ಬುಧವಾರ, ಜುಲೈ 15, 2009

ಮನ ನೋಯಿಸಿದ್ದಕ್ಕೆ ಕ್ಷಮೆ ಇರಲಿ.....

ಪ್ರೀತಿ ಕೋರಿದ ಪ್ರೀತಿಯ ಗೆಳೆಯನಿಗೆ ,

ಆಗೆಲ್ಲ ನೀನು ನನ್ನಲ್ಲಿ ಪ್ರೀತಿ ಕೋರಿದಾಗ ನನಗೆ ಅರ್ಥವೇ ಆಗುತ್ತಿರಲಿಲ್ಲ. ಇವನಿಗೆ ಏನು ಹುಚ್ಚುನಾನು ಇಷ್ಟ ಇಲ್ಲ ಎಂದರೂ ನನ್ನ ಹಿಂದೆ ಹಿಂದೆ ಬರುತ್ತಾನೆ. ಎಲ್ಲಿ
ಹೋದರೂ ನನ್ನ ಹಿಂದೆ ಹಿಂದೆಸುಳಿಯುತ್ತಾನೆ. ಇವನಿಗೇನು ಮಾಡಲು ಬೇರೆ ಕೆಲಸ ಇಲ್ವಾ?
ನೀನು ಪ್ರತಿ ಸಾರಿಯೂ ಹೇಳುತ್ತಿದ್ದೆ "ನಾನು ನಿನ್ನ ತುಂಬ ಇಷ್ಟ ಪಡ್ತೀನಿ ಕಣೆ . ರಿಯಲಿ
ಲವ್ ಯುಅಂತೆಲ್ಲ ಹೇಳುತ್ತಿದ್ದಾಗ i used to feel very funny". ನಿನ್ನ ಬಗ್ಗೆ ಗೆಳತಿಯರ ಹತ್ತಿರವೆಲ್ಲ ಹೇಳಿನಕ್ಕು ಬಿಡುತ್ತಿದ್ದೆ .ಆದರೆ ನನಗೆ ಯಾವತ್ತೂ ನಿನ್ನ ಪ್ರೀತಿಸಬೇಕು,ನೀನು ನನ್ನ ಅಷ್ಟೊಂದುಪ್ರೀತಿಸುತ್ತಿದ್ದಿಯ ಎನ್ನುವ ಭಾವನೆಯೇ ಬರಲಿಲ್ಲ . ಆಗೆಲ್ಲ ನನಗೆ ಯಾರನ್ನೋ ಪ್ರೀತಿಸಬೇಕು ,ಅಥವಪ್ರೀತಿಯಲ್ಲಿ ಇಷ್ಟೊಂದು ನೋವು ಇರುತ್ತೆ ಎನ್ನುವುದು ತಿಳಿಯಲೇ ಇಲ್ಲ .
ದಿನ ನೀನು ಅದೆಷ್ಟು ಪ್ರೀತಿ ಇಂದ ನನಗೆಂದು ಒಂದು '
teddy bear' ಇರುವ ಕೀ ಚೈನ್ ತಂದೆ.ಆದರೆ ನಾನು ಅದನ್ನು ತೆಗೆದುಕೊಳ್ಳದಿದ್ದಾಗ ನಿನ್ನ ಮನಸ್ಸಿಗಾದ ನೋವು ಎಷ್ಟಿರಬಹುದು ಎಂದು ನಾ ಊಹಿಸಬಲ್ಲೆ. ಏಕೆಂದರೆ ಈಗ ನನಗೂ ಪ್ರೀತಿಯಲ್ಲಿರುವನೋವು ಎಷ್ಟು ಎಂಬುದರ ಅರಿವಾಗಿದೆ .ಬಹುಷಃ ನಿನ್ನ ಮನಸನ್ನು ಅಷ್ಟು ನೋಯಿಸಿದ ಕಾರಣವೇ ಏನೋ ಇಂದು ನನಗೂ ಅದೇರೀತಿ ನೋವಾಗುತ್ತಿದೆ .ಅದೇ ಹೇಳುತ್ತಾರಲ್ಲ ಏನೇ ಇದ್ದರು ನಮಗೆ ಆದರೇನೆ ಅದರ ನೋವು ತಿಳಿಯುವುದು ಎಂದು ಹಾಗೆ ಆಗಿಹೋಯಿತು ಗೆಳೆಯ . ನನ್ನ ಪ್ರೀತಿ ನನ್ನ ಬಿಟ್ಟು ದೂರ ಹೊರಟು ಹೋಯಿತು .
ಈಗ ನಿನಗೆ ಆದಕ್ಕಿಂತ ಹೆಚ್ಚಿನ ನೋವು ನನಗಾಗಿದೆ .ಕಾರಣ - ನಿನ್ನದಾದರೆ ಬರೀ "
one- way" .ನಾನೆಂದೂ ನಿನಗೆ ಹ್ಞೂ ಹೇಳಿಆಮೇಲೆ ಕೈ ಕೊಡಲಿಲ್ಲ .ಆದರೆ ನನಗೆ ಹಾಗಾಗಲಿಲ್ಲ .ಜೀವನದಲ್ಲಿ ಮೊದಲನೇ ಭಾರಿ ಯಾರನ್ನು ಇಷ್ಟ ಪಡದಷ್ಟು ಒಬ್ಬನ್ನ ಇಷ್ಟ ಪಟ್ಟೆ.ಆದರೆ ಈಗ ಅವ ನನ್ನ ಬಳಿ ಇಲ್ಲ .ನನ್ನ ಪಾಲಿಗೆ ಅವನ ನೆನಪುಗಳು ಮಾತ್ರ .ಹಾಗಾಗಿ ನಿನಗಿಂತ ನನಗೇ ಜಾಸ್ತಿ ನೋವಾಗಿದೆಎಂಬ ಮಾತನ್ನು ನೀನು ತಕರಾರಿಲ್ಲದೆ ಒಪ್ಪಿಕೊಳ್ಳುತ್ತೀಯ ಎಂದು ಕೊಳ್ಳುತ್ತೇನೆ .
ಇದೆಲ್ಲ ಕಳೆದು ಸುಮಾರು 6 - 7 ವರ್ಷಗಳಾಗಿರಬಹುದು. ನೀನು ಎಂದೋ ನನ್ನನ್ನು ಮರೆತು ಹಾಯಾಗಿರುತ್ತೀಯಎಂದುಕೊಂಡಿದ್ದೆ .ಆದರೆ ಮೊನ್ನೆ ನನ್ನ ಒಬ್ಬ ಹಳೆಯ ಸ್ನೇಹಿತೆ ಇಂದ ತಿಳಿಯಿತು, ನೀನು ಇನ್ನೂ ನನ್ನನ್ನೇ ಪ್ರೀತಿಸುತ್ತಿದ್ದೀಯ ಎಂದುನನಗೆ ಅದನ್ನು ಕೇಳಿ ಮನಸ್ಸಿಗೆ ಒನ್ ತರಹದ ನೋವಾಯಿತು .ಏಕೆಂದರೆ ನಾನು .ಎಂದೂ ನಿನ್ನ ಪ್ರೀತಿಸಲಾರೆ .ಬೇಡ ಗೆಳೆಯ ನನ್ನಪ್ರೀತಿಸಬೇಡ .ನೀನು ನನಗೆ ಜೀವನದಲ್ಲಿ ಒಳ್ಳೆ ಗೆಳೆಯ ಅಷ್ಟೆ .ನನಗೆ ನೀನು ಇಷ್ಟ . ಆದರೆ ಬರೀ ಒಳ್ಳೆ ಸ್ನೇಹಿತನಾಗಿ ಮಾತ್ರ . ನಿನ್ನಮನಸ್ಸಿಗೆ ನೋವಾಗುತ್ತದೆ ಅದು ನನಗೂ ಗೊತ್ತು .ಆದರೆ ನಾ ಏನೂ ಮಾಡಲಾರೆ .
ನಿನ್ನ
ಎಂದೂ ಪ್ರೀತಿಸಲಾರೆ . ನನ್ನನ್ನು ಕ್ಷಮಿಸಿ ಬಿಡು ಗೆಳೆಯ .ನೀನು ಎಲ್ಲೇ ಇರು ನನ್ನ 'best wishes' ಯಾವಾಗಲೂ ನಿನಗೆ ಇದ್ದೆಇರುತ್ತದೆ .ಆದರೆ ಪ್ರೀತಿ ಮಾತ್ರ ಮಾಡಲಾರೆ .
ಮನ ನೋಯಿಸಿದ್ದಕ್ಕೆ
ಕ್ಷಮೆ ಇರಲಿ.

ಇಂತಿ ನಿನ್ನ ಪ್ರೀತಿ
ಒಪ್ಪಿಕೊಳ್ಳಲಾಗದ,
ನಿನ್ನ ಗೆಳತಿ .7 ಕಾಮೆಂಟ್‌ಗಳು:

Unknown ಹೇಳಿದರು...

hello,

its really very nice article friend... and its true that we come to know the pain of MISSING only when we miss them

ಮನಸಿನ ಮಾತುಗಳು ಹೇಳಿದರು...

hi..
welcome to ma blog...
thanks for ur vluble comments...:)
keep reading nd encouragin me....:):)

jithendra hindumane ಹೇಳಿದರು...

ಪ್ರಿಯ ದಿವ್ಯಾ, ನಿಮ್ಮ ಬರಹ ಓದಿದೆ..... ನಾವು ಹೇಳಲಾಗದೆ ಮುಚ್ಚಿಟ್ಟರುವುದನ್ನು ತುಂಬಾ ಸೊಗಸಾಗಿ ವ್ಯಕ್ತಗೊಳಿಸದ್ದೀರಿ. ಧನ್ಯವಾದಗಳು. ಬಿಡುವಾದಾಗ ನನ್ನ ಬ್ಲಾಗ್ಗೆ ಭೇಟಿ ಕೊಡಿ.

ಮನಸಿನ ಮಾತುಗಳು ಹೇಳಿದರು...

Hi Jithendra,
welcome to my blog...
thanks for the comments..
heege protsaahisuttiri..
Divya

Pradeep ಹೇಳಿದರು...

Really nice one.....keep the articles/blogs flowing.

Navilugari ಹೇಳಿದರು...

channaagide manasina maatu..:D

idu kalpaneno athavaaaaaaaaaaa hehehehehhee

nimma
somu

Ramya ಹೇಳಿದರು...

Nanna jeevandali agirodhe nenapagthide :(