ಸೋಮವಾರ, ಆಗಸ್ಟ್ 24, 2009

ಇರುವುದೆಲ್ಲವ ಬಿಟ್ಟು...ಆಗೆಲ್ಲ ನಾನು ಕಾಲೇಜ್ ಗೆ ಹೋಗುತ್ತಿದ್ದ ದಿನಗಳು.ನನ್ನ ಗೆಳೆಯ ಗೆಳತಿಯರೆಲ್ಲ ಚೆನ್ನಾಗಿ ದುಡ್ಡು ಉಡಾಯಿಸಿ ಮಜಾ ಮಾಡುತಿದ್ದರು.ನನಗು ಅಪ್ಪ ಸಾಕಸ್ಟು ದುಡ್ಡು ಕೊಡುತ್ತಿದ್ದರು ಆದರೆ ನನಗೇನೋ ಹಠ ; ಅಪ್ಪನ ದುಡ್ಡನ್ನು ಒಂದು ಪೈಸೆಯನ್ನು ಮಜಾ ಮಾಡಬಾರದು.ನಾನು ದುಡಿಯಬೇಕು ಆಮೇಲೆ ಮಜಾ ಎಲ್ಲ ಎಂದು.

ನಾನು ಡಿಗ್ರಿ ಯಲ್ಲಿ ಇರಬೇಕಾದ್ರೆ ಪ್ರೈಮರಿ ಶಾಲೆ ಮಕ್ಕಳಿಗೆ tution ಹೇಳುತ್ತಿದ್ದೆ. ಆದರೆ ಅದರಲ್ಲಿ ಬರುವ ದುಡ್ಡನ್ನೆಲ್ಲ ಬಡ ವಿಧ್ಯಾರ್ಥಿ ಟ್ರಸ್ಟ್ ಗೆ ಕೊಟ್ಟು ಬಿಡುತ್ತಿದ್ದೆ .ಹಾಗಾಗಿ ನನ್ನ ಕೈಯಲ್ಲಿ ಅಪ್ಪ ಕೊಟ್ಟ ದುಡ್ಡು ಬಿಟ್ಟರೆ ಬೇರೇನೂ ಇರುತ್ತಿರಲಿಲ್ಲ.

ನನಗೂ ಹಾಗೆಲ್ಲ ಆಸೆ ಇರಲಿಲ್ಲ ,ಗೆಳೆಯರ ಜೊತೆ ತಿರುಗ ಬೇಕು,ಹೋಟೆಲ್ಗೆ ಹೋಗಬೇಕು ಇದೆಲ್ಲ.ಸೊ ನನ್ನ ದುಡ್ಡು ಹಾಗೆ ಉಳಿದುಬಿಡುತಿತ್ತು.

ಹೀಗಿದ್ದಾಗ ನಾನು ನನ್ನ ಕೊನೆಯ ವರ್ಷದ ಡಿಗ್ರಿ ಬರುವ ಸಮಯಕ್ಕೆ ,ಮುಂದೆ ಜಾಬ್ ಮಾಡಿದಾಗೆ ಏನೆಲ್ಲಾ ಬೇಕು ಎನ್ನುವುದನ್ನು ಲಿಸ್ಟ್ ಮಾಡತೊಡಗಿದೆ.

ಡ್ರೆಸ್,shoes,ಜೀನ್ಸ್,shirts,ಪೆರ್ಫುಮೆಸ್ ಹೀಗೆ ಎನೇನೊ.ಅದರಲ್ಲಿ "ಕ್ಯಾಮರ ಮೊಬೈಲ್ "ಕೂಡ ಇತ್ತು. ಸರಿ ಡಿಗ್ರಿ ಏನೋ ಮುಗೀತು ಒಳ್ಳೆ ಕಂಪನಿಯಲ್ಲೇ ಆಯಾಸವಿಲ್ಲದೆ ಕೆಲಸ ಸಿಕ್ಕಿತು. ಮೊದಲನೆ ಸಂಬಳ ಬಂದಾಗ ಏನೋ ಸಂತೋಷ .

ನಾನು ದುಡಿದ ಮೊದಲ ಸಂಬಳ ಏನು ಅದಾಗಿರಲಿಲ್ಲ.ಆದರೂ ಅಷ್ಟೂ ದುಡ್ಡು ನಾನೇ ದುಡಿದದ್ದು ಎನ್ನುವ ಸಮಾಧಾನ,ಹೆಮ್ಮೆ.

ಆದರೆ ಆ ದುಡ್ಡು ಕ್ಯಾಮರ ಮೊಬೈಲ್ ಗೆ ಸಾಲಲಿಲ್ಲ.ಏಕೆಂದರೆ ಮೊದಲ ಸಂಬಳದಲ್ಲಿ ಅಪ್ಪನಿಗೆ ,ಅಮ್ಮನಿಗೆ,ತಂಗಿಗೆ ಎಲ್ಲ ಗಿಫ್ತ್ಸ್ ತಗೊಂಡೆ.ಸ್ನೇಹಿತರೆಲ್ಲ ಪಾರ್ಟಿ ಕೊಡುವ ವರೆಗೆ ಬಿಡಲಿಲ್ಲ.ಸೊ ಮೊದಲ ಸಂಬಳ ಹೀಗೆ ಖಾಲಿ ಆಗಿ ಹೋಯಿತು.

ನನಗೆ ನನ್ನ ಮೇಲೆ ಆಶ್ಚರ್ಯ .ಎಂದೂ ದುಡ್ಡನ್ನು ಖರ್ಚು ಮಾಡದವಳು ಈಗ ಹೇಗೆ ಇಷ್ಟು ಖರ್ಚು ಮಾಡತೊದಗಿದ್ದೇನೆ ಎಂದು?ಆದರು ಅದೇನೋ ನಾನು ದುಡಿದಿದ್ದು ಎನ್ನುವ ಹೆಮ್ಮೆ.ಸರಿ ಅಂತು ಇಂತೂ ದುಡ್ಡು ಉಳಿಸಿ ಒಂದು ಕ್ಯಾಮರ ಮೊಬೈಲ್ ತೆಗೆದು ಕೊಂಡೆ. ತುಂಬಾ ಫೋಟೋಸ್ ಗಳನ್ನೂ ತೆಗೆದೆ. ಈಗ ಕ್ಯಾಮರ ಮೊಬೈಲ್ ಗೆ ಇದ್ದ ಹುಚ್ಚು ದಿನೇ ದಿನೇ ಕಡಿಮೆ ಆಗುತ್ತಿದೆ.

ಮನಸ್ಸು ಒಂದು "digicam" ಗೆ ಸ್ಕೆಚ್ ಹಾಕುತ್ತಿದೆ.

ಸುಮಾರಗಿರುವ ಮೊಬೈಲ್ ಇದ್ದಾಗ ಕ್ಯಾಮರ ಮೊಬೈಲ್ ಬೇಕು ಅನಿಸಿತು,ಕ್ಯಾಮರ ಮೊಬೈಲ್ ಬಂದ ಕೂಡಲೇ digicam ಬೇಕು ಅನಿಸುತ್ತಿದ್ದೆ .

ಒಂದೊಮ್ಮೆ ನಗು ಬಂತು.ಮನುಷ್ಯ ಜೀವನವೇ ಹೀಗೆ ಅಲ್ಲವ.ಯಾವುದು ಇದೆಯೋ ಅದು ಬೇಡ,ಯಾವುದು ಇಲ್ಲವೊ ಅದರ ಬಗ್ಗೆ ಹೆಚ್ಚು ಆಸಕ್ತಿ.

"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂದರೆ ಇದೇ ಇರಬೇಕು -ಯಾಕೋ ನೆನಪಾಯ್ತು.

24 ಕಾಮೆಂಟ್‌ಗಳು:

Unknown ಹೇಳಿದರು...

hey! nimma lekana nanigu yello match aguteri...

ade heltaralla ketta melene budhi barodu anta hage nanu adu idu anta yeneno madi camera mobile togondide, mobile craze mugida mela matte a mobile mutoke hogale illa...

Anyways again a good write-up...

innastu lekanagallu baralli

ಮನಸಿನ ಮಾತುಗಳು ಹೇಳಿದರು...

Thanks Vijay..:):)

Vinay Hegde ಹೇಳಿದರು...

Hmmmm...Article eno channaage ide....this is a common thing in everyone's life..but nobody dare to disclose it n downtrode themselves infront of others..!!! But u dared to do that...thats really awesome abt u... Clean n clear hearted ppl will never stay back in disclosing about themselves...rare to have such ppls n m glad i have one such pearl as ma sweet frn...!!! keep going dear... :)

ಮನಸಿನ ಮಾತುಗಳು ಹೇಳಿದರು...

thank you Vinay for the comments..:)
let our friendship stay like this for ever!!!touch wood...

ಸವಿಗನಸು ಹೇಳಿದರು...

ದಿವ್ಯ,
ನಿಮ್ಮ ಮಾತು ನಿಜ....ಒಂದು ಸಿಕ್ಕಿದರೆ ಮತ್ತೊಂದು ಬೇಕು ಅನಿಸೋದು....ಮನುಷ್ಯ ಹಾಗೆ "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ"
ಚೆನ್ನಾಗಿ ಬರೆದಿದ್ದೀರಾ...ಬರೀತಾ ಇರಿ

ಮನಸಿನ ಮಾತುಗಳು ಹೇಳಿದರು...

ಸವಿಗನಸು ,
nanna blogige swagata...
nimma comment ge dhanyavaadagalu...
bheti koduttri..:):)

ಅನಾಮಧೇಯ ಹೇಳಿದರು...

DigiCam ಬಂದ ತಕ್ಷಣ ಹೊಸ ಫೋಟೋಸ್ ಹಾಕಿ ಬ್ಲಾಗ್‌ಗೆ :-)

ಜಲನಯನ ಹೇಳಿದರು...

ದಿವ್ಯಾ, ಆಸೆಯೆಂಬ ಬಿಸಿಲುಕುದುರೆ ಏಕೆ ಏರುವೆ...?? ಆಣ್ಣನವರ ಈ ಹಾಡು ನಮ್ಮ ಇಂದಿನ ಮನೋಪ್ರವೃತ್ತಿಗೆ ಹೇಳಿ ಮಾಡಿಸಿದ ಮಾತುಗಳು. ನಾನು scientist ಆಗಿದ್ದು ೧೮ ವರ್ಷ (೨೦೦೪ ರ ವರೆಗೂ) ಕಳೆದಿದ್ದಾಗಲ್ಲೂ ನನ್ನಲ್ಲಿ ಮೊಬೈಲ್ ಇರಲಿಲ್ಲ ಈಗ ಐದು ವರ್ಷದಲ್ಲಿ ಹತ್ತು ಮೊಬೈಲ್ ಬದಲಾಯಿಸಿದ್ದೇನೆ (ಈಗ ಎರಡಿವೆ). ಫೆನ್ಟಾಕ್ಸ್ ಎಸ್ಸೆಲ್ಲಾರ್ ಕ್ಯಾಮರಾ ಇತ್ತು (ಅದೂ ನನ್ನ ಮೈಕ್ರೋ ಫೋಟೊಗ್ರಾಫಿಗೆ ಕೊಂಡದ್ದು) ಆಗ್, ಎರಡು ಡಿಜಿ ಕ್ಯಾಮ್ ಮತ್ತು ಎರಡು ಹ್ಯಾಂಡಿಕ್ಯಾಂ ಗಳು, ಎಲ್ಲಾ ಹೊಸ feature ಗಳ ಹುಡುಕಾಟಕ್ಕೆ ಕೊಂಡದ್ದು...ಮಿತಿಯಿಲ್ಲ ಅಲ್ಲವೇ...?? ನಿಮ್ಮ ಲೇಖನ ನನ್ನ ಮಟ್ಟಿಗಂತೂ ಅಕ್ಷರಶಃ ಸತ್ಯ್.

ಮನಸಿನ ಮಾತುಗಳು ಹೇಳಿದರು...

Sure Raghavendra...
just waiting to get my digicam..
thanks for ur opinion..:):)

ಮನಸಿನ ಮಾತುಗಳು ಹೇಳಿದರು...

Jalanayana,
neevu helida haage manushyana aasegalige miti illa...
ondu siguttiddante mattondara ase baruttade..
nimma amulya comment galige nanna dhanyavaadagalu..:):)

Ittigecement ಹೇಳಿದರು...

ದಿವ್ಯಾ....

ಮನಸ್ಸಿನ ತುಮಲಗಳನ್ನು ಸೊಗಸಾಗಿ ಬರೆದಿರುವಿರಿ...
ನಿಮ್ಮ ವಿಧ್ಯಾರ್ಥಿ ದಿನಗಳ ಮನೋಭಾವ ಇಷ್ಟವಾಯಿತು....

ನಾವು ದುಡಿದ ಹಣದಲ್ಲಿ ನಾವು ಖರ್ಚು ಮಾಡ ಬೇಕು....

ನೀವು ಒಳ್ಳೆಯ ಕ್ಯಾಮರಾ ಆದಷ್ಟು ಬೇಗ ಖರಿದಿಸುವಂತರಾಗುವಿರಿ...

ನಮ್ಮೆಲ್ಲರ ಶುಭ ಹಾರೈಕೆಗಳು..
ಆಶೀರ್ವಾದವಿದೆ....

ಚಂದದ ಬರಹಕ್ಕೆ ಅಭಿನಂದನೆಗಳು....

ಮನಸಿನ ಮಾತುಗಳು ಹೇಳಿದರು...

ಪ್ರಕಾಶಣ್ಣ ನಿಮ್ಮ ಹಾರೈಕೆಗಳಿಗೆ ನಾ ಸದಾ ಚಿರಋಣಿ ...
ಧನ್ಯವಾದಗಳು

Unknown ಹೇಳಿದರು...

ನಮಸ್ತೆ ಮೆಡಂ,
ಕಂಡಿತ ಮನುಷ್ಯನ ಮನಸೆ ಹಾಗೆ ಇಲ್ಲದಿರುವರೆಡೆಗೆ ಮನುಷ್ಯನ ಮನಸ್ಸು ಹಾತೊರೆಯುತ್ತದೆ. ಲೇಖನ ತುಂಬಾ ಚನ್ನಾಗಿದೆ,ಧನ್ಯವಾದಗಳು
00- ಮಂಜುನಾಥ ತಳ್ಳಿಹಾಳ
"http://snehakkagi.blogspot.com"

Unknown ಹೇಳಿದರು...

ಜೀವನವೇ ಹಾಗೆ ಏನೇನೋ ಬಯಸಿದ್ದು ಸಿಕ್ಕಿದ ಮೇಲೆ ಅದರ ಮೇಲಿನ ವ್ಯಾಮೋಹ ಕಡಿಮೆಯಾಗುತ್ತದೆ.ದಿಗತದೆಡೆಗೆ ಕಣ್ಣಾಯಿಸಿ ಅದೆಷ್ಟು ಸುಂದರ ಎನ್ನುವಂತೆ ಬದುಕು....ಒಮ್ಮೆ ನನ್ನ ಬ್ಲಾಗ್ ನೋಡಿ ದಿವ್ಯ
sahayaatri.blogspot.com

Vish ಹೇಳಿದರು...

Hi Divya avare,

Nimma lekhana tumba ista vayithu. naanu ade vicharana bere thara heliddene dayavittu omme nanna "ನಾವು ಹಿಂಗ್ಯಾಕ!" vannu odi.. ಆಸೆಯೆಂಬ ಹುಚ್ಚು ಹೊಳೆಯಲ್ಲಿ ಸಿಳುಕಿ-ಮುಳುಗುವುದೆ ಜೀವನ ಅಗಿದೆ.

ಮನಸಿನ ಮಾತುಗಳು ಹೇಳಿದರು...

hi Vish,
nimma comments ge tumba thanx!!!
khandita nimma lekhanavannu voduttene...
dhanyavaada..:)

Unknown ಹೇಳಿದರು...

ನನ್ನ ತ೦ಗಿಗೆ ನಾನು ಕೊಡಿಸಿದ ಮೊಬೈಲ್ ನೆನಪಾಯಿತು . ಥ್ಯಾಂಕ್ಸ್ . ಹಳೆಯ ನೆನಪನ್ನು ಹಸಿರಾಗಿಸಿದ್ದಕ್ಕೆ .
ಹೀಗೆ ಸೊಗಸಾದ ಬರಹವನ್ನು ಬರೆಯಿರಿ :-)

ಮನಸಿನ ಮಾತುಗಳು ಹೇಳಿದರು...

thanks Roopa..:)

Dileep Hegde ಹೇಳಿದರು...

ಭಗವಂತ ಆಸೆ ಎನ್ನುವುದೊಂದನ್ನು ಸೃಷ್ಟಿಸದೆ ಇದ್ದಿದ್ದರೆ ಜಗತ್ತು ಇಷ್ಟು ಮುಂದುವರೆಯುತ್ತಿರಲಿಲ್ಲ... ನಿತ್ತ ನೀರಿನಂತೆ ಕೊಳೆತು ನಾರುತ್ತಿತ್ತೋ ಏನೋ.. ಆಸೆ ಪಡುವುದರಲ್ಲಿ ಯಾವುದೇ ತಪ್ಪಿಲ್ಲ.. ಆದರೆ ಅದನ್ನು ಪಡೆಯಲು ನಾವು ಅನುಸರಿಸಬೇಕಾದ ದಾರಿ ಸರಿಯಾಗಿರಬೇಕು ಅಷ್ಟೇ... ಹಾಗೆ ಭಯಸಿದ ಒಂದು ವಸ್ತು ನಮ್ಮದಾಯಿತು ಅಂತ ಅಷ್ಟಕ್ಕೆ ನಮ್ಮ ಭಯಕೆಗಳನ್ನು ಸೀಮಿತಗೊಳಿಸಿ ಅಲ್ಪ ತ್ರುಪ್ತರಾಗುವದರಲ್ಲೂ ಯಾವುದೇ ಅರ್ಥವಿಲ್ಲ.. ಆಸೆ ದುಃಖಕ್ಕೆ ಮೂಲ ಅಂತ ಬುದ್ದ ಹೇಳಿದ... ಆದರೆ ಆಸೆಯೇ ಏಳಿಗೆಗೆ, ಮನುಷ್ಯನ ಬೆಳವಣಿಗೆಗೆ, ಜಗದ ಸರ್ವಾಭಿಮುಖ ಅಭಿವೃದ್ಧಿಗೆ ಕಾರಣ ಅಂತ ನನ್ನ ಅನಿಸಿಕೆ... ನಿಮ್ಮ ಕಲಿಕೆಯ ದಿನಗಳ ಮನೋಭಾವ ಸಕತ್ ಇಷ್ಟವಾಯ್ತು... ಉತ್ತಮ ಬರಹ... ಇನ್ನೂ ಜಾಸ್ತಿ ಜಾಸ್ತಿ ನಿಮ್ಮ ಬರಹಗಳನ್ನು ನಾವು ಓದುವಂತಾಗಲಿ ಎನ್ನುವದು ನನ್ನ ಈ ಹೊತ್ತಿನ ಆಸೆ...!!

ಮನಸಿನ ಮಾತುಗಳು ಹೇಳಿದರು...

ದಿಲೀಪ್ ಅವರೇ,
ತುಂಬ ಧನ್ಯವಾದಗೆಳು,
ಓದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಕ್ಕೆ..
ಹೀಗೆ ಬರುತ್ತಿರಿ...
ಪ್ರೋತ್ಸಾಹಿಸಿರಿ..

Harisha - ಹರೀಶ ಹೇಳಿದರು...

ಭಜಗೋವಿಂದಮ್ ಸ್ತುತಿಯಲ್ಲಿ ಶ್ರೀ ಶಂಕರಾಚಾರ್ಯರು ಚೆನ್ನಾಗಿ ಹೇಳಿದ್ದಾರೆ:

अङ्गं गलितं पलितं मुण्डं
दशनविहीनं जातं तुण्डम् ।
वृध्दो याति गृहीत्वा दण्डं
तदपि न मुञ्चत्याशापिण्डम् ॥

ಅಂಗ ದುರ್ಬಲವಾಗುತ್ತದೆ, ಶರೀರ ಬಾಗುತ್ತದೆ, ಬಾಯಿ ಹಲ್ಲುಗಳಿಲ್ಲದಂತಾಗುತ್ತದೆ; ಮುದುಕನಾಗುತ್ತಾನೆ, ಕೋಲನ್ನು ಹಿಡಿದುಕೊಳ್ಳುತ್ತಾನೆ, ಆದರೂ ಕೂಡ ಆಸೆಯನ್ನು ಬಿಡುವುದಿಲ್ಲ.

दिनमपि रजनी सायं प्रातः
शिशिरवसन्तौ पुनरायातः ।
कालः क्रीडति गच्छत्यायुः
तदपि न मुञ्चत्याशावायुः ।।

ಹಗಲು-ಇರುಳು, ಸಂಜೆ-ಬೆಳಗು, ಶಿಶಿರ-ವಸಂತಗಳು ಮತ್ತೆ ಮತ್ತೆ ಬರುತ್ತವೆ; ಕಾಲ ಆಟವಾಡುತ್ತದೆ, ಆಯಸ್ಸು ಕಳೆದುಹೋಗುತ್ತದೆ; ಆದರೂ ಆಸೆ ಕುಗ್ಗುವುದಿಲ್ಲ.


ನಿಮ್ಮ ಈ ಲೇಖನ ಬಹಳ ಇಷ್ಟವಾಯಿತು. Everyone can relate this to his/her own life.

ಮನಸಿನ ಮಾತುಗಳು ಹೇಳಿದರು...

thankyou Harish..:):)

ವಿ.ರಾ.ಹೆ. ಹೇಳಿದರು...

hmm.. nija.. this is a nice writeup

ವಿ.ರಾ.ಹೆ. ಹೇಳಿದರು...

hmm.. nija.. this is a nice writeup