ಭಾನುವಾರ, ಸೆಪ್ಟೆಂಬರ್ 20, 2009

ನನ್ನ ಯೋಚನೆಗಳ ಜೊತೆಗೆ.....

majestic ನಲ್ಲಿ ಬಂದು ಇಳಿದಿದ್ದೇನೆ ....ಯಾವುದೋ ಬಸ್ಸನ್ನು ಹತ್ತಿದ್ದೇನೆ .. ಬಸ್ಸಿನಲ್ಲಿ ಯಾರೂ ಇಲ್ಲ... driver- conductor ಬಿಟ್ಟರೆ ನಾನಷ್ಟೇ..
ಬಸ್ಸೆಲ್ಲ full ಖಾಲಿ...ಅದು ಯಾವ ಬಸ್ಸು, ಏನೂ ಗೊತ್ತಿಲ್ಲ ... ತುಂಬಾ ದಿನಗಳಿಂದ ನೋಡಬೇಕು ಎಂದುಕೊಂಡ ಆದರೆ (ಇದುವರೆಗೂ ನೋಡದ ) ಗಗನಚುಕ್ಕಿ- ಭರಚುಕ್ಕಿ ಫಾಲ್ಸ್ ನೋಡಲು ಹೊರಟಿದ್ದೆ ...ಒಬ್ಬಳೇ!!!! ಒಂದು ticket ಕೊಡಿ shivanasamudram ಗೆ ಎಂದು conductor ಹತ್ತಿರ ಹೇಳಿದ್ದು ಮಾತ್ರ ಗೊತ್ತು... ಬಸ್ಸಿನಲ್ಲಿ ಕಿಟಕಿಯಾಚೆ ನೋಡುತ್ತ ಕುಳಿತಿದ್ದವಳಿಗೆ ಏನೇನೋ ಯೋಚನೆಗಳು ....ನನ್ನ ಜೊತೆಗೆ ನನ್ನ ಜೀವದ ಗೆಳೆಯ (ಅಸಲಿಗೆ ಇರುತ್ತಾನೋ ಇಲ್ಲವೊ ಅದು ಬೇರೆ ವಿಷಯ) ಇದ್ದರೆ ಎಷ್ಟು ಸೋಗಸಾಗಿರುತಿತ್ತು.. "ಮೊಗ್ಗಿನ ಮನಸು " hero-heroine ತರಹ" duet "ಹಾಡಿಕೊಂಡು ಬರಬಹುದಿತ್ತು ಹೀಗೆ ... ಅಂತು- ಇಂತೂ ಶಿವನಸಮುದ್ರ ಬಂದೇ ಬಿಟ್ಟಿತು.. ಬಸ್ಸಿಂದ ಕೆಳಗಿಳಿದು ನೋಡಿದರೆ ಯಾರೂ ಇಲ್ಲ ಅಲ್ಲಿ... ಸೂಜಿ ಬಿದ್ದರೂ ಕೇಳಿಸುವಷ್ಟು ನಿಶ್ಯಬ್ಧ ...ಯಾರೂ ಇಲ್ಲ..
ಪ್ರವಾಸಿ ತಾಣವಾದ ಅದು ಜನವಿಲ್ಲದೆ ,ಒಂದು ತರಹದ ಏಕಾಂತವೋ ,ಒಂಟಿತನವೋ ಅನುಭವಿಸುತ್ತಿದ್ದಂತೆ ತೋರಿತು.. ಒಂದೆರಡು ಹಕ್ಕಿಗಳ ಕೂಗು ಅಲ್ಲಲ್ಲಿ ..... ಧೋ ಎಂದು ಬೀಳುವ ನೀರಿನ ಶಬ್ದ.. ಗಾಳಿಗೆ ಅಲ್ಲಾಡುತ್ತಾ ಮಾತಾಡುತ್ತಿರುವ ಮರದೆಲೆಗಳು.. ತುಂತುರು ನೀರಿನ ಹನಿಗಳು ಬಿದ್ದು ಹಾಗೇ ಸುಮ್ಮನೆ ಮಲಗಿರುವ ಹುಲ್ಲಿನ ರಾಶಿ...
ಅಬ್ಬ! ಎಷ್ಟು ಸೊಗಸು ಪ್ರಕೃತಿ.....
ಹಾಗೆ ನೋಡುತ್ತಾ ನೋಡುತ್ತಾ ಮುಂದೆ ನಡೆದೆ..... ಹಾಲಿನ ಹಾಗೆ ನೊರೆ ನೊರೆಯಾಗಿ ಹರಿಯುವ ನೀರು, ಜಗತ್ತಿನ ಯಾವುದೇ ನೋವು, ಜಂಜಾಟ ತನಗೆ ಸಂಭಂಧಿಸಿಲ್ಲ ಎನ್ನುವ ಹಾಗೆ ಬೀಳುವುದನ್ನು ಕಂಡು ಒಮ್ಮೆ ಮುಟ್ಟುವ ಮನಸ್ಸಾಯಿತು.. ಮುಂದೆ ಹೋಗುತ್ತಾನೆ ಇದ್ದೀನಿ..ಹೋದೆ ಹೋದೆ ಹೋದೆ...ಅದೆಲ್ಲಿ ಒಂದು ಕಂದಕ ಇತ್ತೋ ಗೊತ್ತಿಲ್ಲ.. ನೀರಿಗೆ ಬಿದ್ದಿದೀನಿ.. ಇನ್ನೇನು ಸಾಯುತ್ತೀನಿ ಎಂದು ಖಾತ್ರಿಯಾಗಿ ಬಿಟ್ಟಿದೆ.. ನೀರಿನಲ್ಲಿ ಸಂಪೂರ್ಣ ಮುಳುಗಿದ್ದೀನಿ... ಇನ್ನು ಈ ಲೋಕದ ಋಣ ಮುಗಿಯಿತು ಎಂದುಕೊಳ್ಳುತ್ತಿರುವಾಗಲೇ ಯಾರೋ ಕೂಗಿದಂತಾಗಿ ಎಚ್ಚೆತ್ತುಗೊಂಡೆ...ನೋಡಿದರೆ ನಾನು office ಇಂದ ಹಿಂತಿರುಗಿ ಬರುತ್ತಿರುವ ಬಸ್ಸು ಇನ್ನೂ silk board ನಲ್ಲೆ ನಿಂತಿತ್ತು.ಸರಿ ಸುಮಾರು 45 ನಿಮಿಷ ಬಸ್ಸು ನಿಂತಲ್ಲೇ ನಿಂತಿತ್ತು.... ಅತಿಯಾದ ಮಳೆಯಿಂದ full traffic-jam ಆಗಿತ್ತು ... ಹಾಗೆ ಕಣ್ಣು ಮುಚ್ಚಿದವಳಿಗೆ ಈ ಕನಸು ಬಿದ್ದಿತ್ತು...
ಬರೀ ಕನಸೇ ಅಲ್ಲವ ಎಂದುಕೊಂಡು ನಿಟ್ಟುಸಿರು ಬಿಟ್ಟೆ.. ಬಸ್ಸು ಮುಂದಕ್ಕೆ ಚಲಿಸಿತು
ನನ್ನ ಯೋಚನೆಗಳ ಜೊತೆಗೆ...

18 ಕಾಮೆಂಟ್‌ಗಳು:

ಸವಿಗನಸು ಹೇಳಿದರು...

ದಿವ್ಯ,
ಅಬ್ಬ! ಎಂತಹ ಕನಸು....ಒಂದು ನಿಮಿಷ ಗಾಬರಿಯಾಯಿತು.....
ಚೆನ್ನಾಗಿ ಬರೆದಿದ್ದೀರಾ...

ಸುಧೇಶ್ ಶೆಟ್ಟಿ ಹೇಳಿದರು...

nija andu kondu bittenallari... oduththiruvaaga naanu obbane shivana samudrakke hogi bandare hegiruththade emba yochane kooda sulidu hoyithu... vishweshwara bhattaru ondu sala thamma yaavudo lekhanadalli baredidda haage nenapu... ommomme obbabbare helade keladae yelligaadaru hogi banni antha :)

ಮನಸಿನ ಮಾತುಗಳು ಹೇಳಿದರು...

ಸವಿಗನಸು,
ತುಂಬ ಧನ್ಯವಾದಗಳು.

ಮನಸಿನ ಮಾತುಗಳು ಹೇಳಿದರು...

ಸುಧೇಶ್ ಅವರೇ,
ನಿಮಗೆ ಹಾಗೆ ಅನ್ನಿಸಿದರೆ ನನ್ನ ಲೇಖನ ಸಾರ್ಥಕ ,
ಧನ್ಯವಾದಗಳು..ಮತ್ತೆ ಬನ್ನಿ ..:):)

ಅನಾಮಧೇಯ ಹೇಳಿದರು...

ದಿವ್ಯ.. ಎಷ್ಟು ಸಹಜತೆಯಿಂದ ಬರೆದಿದ್ದೀರ.. ನೀವು ಹೇಳುವವರೆಗೆ ಗೊತ್ತೇ ಆಗಲಿಲ್ಲ ಇದು ಕನಸು ಎಂದು! ಪ್ರಕೃತಿಯ ಮಡಿಲಿನ ಸುಖ ಅನುಭವಿಸಿದವರಿಗೆ ಗೊತ್ತು!!

ಮನಸಿನ ಮಾತುಗಳು ಹೇಳಿದರು...

Thanku Sumana for your valuble comments...:):)

Dileep Hegde ಹೇಳಿದರು...

Divya..

ಸುಧೇಶ್ ರವರು ಹೇಳಿದಂತೆ ಒಮ್ಮೊಮ್ಮೆ ಒಬ್ಬೊಬ್ಬರೇ ಎಲ್ಲಿಗಾದರೂ ಹೋಗುವದರಲ್ಲಿ ಸಕ್ಕತ್ ಥ್ರಿಲ್ ಇರತ್ತೆ.. ಆದರೆ ನೀವು ಕಂಡ ಕನಸಿನಂತಹ ಘಟನೆಗಳಲ್ಲಿ ಸಿಲುಕಿಕೊಂಡರೆ ಕಷ್ಟ.... ಉತ್ತಮವಾಗಿದೆ ಬರಹ... keep it up...

Ittigecement ಹೇಳಿದರು...

ದಿವ್ಯಾ...

ಕಲ್ಪನೆಯ ಕನಸೂ ಕೂಡ ನೈಜವೆನಿಸಿತು..
ಸಾವಿನ ಕ್ಷಣಗಳನ್ನು ಚೆನ್ನಾಗಿ ವರ್ಣಿಸಿದ್ದೀರಿ..

" ಇನ್ನೂ ಪುಟ್ಟ ಹುಡುಗಿ ...
ಬದುಕಿನ ಕನಸು ಕಾಣು " ಎಂದು ಹಾರೈಸುವೆ...

ಚಂದದ ಬರಹಕ್ಕೆ ಅಭಿನಂದನೆಗಳು...

Unknown ಹೇಳಿದರು...

nice article! keep it up

ಸುಮ ಹೇಳಿದರು...

ದಿವ್ಯ ಹಾಗೆ ಒಬ್ಬರೆ ಪ್ರಕೃತಿಯ ಮಡಿಲಲ್ಲಿ ಸುತ್ತಲು ತುಂಬಾ ಚೆನ್ನಾಗಿರುತ್ತದೆ.ನಮ್ಮ ಊರಿನಲ್ಲಿ ಹೊಳೆ,ತೋಟ,ಗದ್ದೆ,ಬೆಟ್ಟ ಎಂದು ಒಬ್ಬಳೆ ಸುತ್ತುವುದು ನನಗೆ ತುಂಬಾ ಮೆಚ್ಚಿನ ಹವ್ಯಾಸವಾಗಿತ್ತು. ಆದರೆ ಹೆಣ್ಣಾಗಿರುವುದರ disadwantage ಎಲ್ಲಾ ಕಡೆ ಒಬ್ಬರೆ ಸುತ್ತುವದು ಕಷ್ಟ.ಚಂದದ ಬರಹ. ಹೀಗೆ ಬರೆಯುತ್ತಿರಿ.

ಅಪ್ಪು..... ಹೇಳಿದರು...

Tumba Chendada baraha... I thought that was true until i read last lines...!! keep writing... :)

ಮನಸಿನ ಮಾತುಗಳು ಹೇಳಿದರು...

ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಎಲ್ಲರಿಗು ನನ್ನ ಧನ್ಯವಾದಗಳು..
ದಿವ್ಯ

ಜಲನಯನ ಹೇಳಿದರು...

ದಿವ್ಯ...ಅಲ್ರೀ ಹೋದವರು ಹೋದ್ರಿ...ಜೋಗ್ ನೋಡೊಕೆ ಯಾಕೆ ಮನಸಾಗಲಿಲ್ಲ...ಶಿವನಸಮುದ್ರಾನ ಯಾರು ನೊಡೋಕೆ ಹೋಗ್ತಾರೆ..??
ಅಬ್ಬ ಅಂತೂ ನೋಡಿ ಬಂದ್ರಲ್ಲಾ..ಯರೂ ಹೋಗ್ದೆ ಇರೋ ಜಾಗಕ್ಕೆ...ಅನ್ದ್ಕೊಂಡೆ ಅರೆರೆ...ಇವರಿಗ್ಯಾಕೆ..ಇಂಥ ಕಡೆ ಒಬ್ಬರೇ ಹೋಗೇಕೆ..ಮನಸ್ಸಾಗಿದ್ದು...?? ಓದ್ತಾ..ಓದ್ತಾ...ಆಮೇಲೆನೇ ನಾನೂ ಈ ಲೋಕಕ್ಕೆ ಬಂದದ್ದು...ಸಿಲ್ಕ್ ಬೋರ್ಡ್ ಎಲ್ಲಿಂದ ಬಂತು...??? ಹಹಹಹ...ಚನ್ನಾಗಿದೆ...

ದಿನಕರ ಮೊಗೇರ ಹೇಳಿದರು...

ನಿಮ್ಮ ಬರಹ ದಿಫಾರಂಟ್ ಇದೆ.... ಮುಂದುವರೆಸಿ...... ಕವನ ಬರೆಯಲು ಪ್ರಯತ್ನಿಸಿ.....

ಮನಸಿನ ಮಾತುಗಳು ಹೇಳಿದರು...

ಜಲನಯನ & ದಿನಕರ ಅವರೇ,
ಕಾಮೆಂಟ್ಸ್ ಗೆ ಧನ್ಯವಾದಗಳು ..:):)

Pradeep ಹೇಳಿದರು...

haha, nice ending......

kavyadarsha ಹೇಳಿದರು...

Hi Divya,
Nimma hagaluganisina kate tumba chennagide.......

kavyadarsha ಹೇಳಿದರು...

Hi Divya,
Nimma hagaluganisina kate tumba chennagide.......