ಮಂಗಳವಾರ, ಮೇ 26, 2009

ಆಯ್ಲು ಆಯ್ಲು ಮೊಬೈಲು ....!!!

ಅದೊಂದು ಸುಂದರವಾದ ಉಧ್ಯಾನವನ
ಸೂರ್ಯ ಮುಳುಗುವ ಸಮಯ..
ತಿಳಿಯಾದ ವಾತಾವರಣ…
ಒಳ ಹೊಕ್ಕರು ಒಂದು ಜೋಡಿ,
ಕೈ ಕೈ ಹಿಡಿದು ನಡೆಯುತ್ತಿದ್ದಾರೆ ....
ಅವಳು ಸುಂದರಿ ಎಲ್ಲರ ಕಣ್ಣು ಕೋರೈಸುವ ಚಲುವೆ,
ಅವನು ಸುಂದರಾಂಗ,
ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನಿಸುವ ಮೈಕಟ್ಟು…
ಇಬ್ಬರೂ ಅದೇನೋ ಜೋರಾಗಿ ಮಾತಾಡುತ್ತಿದ್ದರು
ಅದೇನು ನಗೆ, ಅದೇನು ಮಾತು..
ಅವರ ನೋಟ ದಿಗಂತದೆಡೆಗೆ…
ಒಟ್ಟಿಗೆ ಇದ್ದರು ಬಹಳ ಅಂತರವಿತ್ತು …
ಕಾರಣ ಮಾತುಗಳು, ಅವನಿಗೆ ಅವನ ಮೊ ಬೈಲಿನಲ್ಲಿ …!!!!
ಅವಳಿಗೆ ಅವಳ ಮೊಬೈಲಿನಲ್ಲಿ …!!!!

ಕಾಮೆಂಟ್‌ಗಳಿಲ್ಲ: