ಮಂಗಳವಾರ, ಜುಲೈ 28, 2009

ನಿನ್ನ ಬಿಂಬದಲ್ಲೇ...


ಏನೂ ಇಲ್ಲದಿರುವನ ನೋಡಿ ಜಗ ನಗುತ್ತದೆ,
ಇರುವವನ ನೋಡಿ ಜಗ ಉರಿದುಕೊಳ್ಳುತ್ತದೆ ,
ನನ್ನ ಬಳಿ ನಿನ್ನ ನೆನಪಿನ ಸಾಗರವೇ ಇದೆ ಗೆಳೆಯ,
ಅದನ್ನ ಪಡೆದುಕೊಳ್ಳುವುದಕ್ಕೆ ಜಗ ಅಳುತ್ತದೆ.
ನನ್ನ ಒಂಟಿತನದಲ್ಲಿ ನಿನ್ನ ನೆನಪಿಸಿಕೊಳ್ಳುತ್ತೇನೆ,
ಹೃದಯವೇ ಮುಳುಗಿದೆ ನಿನ್ನ ನೆನಪಿನ ಸಾಗರದಲ್ಲಿ,
ನನ್ನ ಹುಡುಕ ಬೇಡ ಗೆಳೆಯ ಜಗದ ಗುಂಪಿನಲ್ಲಿ,
ನಿನ್ನ ಬಿಂಬದಲ್ಲೇ ನಾನಿದ್ದೇನೆ.
ಪ್ರೀತಿಯಲ್ಲಿ ಖುಷಿಯೂ ಇದೆ,ದುಃ ಖವೂ ಇದೆ,
ನಗುತ್ತಾ ಸಾಗುವುದನ್ನು ಕಲಿತಿದ್ದೇನೆ ಪ್ರತಿ ಸಾರಿಯೂ,
ಬಹಳಷ್ಟು ಪಡೆದುಕೊಂಡಿದ್ದೇನೆ,ಕಳೆದುಕೊಂಡಿದ್ದೇನೆ,
ಆದರೆ ನಿನ್ನ ಪ್ರೀತಿಯನ್ನು ಕಳೆದುಕೊಳ್ಳುವ ಭಯವೇ ಇಲ್ಲ,
ಏಕೆಂದರೆ ನಿನ್ನ ಪ್ರೀತಿ ಎಂದು ನನ್ನದೇ ಹಕ್ಕು

17 ಕಾಮೆಂಟ್‌ಗಳು:

Unknown ಹೇಳಿದರು...

ಪವಿತ್ರ ನಂಬಿಕೆಯ ಮೇಲೆ ನಿಮ್ಮ ಪ್ರೀತಿ ನಿಂತ್ತಿದರೆ,
ಮತ್ತದೇ ರೂಪದಲಿ ಅಂತರಂಗದ ಗೆಳಯನ ಮನಸು, ಹತೊರೆಯುತಿದರೆ...
ನಿಮ್ಮ ಮನೆಯ ಹೊಸ್ತಿಲ ಮೇಲಿನ ದೀಪ ಅರಿಹೊಗುವಮುನ್ನ...
ಅವನು ಬರಲಿ...

nice write-up...

ಮನಸಿನ ಮಾತುಗಳು ಹೇಳಿದರು...

ವಿಜಯ್ ,
ನಿಮ್ಮ ಹಾರೈಕೆಗೆ ತುಂಬಾ ಧನ್ಯವಾದಗಳು .....

shivu.k ಹೇಳಿದರು...

ಪ್ರೀತಿಯ ಮೇಲೆ ಅದಂತೆ ನಂಬಿಕೆ ಅಲ್ವ...

ಅರ್ಥಪೂರ್ಣ ಕವನ....

ಧನ್ಯವಾದಗಳು.

ಬಿಡುವಾದಾಗ ನನ್ನ ಛಾಯಾಕನ್ನಡಿ ಬ್ಲಾಗಿಗೂ ಬನ್ನಿ...

ಸುಬ್ರಹ್ಮಣ್ಯ ಹೆಗಡೆ ಹೇಳಿದರು...

ಚೆನ್ನಾಗಿದೆ .......ಆ ನಿಮ್ಮ ಗೆಳೆಯ ಬೇಗ ಬರಲಿ........

ಮನಸಿನ ಮಾತುಗಳು ಹೇಳಿದರು...

tumba thanks...:):)

ಅನಾಮಧೇಯ ಹೇಳಿದರು...

ನಿಮ್ಮ ಬ್ಲಾಗ್ ಮನೋಹರವಾಗಿದೆ. ಚಿತ್ರಗಳು, ಕವಿತೆಗಳು ಸೇರಿ. ಮೊದಲ ಕವಿತೆ ಓದಿದೆ. ಉಳಿದದ್ದನ್ನು ಓದಬೇಕು. ಶುಭಾಶಯಗಳು...

ಕನಸು ಹೇಳಿದರು...

ಹಾಯ್ ರೀ
ನಿಮ್ಮ ಮುದ್ದು ಹೃದಯದಂತಾ ಕವಿತೆ
ಮೋಹಕವಾಗಿದೆ
ಧನ್ಯವಾದಗಳು
ನನ್ನ ಒಂಟಿತನ ನಿನ್ನ ನೆನೆಪಿಸಿಕೋಳ್ಳುತ್ತಿದೆ ಎನ್ನುವ
ಸಾಲುಗಳು ನಂಗೆ ಯಾಕೋ ತುಂಭಾ ಹಿಡಿಸಿದವು
ಬಿಡುವು ಮಾಡಿಕೊಂಡು ನನ್ನ ಕನಸಿಗೆ ಬನ್ನಿ..

ಮನಸಿನ ಮಾತುಗಳು ಹೇಳಿದರು...

Raghavendra and Kanasu ,
ibbarigu nanna blogige swagatha..:):)
heege vodutta protasaahisuttiri..
dhanyavaadagalu..:):)

Sudi ಹೇಳಿದರು...

ಇಂದು ಮಸಿನ ಮಾತುಗಳನ್ನ ಮೊದಲ ಬಾರಿ ನನ್ನ ಭೇಟಿ, ತುಂಬಾ ಚೆನ್ನಾಗಿ ಬರೆದಿದ್ದೀರ ಮನಸಿನ ಆಡದ ಮಾತುಗಳನ್ನು ..ಕೆಲವು ಮಾತುಗಳನ್ನು ಅರಿತೆ ಇನ್ನುಳಿದ ಮಾತುಗಳನ್ನು ಹಿಂಬಾಲಿಸುವೆ ..

-ಸುಧಿ

ಸವಿಗನಸು ಹೇಳಿದರು...

ಪ್ರೀತಿ ಮತ್ತು ನಂಬಿಕೆ ಎರಡನ್ನು ಚೆನ್ನಾಗಿ ಹೇಳುತ್ತೆ ನಿಮ್ಮ ಕವನ....ಅರ್ಥಪೂರ್ಣವಾಗಿದೆ....
"ನಿನ್ನ ಬಿಂಬದಲ್ಲೇ ನಾನಿದ್ದೇನೆ" ಸಾಲು ಇಷ್ಟವಾಯಿತು...

Amit Hegde ಹೇಳಿದರು...

ಅರ್ಥಗರ್ಭಿತ ಕವನ...! Keep up the good work...


http://eyeclickedit.blogspot.com/

ಮನಸಿನ ಮಾತುಗಳು ಹೇಳಿದರು...

Amit and Mahesh,hearty welcome to my blog...:):)
Thanks for the comments...
Sudhi thanks again..

ಜಲನಯನ ಹೇಳಿದರು...

ದಿವ್ಯಾ..ಪ್ರೀತಿಯ ಹಕ್ಕನ್ನು ಸಂಪಾದಿಸಿದವರಿಗೆ ಮತ್ತು ಆ ಕಡೆಯಿಂದ ಅಂತಹುದೇ ಸ್ಪಂದಿತ ಪ್ರತಿಸ್ಪಂದನೆ ಬಂದರೆ...ಆ ಪ್ರೀತಿಯನ್ನು ಕಲೆದುಕೊಳ್ಳೋಕೆ..ಸಾಧ್ಯವೇ ಇಲ್ಲ...
ಚನ್ನಾಗಿದೆ ಕವನ...ಬಹುಸೂಚ್ಯ ಮತ್ತು ಲೇಪಿತ ಪದ ಬಳಕೆಗೆ ಅಭಿನಂದನೆಗಳು

Unknown ಹೇಳಿದರು...

yenri tumba divsa ayitu hosa article yavudu bandeilla...

ಜಲನಯನ ಹೇಳಿದರು...

ನಿರೀಕ್ಷೆಯ ಮಿತಿ ಎಷ್ಟಿರಬಹುದೆಂದು ರಾಮಾಯಣ ಓದಿದವರಿಗೆ ತಿಳಿದದ್ದೇ, ಶಬರಿಗೆ ಬಹುಪರಾಕ್. ಇನ್ನೊಂದು ರೀತಿಯ ನಿರೀಕ್ಷೆಗೆ ಮಹಾಭಾರತದ ಅಂಬೆ ಉದಾಹರಣೆ, ಸೇಡು ತೀರಿಸಿಕೊಳ್ಳಲು ಅವಳು ಜನ್ಮಗಳೇ ಎತ್ತಿದಳು...ನಿಮ್ಮ ಇನಿಯನ್ನು ಸೇರುವ ನಿಮ್ಮ ನಿರೀಕ್ಷೆ ಹೂವು ಸುಮಧುರವಾಗಿರುವಾಗಲೇ ಕೈಗೂಡಲಿ. ಚನ್ನಾಗಿ ಬಣ್ಣಿಸಿದ್ದೀರಿ
ದಿವ್ಯಾ..ಮುಂದುವರೆಯಲಿ ನಂತರದ ಹೆಜ್ಜೆ.

Ittigecement ಹೇಳಿದರು...

ವಾಹ್....!!

ಪ್ರೀತಿ..ಪ್ರೇಮದ...
ನಂಬಿಕೆಕೆಯ ಸೊಗಸಾದ ಕವಿತೆ....

ಮಾಡಿದರೆ ಮಾಡ ಬೇಕು ಇಂಥಹ ಪ್ರೀತಿಯ...
ಇಟ್ಟರೆ ಇಡ ಬೇಕು ಇಂಥಹ ನಂಬಿಕೆಯ....

ಅಭಿನಂದನೆಗಳು....

ಮನಸಿನ ಮಾತುಗಳು ಹೇಳಿದರು...

Prakash sir and ಜಲನಯನ,
ಇಬ್ಬರಿಗೂ ನನ್ನ ಧನ್ಯವಾದಗಳು.
ವಿಜಯ್ ,
ಇತ್ತಿಚೆಗೆ ಕೆಲಸದ ವತ್ತಡದ ಮದ್ಯೆ ಮನಸ್ಸು ಬ್ಲ್ಯಾಂಕ್ ಆಗಿತ್ತು.
ಆದಷ್ಟು ಬೇಗ ಮತ್ತೊಂದು ಕವನ ದೊಂದಿಗೆ ನಿಮ್ಮೆಲ್ಲರ ಬಳಿ ಬರುತ್ತೇನೆ:):)
ದಿವ್ಯ.