ಭಾನುವಾರ, ಜುಲೈ 12, 2009

ನನಗೊಂದಿಷ್ಟು ಬೆಳಕು ...

ನನಗೊಂದಿಷ್ಟು ಬೆಳಕು ಬೇಕು ,
ನನ್ನೊಳಗಿನ ಕತ್ತಲೆಯನ್ನು ಓಡಿಸುವುದಕ್ಕೆ ,
ನನಗೊಂದಿಷ್ಟು ಕತ್ತಲೆ ಬೇಕು
ಅವನ ನೆನಪುಗಳನ್ನು ಮರೆಯುವುದಕ್ಕೆ.
ನನಗೊಂದಿಷ್ಟು ಸಂತೋಷ ಬೇಕು,
ನನ್ನೊಳಗಿನ ದುಃಖವನ್ನು ಮರೆಯುವುದಕ್ಕೆ.
ನನಗೊಂದಿಷ್ಟು ಸಮಯ ಬೇಕು,
ನನ್ನೊಂದಿಗೆ ನಾನು ಕಾಲ ಕಳೆಯುವುದಕ್ಕೆ.
ನನಗೊಂದಿಷ್ಟು ಶಕ್ತಿ ಬೇಕು
ನಾನು ನಾನಾಗಿ ಬದುಕುವುದಕ್ಕೆ.

3 ಕಾಮೆಂಟ್‌ಗಳು:

Ranjita ಹೇಳಿದರು...

ಹಾಯ್ ದಿವ್ಯಾ .. ಅರ್ಥಪೂರ್ಣವಾದ ಈ ನಿಮ್ಮ ಕವನ ತುಂಬಾ ಇಸ್ಟವಾಯ್ತು .... Keep up the good work ..Good luck

Ranjita ಹೇಳಿದರು...

ಹಾಯ್ ದಿವ್ಯಾ .... ಅರ್ಥಪೂರ್ಣವಾದ ಈ ನಿಮ್ಮ ಕವನ ತುಂಬಾ ಇಸ್ಟವಾಯ್ತು ... Keep up the Good work ..Good luck

ಮನಸಿನ ಮಾತುಗಳು ಹೇಳಿದರು...

heಲ್ಲೋ Ranjita
hearty welcome to my blog ...
nimma comment nange santasa tandide..
heege protsaahisuttiri..
divya