ಭಾನುವಾರ, ಸೆಪ್ಟೆಂಬರ್ 13, 2009

ಮಾನವೀಯತೆ ಎಲ್ಲಿದೆ ? ...


ಕಳೆದವಾರ office ಗೆ ರಜೆ ಇದ್ದ ದಿನ .ಯಾಕೋ ನನಗೆ ನನ್ನ ಗೆಳತಿಗೆ ,PG ಯಲ್ಲೇ ಕುಳಿತು ತುಂಬಾ ಬೋರ್ ಹೊಡೆಯುತಿತ್ತು .ಸರಿ ಇಬ್ಬರು ಸೇರಿ ಎಲ್ಲಾದರೂ ತಿರುಗಲು ಹೋಗೋಣ ಎಂದು ನಿರ್ಧರಿಸಿದೆವು.ಬೇಗ ರೆಡಿ ಆಗಿ shopping ಮಾಡೋಣ ಎಂದುಕೊಂಡು ಹೊರಟೆವು .
ನಾವಿಬ್ಬರೂ full shopping ಮಾಡಿದೆವು. ಎಲ್ಲ mall ಗಳಿಗೆ ತಿರುಗಿದೆವು .ಅವಳೇ ಜಾಸ್ತಿ shopping ಮಾಡಿದ್ದು. ನಾನು ಅಷ್ಟೇನೂ ವಿಶೇಷವಾಗಿ ಕರಿದಿಸಿರಲಿಲ್ಲ .ಅವಳಿಗೂ ಸ್ವಲ್ಪ brand ಹುಚ್ಚು. ಒಂದೊಂದು t-shirt ಗಳಿಗೆ ಅವಳು ಸಾವಿರಗಟ್ಟಲೆ ಕೊಡುತ್ತಿದ್ದುದ್ದನ್ನು ನೋಡಿ ನನಗೇನೋ ಒಂತರಹ ಕಸಿವಿಸಿ ಆಗುತ್ತಿತ್ತು ಯಾಕೋ ಗೊತ್ತಿಲ್ಲ .ಜನ ಹೇಗೆ ಈ ಹುಚ್ಚು ಗೀಳುಗಳಿಗೆ ಅಂಟಿಕೊಂಡು ಬಿಡುತ್ತಾರೆ ಅನಿಸಿಬಿಟ್ಟಿತು.ಸರಿ ಅವಳ shopping ಆಯಿತು ನಾವು ಹೊರಗೆ ನಡೆದೆವು.
ಸ್ವಲ್ಪ ದೂರ ಹೋಗುತ್ತಿದ್ದಂತೆ ರಸ್ತೆಯಲ್ಲಿ ಒಂದು ಚಿಕ್ಕ ಹುಡುಗ ನಮ್ಮೆದುರಿಗೆ ಬಂದ.
ಸುಮಾರು 5-6 ವರ್ಷದವ ಇರಬಹುದು ಅವನು ಅಷ್ಟೆ .ಅವ ಭಿಕ್ಷೆ ಬೇಡುತ್ತಿದ್ದ . ಮೈಮೇಲೆ ಒಂದು ಹಳೇ ಚಡ್ಡಿ ಬಿಟ್ಟರೆ ಬೇರೇನೂ ಇರಲಿಲ್ಲ. ಅವನ ಎದೆ ಮೂಳೆಗಳು ಕಾಣುತ್ತಿದ್ದವು .
ನಮ್ಮ ನೋಡುತ್ತಿದ್ದಂತೆ ಆ ಮಗು ನಮ್ಮ ಹತ್ತಿರ ಬಂದಿತು .
"ಅಕ್ಕ ಹೊಟ್ಟೆ ಹಸಿವು .3 ದಿನದಿಂದ ಹೊಟ್ಟೆಗೆ ತಿಂದಿಲ್ಲ .ದಯವಿಟ್ಟು 2 ರೂ ಕೊಡಿ "-ಅಂತ ಗೋಗರೆಯುತ್ತಿದ್ದ . ಸಾಲದಕ್ಕೆ ನನ್ನ ಕಾಲಿಗೂ ಬೀಳತೊಡಗಿದ . ನನಗೋ ಅಯ್ಯೋ ಅನ್ನಿಸಿಬಿಟ್ಟಿತು . ತೊಗೊಳಪ್ಪ 10 ರೂ. ಕಾಲಿಗೆಲ್ಲಾ ಬೀಳಬೇಡ ಎಂದೆ. ಆ ಘಳಿಗೆ ಅವನ ಮುಖದಲ್ಲಿ ಒಂದು ನಗೆ ಬಂತಲ್ಲ ಎಷ್ಟು ಸಂತಸವಾಯಿತು ನನಗೆ. ಬಹುಷಃ ನನ್ನ ಸ್ಥಾನದಲ್ಲಿ ಯಾರಿದ್ದರು ಅವರಿಗೂ ಹೀಗೆ ಸಂತಸವಾಗುತಿತ್ತೇನೋ??
ಹಾಗೆ ಕೊಟ್ಟು ನಾವು ಬರುತ್ತಿದ್ದಾಗ ನನ್ನ ಗೆಳತಿ ಹೇಳಿದಳು."ದಿವ್ಯ ಅವರಿಗೆಲ್ಲ ಯಾಕೆ ಕೊಡುತ್ತೀಯ ? ನಿನಗೆ ಬುದ್ದಿ ಇಲ್ವಾ? ದುಡ್ಕೊಂಡು ತಿನ್ನಕಾಗಲ್ಲ.waste fellows . ಓದಿ ಉದ್ದಾರ ಅಗಕೆ ಆಗಲ್ಲ ಇವ್ರಿಗೆ "-ಅಂತೆಲ್ಲ ಬೈಯುತ್ತಿದ್ದಳು.
ನನಗೆ ಅವಳ ಮಾತು ತುಂಬಾ ಬೇಸರ ಮಾಡಿತು .
ಅಲ್ಲ ಅವ ಇನ್ನು 5 ವರ್ಷದ ಮಗು .ಅವ ಎಲ್ಲಿ ದುಡಿಯಲು ಹೋಗಬೇಕು?ಅವನಿಗೆ ಒಂದು 10 ರೂ ಕೊಟ್ಟರೆ ನಮ್ಮದೇನು ಹೋಗುತ್ತದೆ? ಅವ ಓದುತ್ತೀನಿ ಅಂದರೂ ಅವನನ್ನು ಶಾಲೆಗೆ ಸೇರಿಸುವರು ಯಾರು? ಅದೆಲ್ಲ ಕಡೆಗಿನ ಮಾತು. ಹೊಟ್ಟೆ ತುಂಬಿದರೆ ತಾನೆ ಓದುವ ಮಾತು.
mall ಗೆ ಹೋಗಿ 150 ರೂ t-shirt ಗೆ 1500 ರೂ ಕೊಟ್ಟು ಕೊಂಡುಕೊಳ್ಳುವ ಜನ ,ಆ ಬಡ ಹುಡುಗನಿಗೆ 10 ರೂ ಕೊಟ್ಟರೆ ಯಾಕೆ ಹೀಗಾಡಬೇಕು?
ಮಾನವೀಯತೆ ಎಲ್ಲಿದೆ ?
ಎಷ್ಟೋ ಜನ ಇದ್ದಾರೆ ನನ್ನ ಗೆಳತಿಯ ಹಾಗೆ ಯೋಚಿಸುವರು .
ಕುಡಿಯುವುದು ,ಸೇದುವುದು,ಇದ್ಯಾವುದಕ್ಕೂ ಖರ್ಚು ಮಾಡಿದ ದುಡ್ಡು ಅವರಿಗೇನು ಅನ್ನಿಸುವುದಿಲ್ಲ .ಆದರೆ ಯಾರೋ ಬಡವರಿಗೆ ಕೊಡಬೇಕು ಅಂದಾಗ ಅವರ" ಲೆಕ್ಕಾಚಾರದ ಬುದ್ದಿ "ಎಚ್ಚೆತ್ತು ಕೊಂಡು ಬಿಡುತ್ತದೆ .ಹೇಗೆದೆ ಅಲ್ಲವ?
ನಮಗೋಸ್ಕರ ಸಾವಿರಾರು ರೂಪಾಯಿ ಖರ್ಚು ಮಾಡುವ ನಾವು ,ತೀರ ಹಸಿವು ಎಂದವರಿಗೆ ನಮಗೆ ಕೈಯಲ್ಲಾದ ಸಹಾಯ ಮಾಡಿದರೆ ತಪ್ಪೇನು ಇಲ್ಲ ಅಂದುಕೊಳ್ಳುತ್ತೇನೆ.
ನೀವೇನು ಹೇಳುತ್ತೀರಿ?

39 ಕಾಮೆಂಟ್‌ಗಳು:

Ittigecement ಹೇಳಿದರು...

ದಿವ್ಯಾರವರೆ...

ನಿಮ್ಮ ಅಭಿಪ್ರಾಯ ಸರಿಯಾಗಿದೆ...
ಹತ್ತು ರುಪಾಯಿ ಕೊಡುವದರಿಂದ ಆ ಬಡ ಹುಡುಗನ ಹಸಿವೆ ನೀಗುತ್ತದೆ...
ಆದರೆ ಇದನ್ನೇ ದಂಧೆ ಮಾಡಿಕೊಂಡವರಿರುತ್ತಾರಲ್ಲ..!

ಆದರೂ ಮಕ್ಕಳು ಬೇಡುತ್ತಿರುವಾಗ "ಚುರ್" ಅನ್ನುತ್ತದೆ..
ಕೊಡಬಾರದು ಎಂದು ಗಟ್ಟಿ ಮನಸ್ಸು ಮಾಡಿದ್ದರೂ..
ತಡೆಯಲಾರದೆ ಕೊಟ್ಟು ಬಿಡುತ್ತೇನೆ...

ನಾವು ಕೊಡುವದು ಅವರಿಗೆ "ಪ್ರೋತ್ಸಾಹವಾಗಬಾರದು.." ಅಲ್ಲವಾ...?

ಚಂದದ ಲೇಖನ... ನಿಮ್ಮ ಶೈಲಿಯೂ ಚೆನ್ನಾಗಿದೆ..

ಅಭಿನಂದನೆಗಳು...

ಸವಿಗನಸು ಹೇಳಿದರು...

ದಿವ್ಯ,
ನಿಮ್ಮ ಮಾತು ಅಕ್ಷರಶ: ನಿಜ....ಯಾಕೆ ಜನ ಹೀಗೆ ಮಾಡ್ತಾರೆ....ನನಗೂ ಬಹಳ ಅನುಭವ ಆಗಿದೆ ಈ ರೀತಿ.... ತಮಗೆ ಅಂದ್ರೆ ಲೆಕ್ಕವೇ ಇಲ್ಲದ ಹಾಗೆ ಖರ್ಚು ಮಾಡ್ತಾರೆ ಅದೂ ದುಂದು ವೆಚ್ಚ...ನಿಜ "ಮಾನವೀಯತೆ ಎಲ್ಲಿದೆ ?" ಯುವ ಪೀಳಿಗೆ ಅರಿತು ಕೊಂಡು ಸ್ವಲ್ಪವಾದರೂ ಸಹಾಯ ಮಾಡುವ ಪ್ರವೃತಿ ಬೆಳೆಸಿಕೊಳ್ಳಬೇಕು.....
ಎಲ್ಲರನ್ನು ಎಚ್ಚರಿಸಿದ್ದಕ್ಕೆ ಧನ್ಯವಾದಗಳು..
ಮಹೇsh

ಸುಬ್ರಹ್ಮಣ್ಯ ಹೆಗಡೆ ಹೇಳಿದರು...

Nice article :)

ಸುಧೇಶ್ ಶೆಟ್ಟಿ ಹೇಳಿದರು...

neevu heliddu 100% sari... avarigaagi hechchenu maadalu saadya aagadiddru kailaadashtu maaduvudu maanaveeyathe....

nimma ithara lekhanagalu kooda ishta aadavu...

maththe baruththene...

ಜಲನಯನ ಹೇಳಿದರು...

ನಿಜ ಕಾಳಜಿಯ ಮನೋಧರ್ಮ, ಮಾನವನ ಕಷ್ಟಗಳಿಗೆ ಮರುಗುವ ಮನಸಿದ್ದವರಿಗೆ ನಿಮ್ಮಂತೆಯೇ ಅನಿಸುವುದು ಸಹಜ. ನನಗೆನಿಸುವುದಿಷ್ಟೆ...ನಮ್ಮನ್ನು ಈ ಮಟ್ಟದಲ್ಲಿರುವಂತೆ ಮಾಡಿ ಅವರನ್ನು ನಮ್ಮ ಮುಂದೆ ನಿಲ್ಲಿಸುವ ವಿಧಿ ಕೇಳೋದು...ನಿನಗೂ ನಾಳೆ ಈ ಗತಿ ಬಂದರೆ ನೀನು ನಿನ್ನ ಎದುರಿನವನಿಂದ ಏನನ್ನು ನಿರೀಕ್ಷಿಸುತ್ತೀಯಾ..?? ಅದಕ್ಕೆ ಉತ್ತರ ನಮಗೆ ಗೊತ್ತಿದ್ದರೆ...ನಿಮ್ಮಂತೆ ಮಾಡುತ್ತೇವೆ..ಉತ್ತರ ಗೊತ್ತಿದ್ದರೂ ಮರೆಮಾಚುವವರು ಸಬೂಬು ಕೊಟ್ಟು ನಿಮ್ಮ ಗೆಳತಿಯ ತರಹ ನುಣಿಚಿಕೊಳ್ಳುತ್ತಾರೆ.

Unknown ಹೇಳಿದರು...

ಕೆಲವರು ಹೀಗೆ ಅನಾವಶ್ಯಕವಾಗಿ ಬಹಳ ಖರ್ಚು ಮಾಡುತ್ತಾರೆ, ಆದರೆ ಅವಶ್ಯಕತೆ ಇರುವವರಿಗೆ ೫ ರೂ ಕೊಡಲು ಅಳುತ್ತಾರೆ, ಅಂಥವರಿಗೆ ಬುದ್ದಿ ಹೇಳಿದರೆ ಅವರು ಕೇಳುವುದು ಕಡಿಮೆ, ಇದು ಅರ್ಥವಾಗಬೇಕಾದರೆ ಅವರಿಗೊಂದು ದೊಡ್ಡ ಪ್ರಾಬ್ಲಂ ಬರಬೇಕು. ಆಗ ಸರಿಯಾಗುತ್ತಾರೆ.

ಮನಸಿನ ಮಾತುಗಳು ಹೇಳಿದರು...

ಪ್ರಕಾಶಣ್ಣ ,
ನಿಮ್ಮ ಕಾಮೆಂಟ್ಸ್ ಗೆ ಧನ್ಯವಾದಗಳು...
ಅದನ್ನೇ ದಂಧೆ ಮಾಡಿಕೊಂಡ್ರೆ ನಾವೇನೂ ಮಾಡಕಾಗಲ್ಲ ....ಅದು ಅವರಿಗೆ ಬಿಟ್ಟಿದ್ದು...
ಅದನೆಲ್ಲ ಯೋಚಿಸಿದರೆ ಸಹಾಯ ಮಾಡಲು ಮನಸ್ಸು ಬರುವುದಿಲ್ಲ...
ಧನ್ಯವಾದಗಳು..:):)

ಮನಸಿನ ಮಾತುಗಳು ಹೇಳಿದರು...

ಸವಿಗಾನಸು,
ನಿಜ ಎಷ್ಟೂ ಜನ ಹಾಗೆ ತಮಗೆಂದರೆ ಬೀಕದ ಹಾಗೆ ಖರ್ಚು ಮಾಡುತ್ತಾರೆ,
ಆದರೆ ಬೇರೆಯವರಿಗೆ ಕೊಡುವುದೆಂದರೆ ಆಗದ ಕೆಲಸ,
ಕೊಡುವ ಬುಡ್ಡಿ ಎಲ್ಲರಿಗೂ ಇರುವುದಿಲ್ಲ..
ಧನ್ಯವಾದಗಳು..:):)

ಮನಸಿನ ಮಾತುಗಳು ಹೇಳಿದರು...

Subbu,
than you soo much for your comments..
please keep visiting..:):)

ಮನಸಿನ ಮಾತುಗಳು ಹೇಳಿದರು...

ನಿಜ ಸುಧೇಶ್,
ಅವರಿಗಾಗಿ ನಮಗೆ ಎಲ್ಲದನ್ನೂ ಮಾಡಲು ಆಗದೀದ್ದರ ಹಸಿವು ಎಂದಾಗ ಹಿಂದೆ ಮುಂದೆ ಯೋಚಿಸದೇ ಕೊಡುವುದೇ ಮಾನವೀಯತೆ ನನ್ನ ಪ್ರಕಾರ..
ಕಾಮೆಂಟ್ಸ್ ಗೆ ಧನ್ಯವಾದಗಳು..:):)

ಮನಸಿನ ಮಾತುಗಳು ಹೇಳಿದರು...

ಜಲನಯನ ಅವರೇ,
ನೀವು ಹೇಳಿದ ಮಾತು ಅಕ್ಷರಶಃ ಸತ್ಯ,
ಬೇಯವರ ಕಷ್ಟಗಳಿಗೆ ಮರುಗುವ ಗುಣ ಎಲ್ಲರಲ್ಲಿರುವುದಿಲ್ಲ,
ಕೆಲವರಿಗೆ ಅವರ ಕಣ್ಣೀರು ಕೂಡ ನಾಟಕ ಎನಿಸಿದರೂ ಅನಿಸಬಹುದು ..
ಧನ್ಯವಾದಗಳು..
ಮತ್ತೆ ಬನ್ನಿ ..:)

ಮನಸಿನ ಮಾತುಗಳು ಹೇಳಿದರು...

Ismail Mk ಅವರೇ ,
ನಿಜ ನೀವು ಹೇಳಿದ್ದು,
ನನ್ನ ಗೆಳಾತಿಯೇ ಸಾಕ್ಷಿ,ಅವಳಿಗಾಗಿ ಸಾವಿರಗಟ್ಟಲೇ ಖರ್ಚು ಮಾಡಿದ ಅವಳು ಆ ಹುಡುಗನಿಗೆ ೧೦ ರೂ ಕೊಡಬೇಕು ಎಂದಾಗ ಸ್ಪಂದಿಸಿದ ರೀತಿಯೇ ಸಾಕ್ಷಿ..
ಧನ್ಯವಾದಗಳು..
ಮತ್ತೆ ಬನ್ನಿ..

ಅನಾಮಧೇಯ ಹೇಳಿದರು...

ದಿವ್ಯ, ನಿಮ್ಮ ಪೋಸ್ಟ್ ಓದುತ್ತಿದ್ದಂತೆ ಟ್ರ್ಯಾಫಿಕ್ ನಲ್ಲಿ , ಬೀದಿಯಲ್ಲಿ ನಮ್ಮ ಸುತ್ತ ಸುಳಿಯುವ ಬೇಡುವ ಚಿಕ್ಕ ಮಕ್ಕಳು ಕಣ್ಣ ಮುಂದೆ ಬಂದರು. 'ಕೊಡಬೇಕು' ಅನ್ನಿಸಿದರೂ ಅದೇ ಅವರಿಗೆ ಅಭ್ಯಾಸ ಆಗಿಬಿಟ್ಟರೆ ಎನ್ನೋ ಭಯ ಹಲವು ಸಾರಿ ನಮ್ಮ ಕೈಯ್ಯನ್ನು ತಡಿಯುತ್ತೆ.

ನಾನು ಕೆಲವೊಮ್ಮೆ ಸ್ವಲ್ಪ ದೊಡ್ಡವರಿಗೆ 'ನಮ್ಮನೆಗೆ ಬರ್ತೀಯಾ ಕೆಲಸ ಕೊಡ್ತೀನಿ' ಅಂತ ಕರೆದದ್ದೂ ಇದೆ. ಅದಕ್ಕೆ ಯಾರೂ ರೆಸ್ಪಾಂಡ್ ಮಾಡಲ್ಲ.

ನೀವು 'ಟ್ರ್ಯಾಫಿಕ್ ಸಿಗ್ನಲ್' ಅಂತ ಒಂದ್ ಮೂವೀ ಬಂದಿತ್ತು. ಅದನ್ನ ನೋಡಿದ ಮೇಲೆ ಯಾರ ಮೇಲೆ ನಂಬಿಕೆ ಇಡೋದು ಅನ್ನೋದೇ ದೊಡ್ಡ ಪ್ರಶ್ನೆ ಆಗಿ ಬಿಡುತ್ತೆ!!!

ನಾನು 'ಕೋಡೋದರ' ವಿರೋಧಿ ಅಂತ ಅಂದ್ಕೊಬೇಡಿ. 'ಸಪಾತ್ರ ದಾನ' ಒಳ್ಳೇದು ಅಂತೇನಿ ಅಷ್ಟೇ!!!

Unknown ಹೇಳಿದರು...

nice article!

its good... hosa hosa subject mele article baritaidira...

best of luck

Vinay Hegde ಹೇಳಿದರು...

Nice article... but feel bad to see kids of such age going for these kind of activities...there may be some mistakes from their parents also...they intentionally pull these kids to such kind of activities to pull out public attention n sympathy... this is really a crime sought of...they are deceiving with that child's childhood days n also never they think what it may effect on that child's mentality in mere future....

Well giving a penny is no wrong but it really reflects its true meaning blooms out in what way that money has been used later...coz in lots of cases it has been misused n they undergo some pathetic bad habits.. which really need to be curbed...

Hoping so that Rs.10been used to its max white side of the money I conclude myself.

The Article is really good...U are much cald to be a Local Gal...take it as tag..suits u more... :) Take care..;)

ಮನಸಿನ ಮಾತುಗಳು ಹೇಳಿದರು...

ಸುಮನ ,
ನಿಮ್ಮ ಮಾತುಗಳು ನಿಜ..
ಕಾಮೆಂಟ್ಸ್ ಗೆ ಧನ್ಯವಾದಗಳು ..:)

ಮನಸಿನ ಮಾತುಗಳು ಹೇಳಿದರು...

thank you Vijay...:)

ಮನಸಿನ ಮಾತುಗಳು ಹೇಳಿದರು...

Hi Vinay,
even I agree with whatevr you say..
but still these are big topic to discuss i guess..
so what I say is ,at that moment to give 10rs you dont need to think much..
what they use it,what vl happen to money which we give al these things if runs in mind then you cant help anyone..
Evn parents are also wrong here..they themselves push their kids for beggary..this is a real tragedy thats happening around us..
anyways thanks for your precious comments..
keep visiting..
thanks..:):)

ಗೌತಮ್ ಹೆಗಡೆ ಹೇಳಿದರು...

hello divya ji. nanna blog noadiddakke dhanyavaada. neevu yaavudaadaroo hosa kavana post maadidaga blog ge dayavittu nanna gmail ge message haaki bidi. gadyavannu nanu oaduvudu kadime:);)nanna gmail address- churmuri.hegde@gmail.com

shivu.k ಹೇಳಿದರು...

ದಿವ್ಯ ಮೇಡಮ್,

ನೀವು ಹೇಳಿದ್ದು ಸರಿಯಿದೆ. ನಾವು ಆಡಂಬರದ ಜೀವನಕ್ಕೆ ದುಂದುವೆಚ್ಚ ಮಾಡುತ್ತೇವೆ. ಆದ್ರೆ ಯಾರಿಗೂ ಸಹಾಯ ಮಾಡಬೇಕಾದಾಗ ಲೆಕ್ಕಚಾರ ಹಾಕುತ್ತೇವೆ...

ಸೊಗಸಾದ ಲೇಖನ...

ಮೌನಿ ಹೇಳಿದರು...

ದಿವ್ಯಾ...
ಚೆನ್ನಾಗಿದೆ..
ಹಂ...ಇದರ ಬಗ್ಗೆ ನನ್ನದು ಪರ-ವಿರೋಧ ಎರಡೂ ಇದೆ...ನನಗೂ ಇಂಥವರನ್ನು ಕಂಡಾಗ ಸಹಾಯ ಮಾಡುವ ಮನಸ್ಸು ಆಗುತ್ತದೆ,ಬಹುಷಃ ಎಲ್ಲರಿಗೂ.
ನಾವು ಕೊಟ್ಟು ಕೊಟ್ಟು ಎಷ್ಟು ಕೊಡಲು ಸಾಧ್ಯ?ಅದೂ ಅಲ್ಲದೆ ಇಷ್ಟೆಲ್ಲ ಅನಿಸುವ ನಮಗೆ...ಬೇರೆ ಯಾವ ರೀತಿಯಲ್ಲಿ ಸಹಾಯ ಮಾಡಲು ಸಾಧ್ಯ?(ಅವರು ಮತ್ತೆ ಮತ್ತೆ ಬೇಡುವ ಗೀಳಿಗೆ ಬೀಳದಂತೆ).
ಮತ್ತೊಂದು ವಿಷಯ ನನಗನ್ನಿಸುವದು...ಕೊಡುವಾಗ ಯೋಚಿಸಿ ಕೊಡಿ...ನಂತರ ಯಾಕೆ ಕೊಟ್ಟೆ,ಸರಿಯೋ ತಪ್ಪೋ ಅನ್ನುವ ವಿಮರ್ಷೆ ತರವಲ್ಲ ಅಂತ ನನ್ನ ಅನಿಸಿಕೆ...
ಸಹಜವಾಗಿ ನಮ್ಮೆಲ್ಲರಿಗೂ (ಕೆಲವೊಬ್ಬರನ್ನು ಬಿಟ್ಟು) ಅನಿಸುವದನ್ನು (ಬೇರೆ ಅವಶ್ಯಕತೆಗಳಿಗೆ ಸಾವಿರಾರು ರೂಗಳನ್ನು ಹಾಳು ಮಾಡುವ ನಾವು ಕೇವಲ ಚಿಲ್ಲರೆಗಳನ್ನು ಬೇರೆಯವರ ಅನುಕೂಲಕ್ಕೆ ವಿನಿಯೋಗಿಸುವಾಗ ಚೌಕಾಶಿ ಮಾಡುತ್ತೇವೆ, ಅಲ್ಲವೇ) ಇಲ್ಲಿ ಬರೆದಿದ್ದೀರ.

Arjun ಹೇಳಿದರು...

brilliant point mentioned in your post, but i feel instead of giving money you could have bought some food for them, you never know how the money is going to be used!

ಮನಸಿನ ಮಾತುಗಳು ಹೇಳಿದರು...

ಶಿವು ಸರ್,
ನೀವು ಹೀಳಿದ್ದು ನಿಜ..
ಮತ್ತೆ ಬನ್ನಿ...:):)

ಮನಸಿನ ಮಾತುಗಳು ಹೇಳಿದರು...

ಮೂಕ ರೋದನ,
ಪ್ರತಿಕ್ರಯಿಸಿದ್ದಕ್ಕೆ ಧನ್ಯವಾದಗಳು..

ಮನಸಿನ ಮಾತುಗಳು ಹೇಳಿದರು...

Arjun,
thanks for the comments,
keep visiting..

Manjunath ಹೇಳಿದರು...

ನಮಸ್ಕಾರ ದಿವ್ಯಾ ...
ನಿಮ್ಮ ಬ್ಲಾಗಿನ ಲಿಂಕು ಪ್ರವೀಣ ಬ್ಲಾಗ್ನಿಂದ ಸಿಕ್ತು...
ನಿಮ್ಮ ಎಲ್ಲ ಲೇಖನಗಳನ್ನು ಅಲ್ಲದಿದ್ರೂ ಒಂದೆರಡನ್ನು ಓದಿದೆ... ತುಂಬಾ ಚೆನ್ನಾಗಿವೆ.
ಶುಭವಾಗಲಿ ...

ಮನಸಿನ ಮಾತುಗಳು ಹೇಳಿದರು...

ಮಂಜು ಅವರೇ ,
ನನ್ನ ಬ್ಲೋಗಿಗೆ ಸ್ವಾಗತ,
ಹೀಗೆ ಬರುತ್ತಿರಿ,ಪ್ರೋತ್ಸಾಹಿಸಿರಿ,
ಧನ್ಯವಾದಗಳು.

Dileep Hegde ಹೇಳಿದರು...

ಎಲ್ಲ ಕಡೆಯೂ ಮಕ್ಕಳ ಶೋಷಣೆ ಅವ್ಯಾಹತವಾಗಿ ನಡೆಯುತ್ತಿದೆ... ರಸ್ತೆ ಬದಿಯಿಂದ, ರಂಗು ರಂಗಿನ reality show ಗಳ ವರೆಗೆ..

ನೀವು ಕೊಟ್ಟ ಹಣ ನಿಮ್ಮಿಂದ ಹತ್ತು ರೂಪಾಯಿ ಪಡೆದ ಹುಡುಗನ ಹಸಿವೆ ನೀಗಿಸಲೇ ಕರ್ಚಾಯಿತೋ ಅತವಾ ಅವನ ಅಪ್ಪನ ನಶೆಗೆ ಹುಡಿಯಾಯಿತೋ ಬಲ್ಲವರಾರು..

ಆದರೂ ಇಂತಹ ಸಂದರ್ಭಗಳಲ್ಲಿ ನಾವು ತತ್ಕ್ಷಣಕ್ಕೆ ಐದೋ, ಹತ್ತೋ ಅವರ ಕೈಗಿತ್ತು ಮರೆತುಬಿಡುತ್ತೇವೆ ಅಷ್ಟೇ.. ಆ ಕ್ಷಣಕ್ಕೆ ಚುರ್ ಎಂದ ನಮ್ಮ ಕರುಳಿನ ವೇದನೆ ಅಲ್ಲಿಗೆ ಸಮಾಪ್ತಿಗೊಳ್ಳುತ್ತದೆ...

ಹಾಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಾಗ ಮಾತ್ರ ಲೆಕ್ಕಾಚಾರ ನೆನಪು ಮಾಡಿಕೊಳ್ಳುವ ನಿಮ್ಮ ಗೆಳತಿಯಂತವರ ಮನಸ್ಥಿತಿ ವಿಚಿತ್ರವೆನಿಸುತ್ತದೆ...


ಉತ್ತಮ ಬರಹ.. ಬರೆಯುತ್ತಿರಿ..

ದಿಲೀಪ್ ಹೆಗಡೆ

thandacool ಹೇಳಿದರು...

ನಿಮ್ಮ ಕಳಕಳಿ ಸರಿ...ಆದರೆ ಆಪಾತ್ರ ದಾನ ಯಾವತ್ತು ಒಳ್ಳೆಯದಲ್ಲ. ಎನ್ನುವುದು ನನ್ನ ಅಭಿಪ್ರಾಯ. ಬೇಡುವವರಿಗೆ ನೀಡುವುದು ತಪ್ಪಲ್ಲ. ಭಿಕ್ಷೆ ಪಡೆದು ಕೊಳ್ಳಲು ಯೋಗ್ಯನೇ ಎನ್ನುವುದು ಮುಖ್ಯ. ಬರವಣಿಗೆ ಚೆನ್ನಾಗಿದೆ.

ಮನಸಿನ ಮಾತುಗಳು ಹೇಳಿದರು...

ದಿಲೀಪ್ ಅವರೇ ,
ತುಂಬಾ ಧನ್ಯವಾದಗಳು,
ಮತ್ತೆ ಬರುತ್ತಿರಿ..:)

ಮನಸಿನ ಮಾತುಗಳು ಹೇಳಿದರು...

ನಾಗರಾಜ್ ಅವರೇ,
ತಮ್ಮ ಕಾಮೆಂಟ್ ಗೆ ಧನ್ಯವಾದಗಳು,
ಮತ್ತೆ ಬರುತ್ತಿರಿ...:)

ಅನಾಮಧೇಯ ಹೇಳಿದರು...

yes, u r right.... for many people when they go for shopping 1000 rs looks like a 10 ruppee and when they are i front of people like u mentioned or in temple even 10 rs looks like 1000 rupees for them.

People are weird.

ಮನಸಿನ ಮಾತುಗಳು ಹೇಳಿದರು...

correct Abhilash..:):)
thanku..:)

ವಿ.ರಾ.ಹೆ. ಹೇಳಿದರು...

Namaste,

nimma manasina maatugaLu sari ive.
aadre almost antaha makkalannu baLasikondu duddu mADikolluvavaru kelavu dodda maigaLLariruttare. makkaLige bikshe koTTa haNa avara jEbu sEruttade. EnE aadarU matte makkaLige arehotteye gati.

Apart from that, this is my first visit to ur blog..its good. i m reading all posts.. thank you..

ಮನಸಿನ ಮಾತುಗಳು ಹೇಳಿದರು...

ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಎಲ್ಲರಿಗು ನನ್ನ ಧನ್ಯವಾದಗಳು..
ದಿವ್ಯ

ರವಿಕುಮಾರ್ ಎಸ್. ಎಂ. ತರೀಕೆರೆ ಹೇಳಿದರು...

ದಿವ್ಯ ಭಾವನೆಗಳಿಗೆ ಬೆಲೆ ಕೊಡುವವರಿಗೆ ಹೆಚ್ಹು ಮಾನವೀಯತೆ ಇರುತ್ತೆ ಅಲ್ವ...

ನೆನಪುಗಳ ಮೆಲುಕು ಹೇಳಿದರು...

ಕ್ಷಮಿಸಿ,
ನಾವು ನೀಡುವ ಹತ್ತು ರುಪಾಯಿ ಇಂದಿನ ದುಬಾರಿ ಯುಗದಲ್ಲಿ ಒಂದರೆ ಸೆಕಂಡಿಗೂ ಸಾಕಾಗದು. ನಾವು ನೀಡುವ ಹಣ ಅವರ ದಂಧೆಗೆ ಪೂರಕ ಆಗಬಾರದು. ಆ ಹಣ ಕೇಳುವ ಮಕ್ಕಳೇ ಮುಂದೆ ತಮ್ಮ ಮಕ್ಕಳನ್ನು ಅದೇ ದಂಧೆಗೆ ದೂಡುವಂತೆ ಮಾಡುವ ತಂದೆ-ತಾಯಿ ಆಗುವ ಅಪಾಯ ಹೆಚ್ಚು. ಈಗ ನಿಮ್ಮ ಬಳಿ ಹಣ ಪಡೆದ ಹುಡುಗ ಏನು ಮಾಡುತ್ತಾನೆಂದು ನೋಡಲು ಕೇವಲ ಐದು ನಿಮಿಷ ಅಲ್ಲಿ ನಿಲ್ಲಬೇಕಿತ್ತು. ಆ ಹಣ ಯಾರ ಕೈ ಸೇರಲಿತ್ತು ಎಂಬುದು ತಿಳಿತಿತ್ತು.
ನೀವು ಆ ಮಕ್ಕಳಿಗೆ ಹಣ ಕೊಟ್ಟಾಗ ಸಂತೋಷ ನೋಡಿದಿರಲ್ಲ, ಅದು ಕ್ಷಣಿಕ. ನಿಮಗೆ ತೃಪ್ತ ಭಾವನೆ ದಕ್ಕಬೇಕಾದರೆ, ಆ ಮಕ್ಕಳ ಮನಸಿನ ಉಲ್ಲಾಸ ಕಾಣಬೇಕು. ಅದು ಕನಬೇಕಿದ್ದರೆ, ನಾಳೆ ನೀವು ಹೋಗುವಾಗ ಸಿಗುವ ಮಕ್ಕಳಿಗೆ ಸಿಹಿ ತಿನಿಸನ್ನೂ ಅಥವಾ ಒಂದು ಹನ್ನನ್ನೋ ಕೊಟ್ಟು, ಒಂದರೆ ನಿಮಿಷ ಅಲ್ಲಿ ನಿಲ್ಲಿ. ಅದನ್ನು ತಿಂದ ಆ ಮಗುವಿನ ಮೊಗದಲ್ಲಿ ನಿಜವಾದ ಆನಂದ ಅದರ ಮನಸಿನ ಆಳದಿಂದ ಬರುವುದನ್ನು ಕಾಣಬಹುದು. ಅದಕ್ಕೇನಾದರೂ ಆ ವೇಳೆಗೆ ಹೊಟ್ಟೆ ತುಂಬಿದ್ದರೆ ಅದು ಅಲ್ಲೇ ತನ್ನಂತೆ ಇರುವ ಮಕ್ಕಳಿಗೆ ನೀಡುತ್ತೆ. ಅಂದ ಹಾಗೆ ನಿಮ್ಮ ಕಾಲಗಿಗೆ ಹಾಗು ನಿಮ್ಮ ಬರಹಕ್ಕೆ ಥ್ಯಾಂಕ್ಸ್.

ಮನಸಿನ ಮಾತುಗಳು ಹೇಳಿದರು...

Hi Friends,
ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು ....:):)

Unknown ಹೇಳಿದರು...

ನೀಮ್ಮಹಂತವರು ತುಂಬಾ ವಿರಳ ಇದೆ ರೀತಿ ಎಲ್ಲವರಿಗೆ ಹ್ರದಯವಂತಿಕೆ ಇದರೆ ದೇಶದಲ್ಲಿ ಬಡತನ ಇರುವದಿಲ್ಲ ತುಂಬ ಧನ್ಯವಾದಗಳು