ಬುಧವಾರ, ಜುಲೈ 15, 2009

ಆಗಸವನ್ನು ಚುಂಬಿಸುತ್ತದೆ.....

ಎತ್ತರಕ್ಕೆ ಹಾರುವ ಹದ್ದಿನ ರೆಕ್ಕೆಯಲ್ಲಿ,
ನನ್ನ ಪ್ರೀತಿ ನಿನಗಾಗಿ ಹಾರುತ್ತದೆ.
ಎತ್ತರಕ್ಕೆ,ಮುಗಿಲೆತ್ತರಕ್ಕೆ ಹಾರಿ,
ಆಗಸವನ್ನು ಚುಂಬಿಸುತ್ತದೆ.

ಆ ಎತ್ತರಕ್ಕೆ ಏರಿ ನಾನು,
ಒಂದು ನಕ್ಷತ್ರವನ್ನು ಕಿತ್ತು ತಂದೆ.
ನಿನ್ನ ಮನದ ಕಣ್ಣುಗಳಲ್ಲಿ ಅದನ್ನ
ಪ್ರೀತಿ ಇಂದ ಬಚ್ಹಿ ಇಡಲು.

ಅದಲ್ಲಿ ಶಾಶ್ವತವಾಗಿ ಇರಬೇಕು,
ನನಗೆ ನಿನ್ನ ಮೇಲೆ ಇರುವ ಪ್ರೀತಿಯ ಹಾಗೆ.
ನಮ್ಮ ಪ್ರೀತಿಯ ರೆಕ್ಕೆಯ ಮೇಲೆ,
ಹಾರುತ್ತ ,ಹೊಳೆಯುತ್ತಾ,ಪ್ರಜ್ವಲಿಸುತ್ತಿರಬೇಕು.


ಅದೆಷ್ಟೋ ವಿಷಯ ನನ್ನ ಹೃದಯ
ನಿನಗೆ ಹೇಳಬಯಸುತ್ತದೆ.
ನಾನು ನಿನ್ನ ಪ್ರೀತಿಸುತ್ತೇನೆ,
ಆಗಸದಷ್ಟು ಪ್ರೀತಿಸುತ್ತೇನೆ.

10 ಕಾಮೆಂಟ್‌ಗಳು:

Unknown ಹೇಳಿದರು...

ಸರಳ ವಾಕ್ಯಗಳ ಸುಂದರ ಜೋಡಣೆ ... POEM is quite impressing my friend...

ಮನಸಿನ ಮಾತುಗಳು ಹೇಳಿದರು...

thanks Vijay for ur valuble comments...
pls keep redn nd encrn me...
:):)

ಜಿ.ಎಸ್.ಬಿ. ಅಗ್ನಿಹೋತ್ರಿ ಹೇಳಿದರು...

ಆಗಸದಷ್ಟು ಪ್ರೀತಿಸುತ್ತೇನೆ....ಯಾಕೆ ಸಾಗರದಸ್ಟು ಪ್ರೀತಿಸಬಾರದೇಕೆ?
ತುಬಾ ಚೆನ್ನಾಗಿದೆ. ಅರ್ಥಗರ್ಭಿತವಾಗಿ ಹೆಣೆದಿದ್ದೀರಿ. ಜತೆಗೆ ನಿಮ್ಮ ಇನ್ನಸ್ಟು ಬರಹಗಳನ್ನೂ ಓದಿದೆ.... ಫೈನ್.

ಮನಸಿನ ಮಾತುಗಳು ಹೇಳಿದರು...

ಅಗ್ನಿಹೋತ್ರಿಅವರೇ ,
ನನ್ನ ಬ್ಲೋಗಿಗೆ ಸ್ವಾಗತ .....
ತುಂಬಾ ಧನ್ಯವಾದಗಳು.ನಿಮ್ಮ ಕಾಮೆಂಟ್ ನೋಡಿ ಸಂತೋಷವಾಯಿತು. ಹೀಗೆ ಪ್ರೂತ್ಸಾಹಿಸುತ್ತೀರಿ.
ದಿವ್ಯಾ ..

Ittigecement ಹೇಳಿದರು...

ಪ್ರೇಮ ಭಾವದ.. ಕವನ ತುಂಬಾ ಚೆನ್ನಾಗಿದೆ...

ನಿಮ್ಮ ಬ್ಲಾಗ್ ಇಷ್ಟವಾಯಿತು...

ಅಭಿನಂದನೆಗಳು...

ಮನಸಿನ ಮಾತುಗಳು ಹೇಳಿದರು...

ಪ್ರಕಾಶ್ ಅವರೇ ,
ನನ್ನ ಬ್ಲೋಗಿಗೆ ಸ್ವಾಗತ .....:):)
ತುಂಬಾ ಧನ್ಯವಾದಗಳು ..
ಕಾಮೆಂಟ್ ಮಾಡಿದ್ದು ನನಗೆ ಸಂತಸವಾಯಿತು ..
ಹೀಗೆ ಓದುತ್ತ ಪ್ರೋತ್ಸಾಹಿಸುತ್ತಿರಿ..
ದಿವ್ಯಾ

shivu.k ಹೇಳಿದರು...

ದಿವ್ಯಾ ಮೇಡಮ್,

ಪ್ರೇಮವನ್ನು ವ್ಯಕ್ತಪಡಿಸುವ ಕವನ ಚೆನ್ನಾಗಿದೆ. ಮತ್ತು ನಿಮ್ಮ ಬ್ಲಾಗ್ ವಿನ್ಯಾಸವೂ ಚೆನ್ನಾಗಿದೆ....ಇನ್ನಷ್ಟು ಬರೆಯಿರಿ..

ಮನಸಿನ ಮಾತುಗಳು ಹೇಳಿದರು...

ಶಿವುಅವರೇ ,
ನಿಮ್ಮ ಕಾಮೆಂಟ್ ನೋಡಿ ಸಂತಸವಾಯಿತು...
ಅದರಲ್ಲೂ ನನ್ನ ಬ್ಲಾಗಿನ ವಿನ್ಯಾಸದ ಬಗ್ಗೆ ಹೇಳಿದ್ದು ತುಂಬ ಸಂತೋಷ ...ನಿಮಗಿರುವ 'eye for detail' ಇಷ್ಟ ಆಯ್ತು ..
ಹೀಗೆ ಪ್ರೋತ್ಸಾಹಿಸುತ್ತಿರಿ ...
ದಿವ್ಯ

ಸುಬ್ರಹ್ಮಣ್ಯ ಹೆಗಡೆ ಹೇಳಿದರು...

nice one.....

ಮನಸಿನ ಮಾತುಗಳು ಹೇಳಿದರು...

ಎಲ್ಲರಿಗೂ ನನ್ನ ಧನ್ಯವಾದಗಳು...
ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತಾ ,
ದಿವ್ಯ