ಬುಧವಾರ, ಜುಲೈ 08, 2009

ಆ ವೃದ್ಧೆಯ ಮುಖ ....


ಆ ದಿನ ನಾನು ಬಸ್ ನಲ್ಲಿ ಹೋಗುತ್ತಿದ್ದೆ .
ನಿಮಗೆಲ್ಲರಿಗೂ ಈ ಬೆಂಗಳೂರು ಮಹಾನಗರಿಯಲ್ಲಿನ ಟ್ರಾಫಿಕ್ ಜಾಮ್ ತೊಂದರೆಗಳ ಬಗ್ಗೆ ಗೊತ್ತೇ ಇದೆ .
ಎಲ್ಲಿ ನೋಡಿದರೂ ಟ್ರಾಫಿಕ್ .ಅರ್ಧ ಘಂಟೆಗಳಲ್ಲಿ ತಲುಪಬಹುದಾದ ಸ್ಥಳಗಳನ್ನ ಒಂದು ಗಂಟೆಯಾದರೂ ತಲುಪಲು ಆಗುವುದಿಲ್ಲ . ಎಲ್ಲಿ ನೋಡಿದರೂ ಧೂಳು ,ಪ್ರಧುಷಣೆ .ಮಳೆಗಾಳದಲ್ಲಂತೂ ಬಿಡಿ ಮಾತಾಡುವ ಹಾಗೆ ಇಲ್ಲ .

ಹಾಂ !! ನಾನು ಈ ಟ್ರಾಫಿಕ್ ಬಗ್ಗೆ ಏಕೆ ಹೇಳುತ್ತಿದ್ದೀನಿ ಎಂದರೆ ಮೊನ್ನ ಆದ ಒಂದು ಘಟನೆ ಇನ್ನೂ ಮನಸ್ಸಿನಲ್ಲಿ ಹಾಗೆ ಇದೆ .ಘಟನೆ ಅನ್ನುವುದಕ್ಕಿಂತ ಸನ್ನಿವೇಶ ಎಂದರೆ ಇನ್ನೂ ಸೂಕ್ತವಾಗಿರುತ್ತದೆ .ಬಸ್ ಹಾಗೆ ಹೋಗುತ್ತಿದ್ದಂತೆ ದಾರಿಯ ಮದ್ಯದಲ್ಲ್ಲಿ ಟ್ರಾಫಿಕ್ ಜಾಮ್ ಎಂದು ಸ್ವಲ್ಪ ಕಾಲ ನಿಲ್ಲಿಸಿದರು .ಸುಮ್ನೆ ಹಾಗೆ ಕಿಟಕಿಯಾಚೆ ನೋಡಿದಾಗ ನನ್ನ ಕಣ್ಣಿಗೆ ಕಂಡಳು ಒಂದು ಮುದುಕಿ .ಸುಮಾರು ಒಂದು 80-81 ರ ಆಸುಪಾಸಿರ ಬೇಕು ಅಕೆಗೆ .ಯಾವುದೊ ಹಳೆಯ ಸೀರೆ ಉಟ್ಟು ಕೊಂಡಿದ್ದರು ,ಕೈಯಲ್ಲಿ ಊರುಗೋಲು ಇಟ್ಟು ಕೊಂಡಿದ್ದರು . ರಸ್ತೆ ದಾಟಲು ಪ್ರಯತ್ನಿಸುತ್ತಿದ್ದರು .ಎತ್ತ ಹೋಗಬೇಕು ಎಂದು ತೋಚದೆ ಆ ವೃದ್ಧೆ ಪೇ ಚಾಡುತ್ತಿದ್ದರು. ಯಾರಾದರೂ ಬಂದು ತನಗೆ ಸಹಾಯ ಮಾಡಬಾರದೇ ಎನ್ನುವಂತಿತ್ತು ಆ ವೃದ್ಧೆಯ ಮುಖ .ಅಸಹಾಯಕತೆಯ ನೋಟ ಅದು .ಎಲ್ಲ ವಾಹನ ಚಾಲಕರಿಗೂ ರಸ್ತೆ ದಾಟುವ ಆತುರ .ಯಾರೊಬ್ಬರು ಆ ವೃದ್ಧೆ ಗೆ ಹೋಗಲು ಅನುವು ಮಾಡಿ ಕೊಡುತ್ತಿಲ್ಲ . ಆಕೆ ನಿಂತಲ್ಲೇ ನಿಂತು ಬಿಟ್ಟರು .ನನಗೋ ಕೆಳಗಿಳಿದು ಅವರನ್ನು ರಸ್ತೆ ದಾಟಿಸೋಣ ಎನಿಸಿತು .ಆದರೆ ಎಲ್ಲೋ ಹೋಗುವ ಅವಸರದಲ್ಲಿದ್ದ ಕಾರಣ ಬಸ್ನಿಂದ ಇಳಿಯಲೇ ಇಲ್ಲ .ನೋಡನೋಡುತ್ತಿದ್ದಂತೆ ಟ್ರಾಫಿಕ್ ಸ್ವಲ್ಪ ಕಡಿಮೆ ಆಯಿತು .ನನ್ನ ಬಸ್ ಏನೋ ಮುಂದೆ ಚಲಿಸಿತು .ಆದರೆ ಆ ವೃದ್ಧೆಯ ಮುಖ ಏಕೋ ಪದೇ ಪದೇ ನನ್ನ ಮನಸ್ಸಿನಲ್ಲಿ ಬಂದು ಹಾದು ಹೋಯಿತು …..

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ನಿಮ್ಮ ಸಾಲುಗಳನ್ನು ಓದುತ್ತಿದ್ದಂತೆ, ನಾವು ವೃದ್ಧರಾದರೆ ಹೇಗೋ ಎನ್ನಿಸಿ ಭಯವಾಯಿತು!
ಎಷ್ಟೋ ಸಲ ನಾವು ಅರಿತೋ ಅರಿಯದೆಯೋ ವ್ಯವಸ್ಥೆಯ ಭಾಗವಾಗಿಬಿಡುತ್ತೇವೆ...
ಕಾಲಾಯ ತಾಸ್ಮೈ ನಮಹ ಅಷ್ಟೇ!!!

ಮನಸಿನ ಮಾತುಗಳು ಹೇಳಿದರು...

ನಿಮ್ಮ ಮಾತುಗಳು ನೂರಕ್ಕೆ ನೂರು ಸತ್ಯ
ಧನ್ಯವಾದಗಳು ..:):)