ಸೋಮವಾರ, ಜುಲೈ 20, 2009

ಬಾಲ್ಯ ...

ಹಾಳೆಯ ದೋಣಿ ಇತ್ತು
ಮಳೆನೀರಿನ ಕಡಲಿತ್ತು
ಮನಸು ಪರಿಶುದ್ದವಿತ್ತು,
ಹೃದಯ ಹಗುರವಿತ್ತು.
ಅಮ್ಮನ ಕೈತುತ್ತು,
ಅಪ್ಪನ ಎದೆಗೊರಗಿ ನಿದ್ದೆ,
ತಂಗಿಯ ಜೊತೆಯ ಕಿತ್ತಾಟ
ಸುಮಧುರವಾಗಿತ್ತು.
ಮನೆ ಅಂಗಳದಲ್ಲಿ ಚಂದಿರನಿದ್ದ
ತಾರೆ ಗಳ ತೊಟ್ಟಿಲಿತ್ತು
ಚಿಕ್ಕ ವಿಷಯಗಳಿಗೆ ಹಠ ಮಾಡುತ್ತಾ ,
ನಲಿಯುವ ದಿನ
ಸುಂದರವಾಗಿತ್ತು.
ಒಂಟಿತನದ ಅನುಭೂತಿ ಇಲ್ಲದೇ,
ನಾಳೆ ಎಂಬ ಚಿಂತೆ ಇಲ್ಲದೇ,
ಜವಾಬ್ದಾರಿ ಇಲ್ಲದ ಜೀವನ ,
ಸುಖವಾಗಿತ್ತು.

21 ಕಾಮೆಂಟ್‌ಗಳು:

Dileep Hegde ಹೇಳಿದರು...

ದಿವ್ಯಾ...

ನಿಜಕ್ಕೂ ಆ ಬಾಲ್ಯವೇ ನೂರು ಪಾಲು better... ಮಳೆಯಲ್ಲಿ ಕಾಗದದ ದೋಣಿ... ಮನೆಯಂಗಳದಲ್ಲಿ ತಾರೆಗಳ ತೊಟ್ಟಿಲು... ನೆನಪಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್...! ಬರವಣಿಗೆ ಮುಂದುವರೆಯಲಿ...

ದಿಲೀಪ್

ಮನಸಿನ ಮಾತುಗಳು ಹೇಳಿದರು...

ತುಂಬಾ ಧನ್ಯವಾದ ದಿಲೀಪ್,
ಹೀಗೆ ಪ್ರೋತ್ಸಾಹಿಸುತ್ತಿರಿ....

Unknown ಹೇಳಿದರು...

once again a good one!

thanks for such a nice article

ಮನಸಿನ ಮಾತುಗಳು ಹೇಳಿದರು...

thanks a lot Vijay...:):)

ಗಿರಿ ಹೇಳಿದರು...

ನಮಸ್ಕಾರ ದಿವ್ಯಾ,

ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲ ಭೇಟಿ...
ಹಳೆಯ ನೆನಪುಗಳನ್ನು ಮೊಗೆದು ಅವುಗಳೇ ಚಂದವೆನ್ನುವ ಪರಿ ಇಷ್ಟ ಆಯ್ತು...
"ಅಮ್ಮನ ಕೈತುತ್ತು,
ಅಪ್ಪನ ಎದೆಗೊರಗಿ ನಿದ್ದೆ,
ತಂಗಿಯ ಜೊತೆಯ ಕಿತ್ತಾಟ"

ವಾವ್... ಸುಂದರವಾಗ ಸಾಲುಗಳು...

ಆ ಕೈತುತ್ತು, ಮಳೆ, ನಿರಾಳವಾದ ನಿದ್ದೆ, ಪ್ರೀತಿಯಿಂದ ಕಿತ್ತಾಟ, ದೋಣಿ, ಹಗುರವಾದ ಮನಸು, ... ಹೀಗೆ ಎಲ್ಲವನ್ನು ನೆನಪಿಸಿದ್ದಕ್ಕೆ
ಧನ್ಯವಾದಗಳು,
-ಗಿರಿ

ಜಲನಯನ ಹೇಳಿದರು...

ದಿವ್ಯಾ, ಬಲು ಭವ್ಯ ...ಈ ನಿಮ್ಮ ಆಡದ ಮಾತು...ಆದರೆ ಭಾವನಾಂತರಾಳದಿಂದ ಬಾಲ್ಯವನ್ನು ಹೆಕ್ಕಿ ತೆಗೆದ ಪರಿ..
ಬೆಳೆದಂತೆ ಬಾಲ್ಯ ಬೆಳೆವುದು ಬಾಲ
ನಮ್ಮ ಹಿಂದೆ ತಂಗಿ ತಮ್ಮಂದಿರ ಗೋಲ
ಅಗ್ರಜನ ಜವಾಬ್ದಾರಿಯ ಜಾಲ
ಅಲ್ಲವೇ..?? ಚನ್ನಾಗಿ ಬರೆದಿರಿ..ಬರೆಯುತ್ತಿರಿ, ಹಾಂ... ನನ್ನ ಬ್ಲಾಗಿಗೆ ಹಾಗೇ..ಬಂದಿರಿ..ನಿಮ್ಮ ಪ್ರತಿಕ್ರಿಯೆಗೆ ಕಾಯಲೇ...???

ಸುಬ್ರಹ್ಮಣ್ಯ ಹೆಗಡೆ ಹೇಳಿದರು...

tumba chennagide.....

Roopa ಹೇಳಿದರು...

ಒಂಟಿತನದ ಅನುಭೂತಿ ಇಲ್ಲದೇ,
ನಾಳೆ ಎಂಬ ಚಿಂತೆ ಇಲ್ಲದೇ,
ಜವಾಬ್ದಾರಿ ಇಲ್ಲದ ಜೀವನ ,


vaah very nice!!

ಮನಸಿನ ಮಾತುಗಳು ಹೇಳಿದರು...

ಎಲ್ಲರಿಗೂ ನನ್ನ ಧನ್ಯವಾದಗಳು...
ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತಾ ,
ದಿವ್ಯ

shivu.k ಹೇಳಿದರು...

ದಿವ್ಯ ಮೇಡಮ್,

ಬಾಲ್ಯದ ಕವನ ತುಂಬಾ ಚೆನ್ನಾಗಿದೆ. ಬಾಲ್ಯದ ಜೀವನವೇ ಹಾಗಲ್ಲವೇ...ಪ್ರತಿಯೊಂದು ಸಾಲುಗಳು ಕಣ್ಣಮುಂದೆ ಚಿತ್ರಗಳನ್ನು ಕಟ್ಟಿಕೊಟ್ಟು ಭಾವನೆಗಳಲ್ಲಿ ತೇಲುವಂತೆ ಮಾಡುತ್ತವೆ...

ಬಿಡುವಾದಾಗ ನನ್ನ ಬ್ಲಾಗಿನ ಕಡೆಗೆ ಬನ್ನಿ...

Arun ಹೇಳಿದರು...

Super.... idu nan 1st visit nin blog ge.... keep it up.....

Arun ಹೇಳಿದರು...

Nice one

ಮನಸಿನ ಮಾತುಗಳು ಹೇಳಿದರು...

Hi Arun,
welcome to my blog...
thnks for the comments...keep encouraging me..thanku..:):)

ಜಲನಯನ ಹೇಳಿದರು...

ದಿವ್ಯಾ ಬಲು-ಲಗೂ ಬಂದ್ರಿ ನನ್ನ ಬ್ಲಾಗ್ಗೆ ಹಾಗೇ ಎರಡು ಪ್ರೋತ್ಸಾಹದ ಸಿಹಿನುಡಿ (ಹೊಗಳಿಕೆ ದೇವರೇ ಹಿಗ್ಗುತ್ತಾರಂತೆ, ಚಕ್ರವರ್ತಿಗಳೇ ಬಗ್ಗುತ್ತಿದ್ದರಂತೆ...ನಾನು ಹುಲುಮಾನವ...ಹಹಹಹ) ಹೇಳಿದಂತೆ ಬರೆದಿರಿ...ಥ್ಯಾಂಕ್ಯೂ ಎನ್ನಲೇ...?? ThankU

ಅಂತರ್ವಾಣಿ ಹೇಳಿದರು...

ದಿವ್ಯ ಅವರೆ,
ನಿಮ್ಮ ಕವನ ಚೆನ್ನಾಗಿದೆ. ಬಾಲ್ಯದ ಬಗ್ಗೆ ಬರೆಯದವರಿಲ್ಲ ಅನಿಸುತ್ತೆ.

ಬಿಡುವಿನ ಸಮಯದಲ್ಲಿ ನನ್ನ ಬ್ಲಾಗು ಓದಿ.

ಜಿ.ಎಸ್.ಬಿ. ಅಗ್ನಿಹೋತ್ರಿ ಹೇಳಿದರು...

ella nenapu maatra...

ಮನಸಿನ ಮಾತುಗಳು ಹೇಳಿದರು...

ellarigu nanna dhanyavaadagalu...:):)
nimmellara protsaha heege irali..

ಗೌತಮ್ ಹೆಗಡೆ ಹೇಳಿದರು...

baalyavanna chennagi kavanadalli toarisiddiri.

ಮನಸಿನ ಮಾತುಗಳು ಹೇಳಿದರು...

ನನ್ನ ಬ್ಲೋಗಿಗೆ ಸ್ವಾಗತ,
ಕಾಮೆಂಟ್ಸ್ ಗೆ ತುಂಬಾ ಧನ್ಯವಾದಗಳು ಗೌತಮ್ ..:)

DEV ಹೇಳಿದರು...

Very well written.. nice :)

DEV ಹೇಳಿದರು...

Very well written.. nice :)