ಭಾನುವಾರ, ಜುಲೈ 19, 2009

ನೀನ್ ಇಲ್ಲದ ದಿನ.....

ನೀನ್ ಇಲ್ಲದ ದಿನ,
ಸೂರ್ಯನ ಬೆಳಕಿಲ್ಲದ ಕಾರ್ಮೋಡದಂತೆ ,
ಮೇಘ ಗಳಿಲ್ಲದ ತಂಗಾಳಿಯಂತೆ ,
ಎರಡೂ ಬದಿ ಇಂದ ಉರಿಯುವ ಮೇಣದಂತೆ
ಎಷ್ಟೋ ವರ್ಷಗಳಿಂದ ಮಳೆ ಕಾಣದ ಮರಳುಗಾಡಿನಂತೆ ,
ಶಿಕ್ಷಕರಿಲ್ಲದ ಶಾಲೆಯಂತೆ,
ರಾಗವಿಲ್ಲದ ಹಾಡಿನಂತೆ,
ಪೂಜಾರಿ ಇಲ್ಲದ ಗುಡಿಯಂತೆ,
ಅಕ್ಷರಗಳಿಲ್ಲದ ಪುಸ್ತಕದಂತೆ.
ಕೆಂಪು ಗುಲಾಬಿಯೂ ಬಿಳಿಯಾಗಿ ಕಂಡಿದೆ,.
ಸಾರವಿಲ್ಲದ ಊಟದಂತೆ,
ಬೆಳದಿಂಗಳಿಲ್ಲದ ರಾತ್ರಿಯಂತೆ,
ಸಿಹಿ ಇಲ್ಲದ ಜೇನಿನಂತೆ ,
ಹಾರಲು ಬಾರದ ಹಕ್ಕಿಯಂತೆ,
ಅಳುತ್ತಿರುವ ಕಂದಮ್ಮನಂತೆ,
ಬಣ್ಣವಿಲ್ಲದ ಚಿತ್ರದಂತೆ,
ದಾರವಿಲ್ಲದ ಗಾಳಿಪಟದಂತೆ ,
ನೀರಿನಿಂದ ಹೊರ ಬಿದ್ದ ಮೀನಿನಂತೆ,
ನೀನ್ ಇಲ್ಲದ ದಿನ ದಿನವೇ ಅಲ್ಲ ಗೆಳೆಯ,
ನೀನು ಯಾವಾಗಲು ನನ್ನ ಜೊತೆಯೇ
ಇರಬೇಕೆಂದು ನನ್ನ ಇಷ್ಟ,
ನನ್ನಿಂದ ದೂರ ಹೋಗಬೇಡ ,
“ಏಕೆಂದರೆ ನೀನಿಲ್ಲದ ದಿನ ,
ದಿನವೇ ಅಲ್ಲ…ಅದು ಬರೀ ಅರ್ಥಹೀನ.

4 ಕಾಮೆಂಟ್‌ಗಳು:

shivu.k ಹೇಳಿದರು...

ದಿವ್ಯ ಮೇಡಮ್,

ನೀನಿಲ್ಲದ ದಿನ ಎನ್ನುವ ಭಾವನೆಯೊಂದೇ ಎಷ್ಟೋಂದು ಇಲ್ಲಗಳನ್ನು ಮನಸ್ಸಿನಲ್ಲಿ ಸೃಷ್ಟಿಸುತ್ತೆ ಅಲ್ವಾ...

ಕವನ ತುಂಬಾ ಚೆನ್ನಾಗಿದೆ....

ಧನ್ಯವಾದಗಳು.

ಮನಸಿನ ಮಾತುಗಳು ಹೇಳಿದರು...

ಶಿವುಅವರೇ ,
ನನ್ನ ಬ್ಲಾಗಿಗೆ ಸ್ವಾಗತ ...:):)
ನಿಮ್ಮ ಕಾಮೆಂಟ್ ನೋಡಿ ಸಂತಸವಾಯಿತು...
ಹೀಗೆ ಪ್ರೋತ್ಸಾಹಿಸುತ್ತಿರಿ ...
ದಿವ್ಯ

Sudi ಹೇಳಿದರು...

beautiful comparison "ನೀನಿಲ್ಲದ ದಿನ" wa wa nice one..

ಮನಸಿನ ಮಾತುಗಳು ಹೇಳಿದರು...

Thanks Sudi...:):):)