೆನ್ನಾಗಿದೆ ಎನ್ನುವ ಒಂದೇ ಮಾತು ಹೇಳಿದರೆ ಆ ಜೀವಕ್ಕೆ ಎಷ್ಟು ಸಂತಸವಾಗಬಹುದು ಅಲ್ಲವ?
ಇದೆಲ್ಲ ಬಿಡಿ ಮಾಮೂಲಿ ವಿಷಯವಾಯಿತು...
ಇಲ್ಲೊಬ್ಬ ನಂ ಆಫೀಸ್ ಗೆ ಹೊಸ collegue ಬಂದಿದಾನೆ ...
ಇವ ದೊಡ್ಡ flirt...
ಮೂರ್ ಹೊತ್ತೂ ಹುಡುಗಿರ ಹಿಂದೆ ಸುತ್ತುವುದೆ ಕೆಲಸ ...ಭಾರಿ ಜೊಲ್ಲು...
ಅವನ ನೋಡಿದರೇನೇ ಅಸಹ್ಯ ಆಗುತ್ತದೆ...ಯಾವಾಗಲು ಹುಡುಗಿರ ಜೊತೆ ಮಾತಾಡುತ್ತಲೇ ಇರುತ್ತಾನೆ.. ಅವನನ್ನ ಒಂದು ದಿನ ಕೇಳಿಯೇ ಬಿಟ್ಟೆ .ಏನು ನೀನು ಯಾವಾಗಲು ಹುಡುಗಿಯರ ಹತ್ತಿರ flirt ಮಾಡುತ್ತಿರುತ್ತಿಯಲ್ಲ ಯಾಕೆ ಎಂದು?
ಅದಕ್ಕೆ ಅವ ಏನು ಹೇಳಿದ ಗೊತ್ತ?
"ಸೀ ದಿವ್ಯ ಲೈಫ್ ನಲ್ಲಿ motivation ಅನ್ನೋದು ತುಂಬ important...ನನಗೆ ಹುಡುಗಿಯರೇ motivation" ಎಂದು ಹೇಳಿ ಕಣ್ಣು ಹೊಡೆದು ಹೋದ. ನನಗೆ ಏನು ಹೇಳೋಕಾಗದೆ ಸುಮ್ನೆ ನಿಂತು ಬಿಟ್ಟೆ .
ಇಲ್ಲಿ ಆ ಹುಡುಗನ ಬಗ್ಗೆ ನಾನು ದೂಷಿಸುತ್ತಿಲ್ಲ ..
ಅವರ ಬದುಕು ಅವರ ಇಷ್ಟ ....ಸುಮ್ನೆ ಒಂದು weird example for motivation ಅಷ್ಟೆ...
ನೋಡಿ ಹೇಗೆಲ್ಲಾ motivate ಆಗುತ್ತಾರೆ ಜನ...
ಏನನಿಸಿತು ನಿಮಗೆಲ್ಲೇ ?ತಿಳಿಸುತ್ತೀರಲ್ಲ ???

21 ಕಾಮೆಂಟ್‌ಗಳು:

ಸವಿಗನಸು ಹೇಳಿದರು...

ದಿವ್ಯ,
ಹೀಗೂ ಇರ್ತಾರಲ್ಲ ಜನ....ಇನ್ನೂ ಯಾವಯಾವುದರಲ್ಲಿ ಜನ motivate ಆಗ್ತಾರೋ.....?
ಬರೀತಾ ಇರಿ....

Sumana ಹೇಳಿದರು...

ದಿವ್ಯ, ಈ motivation ಅನ್ನೋದು ತುಂಬಾ ವಿಚಿತ್ರ. ನಿಮಗೆ ಸಿಕ್ಕಿದ motivation ನಿಂದ ನಾನು demotivate ಆಗಿ ಬಿಡಬಹುದು!!! ನಮಗೆ ಯಾವುದರಿಂದ ಪ್ರೇರಣೆ ಸಿಗುತ್ತೆ ಅನ್ನೋದು ಗೊತ್ತಾದ್ರೇ ಮಾತ್ರ ನಾವು ಮುಂದುವರಿಯಕ್ಕೆ ಸಾಧ್ಯ ಅನ್ನಿಸುತ್ತೆ. (ಆದ್ರೆ ನಿಮ್ಮ ಆ ಹೊಸ ಸಹೋದ್ಯೋಗಿಗೆ ಆಗುವಂತಹ ಪ್ರೇರಣೆ ಮಾತ್ರ......ತೀರಾ 'yuck' ಅನ್ನೋ ಹಾಗಿದೆ!!!!)

jithendra hindumane ಹೇಳಿದರು...

nija... naavu badukuttiruvude inspirationninda...

Prashanth Arasikere ಹೇಳಿದರು...

hi,divya

ivattu nimma blog nodhe,motivation ilde yava kelsa nu agalla..

Divya Hegde ಹೇಳಿದರು...

hi Saಸವಿಗನಸು,
ಅದೇ ನೀವು ಹೇಳಿದ ಯಾರು ಯಾರು ಯಾವುದರಿಂದ motivate ಆಗುತ್ತಾರೋ ಗೊತ್ತಿಲ್ಲ.
ನನಗೆ ಸಿಕ್ಕಿದು ಒಂದು ಚಿಕ್ಕ ಉದಾಹರಣೆ ಅಷ್ಟೇ ...
ಧನ್ಯವಾದಗಳು ...:)

Divya Hegde ಹೇಳಿದರು...

ನಿಜ ಸುಮನ,
motivation ಅನ್ನೋದು ಅವರವರ moods,ಸುತ್ತಮುತ್ತಲಿನ ವಾತಾವರಣ ,ಬೆಳೆದು ಬಂದ ರೀತಿ ಎಲ್ಲದರ ಮೇಲೆ ಅವಲಂಬಿತವಾಗಿರುತ್ತದೆ.
ಒಬ್ಬರ motivation ಇನ್ನೊಬ್ಬರ demotivation ಆಗಬಹುದು!!!
ಧನ್ಯವಾದಗಳು...:):)

Divya Hegde ಹೇಳಿದರು...

ಹೌದು Jithendra,
ನೀವು ಹೇಳಿದ ಹಾಗೆ ಜೀವನದಲ್ಲಿ ಏನನ್ನದ್ರೂ ಮಾಡಬೇಕಾದರೆ ಅದಕ್ಕೊಂದು ನಿರಂತರವಾದ push ಬೇಕಾಗುತ್ತದೆ...
ಅದೇ ನಮಗೆ ಬದುಕಲು inspiration.
ಧನ್ಯವಾದಗಳು...:)

Divya Hegde ಹೇಳಿದರು...

Prashanth ಅವರೇ,
ನನ್ನ ಬ್ಲೋಗಿಗೆ ಸ್ವಾಗತ,
ಹೌದು motivation ಇಲ್ಲದೇ ಯಾವ ಕೆಲಸವೂ ಆಗುವುದಿಲ್ಲ ಎನ್ನುವುದು ನೂರಕ್ಕೆ ನೂರು ಸತ್ಯ..
ಧನ್ಯವಾದಗಳು ...:)

ಜಲನಯನ ಹೇಳಿದರು...

ದಿವ್ಯಾ ನಿಜ ಹೇಳಿದ್ರಿ...ಪ್ರಚೋದನೆಗೂ ಸ್ಪೂರ್ತಿಗೂ ಅಜಗಜಾಂತರ...ಆದ್ರೆ ಎರಡೂ ಮಾಡೋ ಕೆಲಸ ಒಂದೇ...ನಮ್ಮನ್ನ ಹುರಿದುಂಬಿಸೋದು ಮತ್ತೇನನ್ನೋ ಮಾಡೋಕೆ...ಕವಿತೆ ಬರೆಯೋಕೆ ಕೂತೆ...ಏನೆಲ್ಲಾ ಕಸರತ್ತಾಯ್ತು...ಸುಮಾರು ಐದಾರು ಹಾಳೆ ವೇಷ್ಟು..ನನ್ನ ಮಗಳು ಹೇಳಿದ್ದುಂಟು...ನಂಗಾದರೆ..ಪೇಪರ್ ತುಂಬಾ ವೇಸ್ಟ್ ಮಾಡ್ತೀಯಾ ಅಂತೀಯಾ..ಈಗ ನೀನು ನೋಡು..ಏನೂ ಬರೀದೇ ವೇಸ್ಟ್ ೩-೪ ಹಾಳೆ....!!! ನಾನಾದರೂ ಒಂದಷ್ಟು ಡ್ರಾಯಿಂಗ್ ಅಂತ ಮಾಡಿರ್ತೀನಿ...
ಕವಿತೆ ಮೂಡದೇ ಹೋದದ್ದೇ ಒಂದು motivation ಅದರ ಫಲ ನೀವು ಪ್ರತಿಕ್ರಿಯಿಸಿರೋ ಕವಿತೆಯ ಮೊದಲ ಕವಿತೆ....ಅಲ್ವಾ..?? ಪಾಸಿಟಿವ್ವೋ..ನೆಗೆಟಿವ್ವೋ..ಒಟ್ನಲ್ಲಿ..ಮೋಟಿವೇಶನ್ ಬೇಕು...

Divya Hegde ಹೇಳಿದರು...

Jalanayana,
thank you for your valuble comments...:)

vijayhavin ಹೇಳಿದರು...

Article is nice divya!

Somewhat after reading I feel that motivation is nothing but a fleeting experience. It is like a caffeine boost. It only lasts for a moment. But in getting inspiration I believe that once you are inspired, lasting motivation will follow and the best way to remain internally motivated is to look for sources of inspiration.
What you say?

Once again a nice article!
I truly appreciate your experimental article on this topic…

Divya Hegde ಹೇಳಿದರು...

thankyou Vijay...:):)

ರಾಘವೇಂದ್ರ ಮಹಾಬಲೇಶ್ವರ ಹೇಳಿದರು...

ದಿವ್ಯಾ,

ಯಾವ ಕ್ಷಣಕ್ಕೆ ಯಾವುದು ಪ್ರೇರಿಸುತ್ತದೆ, ಕಾರ್ಯಪ್ರವೃತ್ತನನ್ನಾಗಿಸುತ್ತದೆ ಹೇಳುವುದು ಕಷ್ಟ. ಸುಮ್ಮನೇ ಸುತ್ತುವ ಒಂದು ದುಂಬಿಯೂ ಜೀವನವನ್ನು ಹೃದಯ ತುಂಬಿ ಆನಂದಿಸುವಂತೆ ಪ್ರೇರಣೆ ನೀಡಬಹುದು.

ನೀವು ಬರೆಯುವಾಗ ಸ್ವಲ್ಪ ಸ್ಪೆಲ್ಲಿಂಗ್ ಕಡೆ ಗಮನ ಕೊಡಿ. ಶುಭಾಶಯಗಳು..

Divya Hegde ಹೇಳಿದರು...

ರಾಘವೇಂದ್ರ ,
ನಿಮ್ಮ ಕಾಮೆಂಟ್ಸ್ ನೋಡಿ ಸಂತಸವಾಯಿತು ...
ನೀವು ಹೇಳಿದ ಹಾಗೆ ಮುಂದಿನ ಸಾರಿ ಸ್ಪೆಲ್ಲಿಂಗ್ಸ್ ಬಗ್ಗೆ ಗಮನ ಹಾರಿಸುತ್ತೀನಿ ...
ಧನ್ಯವಾದಗಳು...:)

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ದಿವ್ಯಾರವರೆ...

ಮೋಟಿವೇಷನ್ ಬಗ್ಗೆ ನನ್ನ ಅಭಿಪ್ರಾಯಗಳೂ ಇವೆ ಆಗಿವೆ..

ಮೋಟಿವೇಷನ್ ಇಲ್ಲದೆಯೂ..
ಉಳಿದವರೆಲ್ಲ ಮೋಟಿವ್ ಆಗುವ ಹಾಗೆ ಮಾಡುವುದಿದೆಯಲ್ಲ...
ಅದು ಗ್ರೇಟ್...!

ಆ ಹುಡುಗ ಒಂಥರಾ ಐಲು...
ತುಂಬಾ ಕೀಳು ಅಭಿರುಚಿ ಅಂತ ನನ್ನ ಭಾವನೆ...

ಚಂದದ ಬರಹ... ಅಭಿನಂದನೆಗಳು...

Divya Hegde ಹೇಳಿದರು...

Prakashanna,
thank you..
nimmellara protsaaha heege irali endu aashisutta..
divya..:)

chennu ಹೇಳಿದರು...

Really u narrate ur feeling so nicely.Hats off to ur narration

Divya Hegde ಹೇಳಿದರು...

Chennu,
Thanks..:):)

ಅನಾಮಧೇಯ ಹೇಳಿದರು...

Hello. In a crisis, fell revenue from sales [url=http://rapira-mir.ru]rapira-mir.ru[/url] . Tell my what can be done. Thanks in advance.
Vsem privet. V uslovijah krizisa upal dohod ot prodazh [url=http://rapira-mir.ru]rapira-mir.ru[/url] . Podskazhite chto mozhno sdelat'. Zaranee Spasibo.

ಅನಾಮಧೇಯ ಹೇಳಿದರು...

Awesome blog I loved reading your information

[url=http://partyopedia.com]birthday party supplies[/url]

ಅನಾಮಧೇಯ ಹೇಳಿದರು...

Really enjoy here,i come across here and will share and learn here ^_^ great!

I just come from an other site with a lot of very usefull information about [url=http://newmoviereleasesdvd.info/]Watch Movies Online Free[/url], if someone also would like to know about that field see my signature.